HomePage_Banner
HomePage_Banner
HomePage_Banner
HomePage_Banner

ಪುತ್ತೂರು ಶಿಬರದ ರೈತರ ತೋಟದಲ್ಲಿ ಗೇರು ಗಿಡಗಳ ಮೇಲಾವರಣ ನಿರ್ವಹಣೆಯ ಕ್ಷೇತ್ರಮಟ್ಟದ ತರಭೇತಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಗೇರು ಬೆಳೆಯು ಅತಿ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು ಅದರ ಹೆಚ್ಚಿನ ಇಳುವರಿಗೆ ಮೇಲಾವರಣದ ನಿರ್ವಹಣೆಯು ಪ್ರಮುಖ ಪಾತ್ರ  ಹೊಂದಿದೆ. ಆಝಾದಿ ಕಾ ಅಮೃತ ಮಹೋತ್ಸವ ದ ಅಂಗವಾಗಿ ಗೇರು ಗಿಡಗಳ ಮೇಲಾವರಣ ನಿರ್ವಹಣೆಯ ಕ್ಷೇತ್ರ ತರಭೇತಿ ಕಾರ್ಯಕ್ರಮವನ್ನು ಶ್ರೀ ವೇಣು ಗೋಪಾಲ ಕೆದಿಲಾಯ ಶಿಬರ ಪುತ್ತೂರು ಇವರ ಗೇರು ತೋಟದಲ್ಲಿ ಆಯೋಜಿಸಲಾಯಿತು.

ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿಗಳಾದ ಡಾ. ಜೆ ದಿನಕರ ಅಡಿಗ, ಪ್ರಧಾನ ವಿಜ್ಞಾನಿ, ತೋಟಗಾರಿಕೆ, ಡಾ. ಮುರುಳಿಧರ ಬಿ ಎಮ್. , ವಿಜ್ಞಾನಿ ತೋಟಗಾರಿಕೆ, ಡಾ. ಮಂಜೇಶ್ ಜಿ ಎನ್, ವಿಜ್ಞಾನಿ ತೋಟಗಾರಿಕೆ, ಡಾ. ಅಶ್ವಥಿ ಚಂದ್ರಕುಮಾರ್, ವಿಜ್ಞಾನಿ ಕೃಷಿ ವಿಸ್ತರಣೆ ಇವರುಗಳು ತರಭೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ದಿನಕರ ಅಡಿಗರವರು ಗೇರು ಗಿಡಗಳ ನೆಡುವಿಕೆ ಹಾಗು ಗಿಡಗಳ ಮೇಲಾವರಣ ನಿರ್ವಹಣೆಯ ಪ್ರಾಥಮಿಕ ಹಂತದ ಆಕಾರ ನೀಡುವಿಕೆ ಮತ್ತು ಸವರುವಿಕೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಈ ರೀತಿಯ ಆಕಾರ ನೀಡುವಿಕೆ ಹಾಗು ಸವರುವಿಕೆಯಿಂದ ಗೇರು ಗಿಡಗಳಲ್ಲಿ ಸೂರ್ಯನ ಕಿರಣಗಳು ಹಾಗು ಗಾಳಿಯ ಸಂಚಲನ ಸರಾಗವಾಗಿ ಇರುವುದರಿಂದ ಇದು ಗಿಡಗಳ ಇಳುವರಿಗೆ ಪೂರಕ ವಾತಾವರಣ ಕಲ್ಪಿಸುತ್ತದೆ ಎಂದು ತಿಳಿಸಿದರು. ಡಾ. ಮುರಳೀಧರ ಬಿ ಎಮ್ ರವರು ಗಿಡಗಳ ಸವರುವಿಕೆಗೆ ಸೂಕ್ತ ಕಾಲ ಹಾಗು ಸೂಕ್ತ ತಳಿಗಳ ಕುರಿತಾಗಿ ಮಾಹಿತಿಯನ್ನು ನೀಡಿದರು. ಜೊತೆಗೆ ಗೇರು ಬೆಳೆಯಲ್ಲಿ ಸಾಮಾನ್ಯ ಹಾಗು ಘನ ಸಾಂದ್ರ ಬೇಸಾಯ ಪದ್ಧತಿ, ಗೇರು ಗಿಡಗಳ ಕಸಿಕಡ್ಡಿಗಳ ಉತ್ಪಾದನೆಗಾಗಿ ಆಕಾರ ನೀಡುವಿಕೆ ಮತ್ತು ಸವರುವಿಕೆಯ ಪ್ರಯೋಜನದ ಕುರಿತಾಗಿ ಪ್ರಾಯೋಗಿಕವಾಗಿ ತರಭೇತಿಯನ್ನು ನೀಡಲಾಯಿತು.  ಅದರೊಂದಿಗೆ ರಾಂಬುಟಾನ್ ಗಿಡಗಳ ಮೇಲಾವರಣ ನಿರ್ವಹಣೆಯ ಕುರಿತಾಗಿ ಡಾ. ಮಂಜೇಶ್ ಜಿ ಎನ್ ರವರು ಪ್ರಾಯೋಗಿಕವಾಗಿ  ಪ್ರಾತ್ಯಕ್ಷಿತೆಯನ್ನು ನೀಡಿದರು.

ಈ ಕಾರ್ಯಕ್ರಮವನ್ನು ಡಾ. ಅಶ್ವಥಿ ಚಂದ್ರಕುಮಾರ್ ರವರು ನಿರ್ವಹಿಸಿದರು ಹಾಗು ತರಭೇತಿ ಕಾರ್ಯಕ್ರಮದಲ್ಲಿ ನಿರ್ದೇಶನಾಲಯದ ಸಿಬ್ಬಂದಿಗಳಾದ ಶ್ರೀ ನಾರಾಯಣ ನಾಯ್ಕ್ ಹಾಗು ಶ್ರೀ ನಾಗೇಶ್ ರವರು ಸಹಕರಿಸಿದರು.


About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.