HomePage_Banner
HomePage_Banner
HomePage_Banner
HomePage_Banner

ಹಿಂದಿ ಶಿಕ್ಷಕರ ಸಂಘದಿಂದ ಹಿಂದಿ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಹಿಂದಿ ಶಿಕ್ಷಕರ ಸಂಘ ಪುತ್ತೂರು ಇವುಗಳ ಜಂಟೀ ಆಶ್ರಯದಲ್ಲಿ ಹಿಂದಿ ದಿನಾಚರಣೆಯು ಸೆ.20 ರಂದು ಸಂತ ವಿಕ್ಟರಣ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ಭಾಷಾ ಶಿಕ್ಷಕರಿಗೆ ಭಾಷೆಯ ಕುರಿತು ಅಭಿಮಾನವಿರಬೇಕು. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಅದನ್ನು ಪರಿಣಾಮಕಾರಿಯಾಗಿ ಬೋಧನೆ ಮಾಡಿದಾಗ ಮಾತ್ರ ಅದರ ಮಹತ್ವ ಅರಿತುಕೊಂಡು ಉಳಿಸಲು ಸಾಧ್ಯ ಎಂದರು. ಮುಂದಿನ ದಿನಗಳಲ್ಲಿ ನಡೆಯುವ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಖಾಸಗಿ ಶಾಲಾ ಶಿಕ್ಷಕರನ್ನು ಜೋಡಿಸಿಕೊಳ್ಳಬೇಕು. ಮುಖ್ಯ ಅತಿಥಿ ಉಡುಪಿ ಜಿಲ್ಲಾ ನಿವೃತ್ತ ಉಪನಿರ್ದೇಶಕ ಶೇಷ ಶಯನ ಕಾರಿಂಜ ಮಾತನಾಡಿ, ವ್ಯವಹಾರಿಕವಾಗಿ ಹಿಂದಿ ಭಾಷೆಯು ಬಹಳಷ್ಟು ಪ್ರಾಮುಖ್ಯತೆ ಪಡೆಯುತ್ತಿದ್ದು, ಶಾಲೆಗಳಲ್ಲಿ ಹಿಂದಿಯನ್ನು ಕೇವಲ ಪರೀಕ್ಷೆಯ ದೃಷ್ಟಿಯಿಂದ ಕಲಿಸಿದರೆ ಸಾಲದು. ಹಿಂದಿ ಭಾಷೆಯನ್ನು ಸಂವಹನ ದೃಷ್ಟಿಯಿಂದ ಕಲಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಬಂಟ್ವಾಳ ಮಳಲ್ಲಿ ಶಾಲಾ‌‌ ಸಹ ಶಿಕ್ಷಕ ಮಹೇಶ್ ಆಚಾರ್ಯ ಮಾತನಾಡಿ ಹಿಂದಿ ಭಾಷೆಯ ಅಗತ್ಯತೆ ಮತ್ತು ಮಹತ್ವದ ಬಗ್ಗೆ ವಿವರಿಸಿದರು. ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷೆ ಗೀತಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಸಂಘದ ಗೌರವಾಧ್ಯಕ್ಷ ಅಬ್ರಹಾಂ,  ಸಂತ ವಿಕ್ಟರಣ ಬಾಲಿಕ ಪ್ರೌಢಶಾಲಾ ಮುಖ್ಯ ಗುರು ರೋಸ್ಲಿನ್ ಲೋಬೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಸನ್ಮಾನ 
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಉಡುಪಿ ಜಿಲ್ಲಾ ನಿವೃತ್ತ ಉಪನಿರ್ದೇಶಕ ಶೇಷ ಶಯನ ಕಾರಿಂಜ, ನಿವೃತ್ತ ಹಿಂದಿ ಶಿಕ್ಷಕರಾದ ಬೆಳಿಯೂರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಬಾಲಕೃಷ್ಣ ನಾಯಕ್ ಆಜೇರು, ಕೆಯ್ಯೂರು ಕೆ.ಪಿ.ಎಸ್ ಶಾಲಾ‌ ಜಗದೀಶ ಸನ್ಮಾನಿಸಲಾಯಿತು. ಮುಖ್ಯಗುರುಗಳಾಗಿ ಪದೋನ್ನತಿ ಪಡೆದ ಶ್ರೀಧರ ಗೌಡ, ಪ್ರೇಮ್ ಕುಮಾರ್, ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ಶಿಕ್ಷಕರಾಗಿ ಮುಂಭಡ್ತಿ ಪಡೆದ ಉದಯ ಕುಮಾರ್,‌ಪ್ರಾರ್ಥನಾ, ಶೈಲಶ್ರೀ, ಅಭಿದಿಸಲಾಯಿತು. ಸುಷ್ಮಾ ಬಳಗದವರು ಪ್ರಾರ್ಥಿಸಿದರು. ಸಂಘದ ಕೋಶಾಧಿಕಾರಿ ರೊನಾಲ್ಡೊ ಮೋನಿಸ್ ಸ್ವಾಗತಿಸಿದರು. ಸರಸ್ವತಿ ವರದಿ ವಾಚಿಸಿದರು. ರೆನಿಟಾ ಸುಷ್ಮಾ ಡಿ ಸೋಜಾ, ನಿರ್ಮಲಾ, ಸಂಧ್ಯಾ ರಾವ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಉಮೇರಾ ತಬ್ ಸ್ಸಮ್ ಸರ್ವೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.