HomePage_Banner
HomePage_Banner
HomePage_Banner
HomePage_Banner

ಬ್ರೈಟ್ ವೇ ಇಂಡಿಯಾ ಸಂಸ್ಥೆಯ ತಾಂತ್ರಿಕ ಸೇವೆಗೆ ಎಕ್ಸಲೆನ್ಸ್ ಅವಾರ್ಡ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್‌ ಇಂಡಿಯಾ ವತಿಯಿಂದ ನೀಡುವ 2021ನೇ ಸಾಲಿನ ಎಕ್ಸಲೆನ್ಸ್ ಅವಾರ್ಡ್ ಗೆ ಈ ಬಾರಿ ಮಂಗಳೂರಿನ ಬ್ರೈಟ್ ವೇ ಇಂಡಿಯಾ ಕನ್ಸಲ್ಟನ್ಸಿ ಸಂಸ್ಥೆಯು ಆಯ್ಕೆಯಾಗಿ‌ದ್ದು ಸೆ.18 ರಂದು ಗೋವಾದಲ್ಲಿ ನಡೆದ‌ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬ್ರೈಟ್ ವೇ ಇಂಡಿಯಾ ಸಂಸ್ಥೆಯ ಆಡಳಿತ ನಿರ್ದೇಶಕರಾದ ಹರ್ಷ ಕುಮಾರ ರೈ ಮಾಡಾವು ಹಾಗೂ ನಿರ್ದೇಶಕರಾದ ಮನಮೋಹನ ರೈ ಚೆಲ್ಯಡ್ಕ ಅವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದು ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಉದ್ಯಮವನ್ನು ವಿಸ್ತರಿಸಿಕೊಂಡಿದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಲ್ಲಿ ಗೋವಾ ಮುಖ್ಯ ಮಂತ್ರಿ ಡಾ. ಪ್ರಮೋದ್ ಸಾವಂತ್, ರಾಜ್ಯಪಾಲರಾದ ಶ್ರೀಧರನ್ ಪಿಳ್ಳೆ ಹಾಗೂ ಸಚಿವರಾದ ಡಾ. ಗೋವಿಂದ ಗೌಡೇ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಬ್ರೈಟ್ ವೇ ಇಂಡಿಯಾ ಸಂಸ್ಥೆಯ ಮುಖ್ಯ ಕಛೇರಿ ಮಂಗಳೂರಿನಲ್ಲಿದ್ದು, ಬೇರೆ ಬೇರೆ ಕಡೆಗಳಲ್ಲಿ ತಾಂತ್ರಿಕ ಸಿಬಂದಿಗಳನ್ನು ಹೊಂದಿ, ಪೆಟ್ರೋಲಿಯಂ ಹಾಗೂ ಗ್ಯಾಸ್ ಕಂಪೆನಿಗಳಿಗೆ ಮತ್ತು ನಿರ್ಮಾಣ ಸಂಸ್ಥೆಗಳಿಗೆ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.