HomePage_Banner
HomePage_Banner
HomePage_Banner
HomePage_Banner

ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳ ಎರಡು ಬಾರಿ ವಿಕಲಚೇತನರ ನ್ಯೂನ್ಯತಾ ಶಿಬಿರ ನಡೆಸುವುದರ ಬಗ್ಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ :  ಕಡಬ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 1334 ವಿಕಲಚೇತನರಿದ್ದು ಇವರಗೆ ಪ್ರಸ್ತುತ ವೈದ್ಯಕೀಯ ತಪಾಸಣೆ ಮಾಡಲು ದೂರದ ಪುತ್ತೂರು ತಾಲೂಕು ಆರೋಗ್ಯ ಕೇಂದ್ರಕ್ಕೆ ಹೋಗುವ ಅನಿವಾರ್ಯತೆ ಇದ್ದು ಕಳೆದ ಎರಡು ವರ್ಷದಿಂದ ಮಹಾಮಾರಿ ಕೊರೋನದ ಆತಂಕದ ಪರಿಸ್ಥಿತಿಯ ಜೊತೆಗೆ ಸಮಯಕ್ಕೆ ತಕ್ಕಂತೆ ಕಡಬ ತಾಲೂಕಿನ ಹೆಚ್ಚಿನ ಗ್ರಾಮಗಳಿಂದ ಬಸ್ಸಿನ ವ್ಯವಸ್ಥೆ ಇಲ್ಲದೆ ಪುತ್ತೂರಿನಲ್ಲಿ ನಡೆಯುವ ವೈದ್ಯಕೀಯ ನ್ಯೂನ್ಯತಾ ಶಿಬಿರದಲ್ಲಿ ಹಾಜರಾಗಲು ಅಸಾಧ್ಯವಾಗಿರುತ್ತದೆ.

ಈಗಾಗಲೇ ಕಡಬ ತಾಲೂಕು ಕೇಂದ್ರವಾಗಿದ್ದು, ವಿಕಲಚೇತನರಿಗೆ ವೈದ್ಯಕೀಯ ನ್ಯೂನ್ಯತಾ ಶಿಬಿರ ನಡೆಸಲು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಸಜ್ಜಿತವಾದ ಕೊಠಡಿಗಳ ವ್ಯವಸ್ಥೆ ಇದ್ದು, ಇದಕ್ಕೆ ಪೂರಕವಾಗಿ ವಿಕಲಚೇತನರ ತಪಾಸಣೆ ನಡೆಸಲು ಕೂಡಲೇ 1) ಮನೋರೋಗ್ಯ ತಜ್ಞರು 2)ನೇತ್ರ ತಜ್ಞರು3 ) ಶ್ರವಣ ದೋಷ ತಜ್ಞರು 4 ) ದೈಹಿಕ(ಎಲುಬು) ಮತ್ತು ಕೀಲು ತಜ್ಞರು 5)ನರರೋಗ ತಜ್ಞರು, 6)ಮಕ್ಕಳ ತಜ್ಞರನ್ನು ನೇಮಿಸಬೇಕಾಗಿ ಈಗಾಗಲೇ ಪುತ್ತೂರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಮುಖಾಂತರ ದ. ಕ ಜಿಲ್ಲೆಯ ವಿಕಲಚೇತನರ ಕಲ್ಯಾಣಾಧಿಕಾರಿಗಳಿಗೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ವಿಕಲಚೇತನರ ಪರವಾಗಿ ಕಡಬ ತಾಲೂಕು ಎಮ್.ಆರ್.ಡಬ್ಲ್ಯೂ ಅಕ್ಷತಾ. ಎ, ವಿ.ಆರ್.ಡಬ್ಲ್ಯೂಗಳಾದ ವಿಜಯ್ ಕುಮಾರ್ ಮತ್ತು ಸಂತೋಷ್.ಪಿ ಮನವಿ ನೀಡುವಲ್ಲಿ ಸಹಕರಿಸಿದರು. ಮನವಿಯನ್ನು ಪ್ರಥಮ ದರ್ಜೆ ಸಹಾಯಕಾರಾದ ಸರೋಜಿನಿ ಅವರು ತಾಲೂಕು ಆರೋಗ್ಯ ಅಧಿಕಾರಿ ದೀಪಕ್.ರೈ ಅವರ ಪರವಾಗಿ ಮನವಿ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.