HomePage_Banner
HomePage_Banner
HomePage_Banner
HomePage_Banner

ಉದ್ಯೋಗ ನೈಪುಣ್ಯ ಪುಸ್ತಕಗಳ ಲೋಕಾರ್ಪಣೆ ಮತ್ತು ನೈಪುಣ್ಯ ಸಾಧಕರ ಸಮ್ಮಿಲನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

                     ರಾಷ್ಟ್ರೀಯ ಹಿತದೃಷ್ಟಿಯಿಂದ ಬೆಳೆದ ಸಂಸ್ಥೆಯಿಂದ ಮಾತ್ರ ಸ್ವಾವಲಂಬಿಯನ್ನಾಗಿ ಮಾಡಲು ಸಾಧ್ಯ – ಶೋಭಾ ಕರಂದ್ಲಾಜೆ

ಪುತ್ತೂರು: ಗ್ರಾಮವಿಕಾಸ ಸಮಿತಿ ಮಂಗಳೂರು ವಿಭಾಗ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಸಹಯೋಗದಲ್ಲಿ ಉದ್ಯೋಗ ನೈಪುಣ್ಯ ಪುಸ್ತಕಗಳ ಲೋಕಾರ್ಪಣೆ ಮತ್ತು ನೈಪುಣ್ಯ ಸಾಧಕರ ಸಮ್ಮಿಲನವು ಸೆ.೨೦ ರಂದು ವಿವೇಕಾನಂದ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆಯಿತು.

ಭಾರತದ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ಕಾರ್ಯಕ್ರಮ ಉದ್ಘಾಟಿಸಿ ಸ್ವಯಂ ಉದ್ಯೋಗ ನೈಪುಣ್ಯತೆ ಉತ್ಪನ್ನಗಳ ಪುಸ್ತಕ ಬಿಡುಗಡೆ ಮಾಡಿದರು. ಇದೆ ಸಂದರ್ಭದಲ್ಲಿ ಆಯ್ದ ೮೦ ಮಂದಿ ಉದ್ಯೋಗನೈಪುಣ್ಯತೆಯ ಸಾಧಕರನ್ನು ಗೌರವಿಸಲಾಯಿತು. ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ ಸರಕಾರದ ಉಚಿತ ಕಿಟ್ ಗಳಿಗಾಗಿ ಸಂಘ ಸಂಸ್ಥೆಗಳು ಅರ್ಜಿ ಹಾಕುವಂತಹ ಸಂದರ್ಭದಲ್ಲಿ ರಾಷ್ಡ್ರೀಯ ಹಿತದೃಷ್ಟಿಯಿಂದ ಬೆಳೆದ ಸಂಸ್ಥೆ ಸ್ವ ಉದ್ಯೋಗದ ಮೂಲಕ ದೇಶಕ್ಕೆ ಸ್ವಾವಂಭಿಗಳನ್ನು ನೀಡುವ ಮೂಲಕ ವಿವೇಕಾನಂದ ವಿದ್ಯಾ ಸಂಸ್ಥೆ ಮಹತ್ವದ ಕೆಲಸ ಮಾಡಿದೆ.ಸರಕಾರದ ಸಹಾಯ ಇಲ್ಲದಿದ್ದರೂ ಕೂಡಾ ದೇಶಕ್ಕೆ ಸೇವೆ ಮಾಡಿದ ವಿವೇಕಾನಂದ ಕಾಲೇಜು ಒಂದು ನೋಡೆಲ್ ಸಂಸ್ಥೆಯನ್ನಾಗಿ ಮಾಡಬೇಕಾಗಿದೆ ಎಂದರು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಹಿಸಿದ್ದರು. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ, ಕ್ಯಾಂಪ್ಕೋ ನಿಯಮಿತದ ಅಧ್ಯಕ್ಷರಾದ ಕಿಶೋರ್ ಕೋಡ್ಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಕಾರ್ಯವಾಹರು ಮತ್ತು ಹೊಸದಿಗಂತ ದಿನಪತ್ರಿಕೆಯ ಮುಖ್ಯ ನಿರ್ವಹಣಾಧಿಕಾರಿಯಾದ ಪ್ರಕಾಶ್ ಪಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಗೋಪಿನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ನೈಪುಣ್ಯ ತರಬೇತಿ ಮಾಹಿತಿ ನೀಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ. ಯಂ. ಕೃಷ್ಣ ಭಟ್ ಸ್ವಾಗತಿಸಿದರು. ಉಷಾಕಿರಣ್, ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.



About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.