HomePage_Banner
HomePage_Banner
HomePage_Banner
HomePage_Banner

ಪೆರಾಬೆ ಗ್ರಾ.ಪಂ ಹಸಿ ಮೀನು ಮಾರುಕಟ್ಟೆ ದಾಖಲೆ ಮೊತ್ತಕ್ಕೆ ಹರಾಜು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಪೆರಾಬೆ ಗ್ರಾ.ಪಂ ವ್ಯಾಪ್ತಿಯಲ್ಲಿ ಹಸಿಮೀನು ಮಾರಾಟದ ಬಹಿರಂಗ ಏಲಂ ಗ್ರಾ.ಪಂ ಅಧ್ಯಕ್ಷರಾದ ಚಂದ್ರಶೇಖರ ರೈ ಅಗತ್ತಾಡಿಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಾಲಿನಿ ಹಸಿ ಮೀನು ಮಾರಾಟದ ಷರತ್ತುಗಳನ್ನು ಸಭೆಗೆ ತಿಳಿಸಿದರು.ಇದೇ ಸಂಧರ್ಭ ದಲ್ಲಿ ಕಳೆದ ಸಾರಿ ಹಸಿ ಮೀನು ಮಾರಾಟದ ಬಹಿರಂಗ ಏಲಂ ನ ಹಕ್ಕನ್ನು ಪಡೆದುಕೊಂಡ ಮುಸ್ತಾಪ ಉಪ್ಪಿನಂಗಡಿ ಯವರು ಕಳೆದ ಸಾರಿ ಲಾಕ್ ಡೌನ್ ಸಂಧರ್ಭದಲ್ಲಿ ನನಗೆ ನಷ್ಟ ಉಂಟಾಗಿದ್ದು ಈ ಬಗ್ಗೆ ಪಂಚಾಯತ್ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು ಇದಕ್ಕೆ ಪ್ರತಿಕ್ರಯಿಸಿದ ಅಧ್ಯಕ್ಷರು ಇದಕ್ಕೆ ಪರಿಹಾರರ್ಥಕ ವಾಗಿ ಏಲಂ ನ್ನು ಒಂದು ತಿಂಗಳು ಮುಂದೂಡಿ ಇದೀಗ ಬಹಿರಂಗ ಏಲಂ ನಡೆಸಿರುವುದಾಗಿ ತಿಳಿಸಿದರು. ಇದೇ ಸಂಧರ್ಭದಲ್ಲಿ ಸೇರಿದ ಬಿಡ್ಡುದಾರರು ಪಂಚಾಯತ್ ವತಿಯಿಂದ ನಾಲ್ಕು ಹಸಿ ಮೀನು ಮಾರುಕಟ್ಟೆ ಮಾಡಿ ಪಂಚಾಯತ್ ವತಿಯಿಂದ ಸುಂಕ ವಸೂಲಾತಿ ಮಾಡುವಂತೆ ಸಲಹೆ ನೀಡಿದರು ಇದರಿಂದಾಗಿ ಉತ್ತಮ ಗುಣ ಮಟ್ಟದ ಹಸಿ ಮೀನು ಗ್ರಾಮಸ್ಥರಿಗೆ ಸಿಗುವಂತಾಗುತ್ತದೆ ಎಂದು ಬಿಡ್ಡುದಾರರು ಅಧ್ಯಕ್ಷರಿಗೆ ತಿಳಿಸಿದರು.ಈ ಬಗ್ಗೆ ಮುಂದಕ್ಕೆ ಗಮನಹರಿಸುವುದಾಗಿ ತಿಳಿಸಿದರು ನಂತರ ಬಹಿರಂಗ ಹಸಿ ಮೀನು ಮಾರಾಟದ ಹಕ್ಕಿನ ಬಹಿರಂಗ ಏಲಂ ಪ್ರಕ್ರಿಯೆ ನಡೆಯಿತು.ಪಂಚಾಯತ್ ಕನಿಷ್ಟ ಬಿಡ್ಡು ರೂ 60,000 ದಿಂದ ಬಹಿರಂಗ ಏಲಂ ಪ್ರಕ್ರಿಯೆ ನಡೆಯಿತು. ಬಿಡ್ಡುದಾರರಾಗಿ ಅಬ್ದುಲ್ ಮುತಾಲಿಕ್ ,ಮುಸ್ತಾಫ .ಕೆ .ಉಪ್ಪಿನಂಗಡಿ, ಅದಂ .ಎಚ್ ಅತೂರು, ಅಬ್ದುಲ್ ಖಾದರ್ ಉಪ್ಪಿನಂಗಡಿ, ಇಬ್ರಾಹಿಂ ಕೋಚಕಟ್ಟೆ, ಚಿದಾನಂದ ಕೆದಿಲ,ಸತೀಶ್ ರೈ ಬೇಳ್ಪಾಡಿ,ಕೆ.ಮಹಮ್ಮದ್,ಪಯಾಝ್ ಕಡಬ, ರಾಧಾಕೃಷ್ಣ,ಸುದೀರ್ ಬುಡೇರಿಯಾ ಆಲಂಕಾರು ಭಾಗವಹಿಸಿದ್ದರು. ಅಂತಿಮವಾಗಿ ಉಪ್ಪಿನಂಗಡಿಯ ಮುಸ್ತಾಫ .ಕೆ ಯವರು 3,03,000 ಕ್ಕೆ ಗರಿಷ್ಟ ಮೊತ್ತಕ್ಕೆ ಹಸಿ ಮೀನು ಮಾರಾಟದ ಹಕ್ಕನ್ನು ಬಹಿರಂಗ ಏಲಂ ನಲ್ಲಿ ಪಡೆದುಕೊಂಡರು. ಕಳೆದ ವರ್ಷ 2 ಲಕ್ಷಕ್ಕೆ ಹರಾಜುಕೊಂಡಿದ್ದ ಮಾರುಕಟ್ಟೆ ಈ ಸಾರಿ 3,03,000 ಕ್ಕೆ ದಾಖಲೆ ಮೊತ್ತಕ್ಕೆ ಹರಾಜುಗೊಂಡಿದೆ. ಈ ಬಹಿರಂಗ ಹರಾಜಿನ ವ್ಯವಸ್ಥೆಯಿಂದಾಗಿ ಪೆರಾಬೆ ಗ್ರಾ.ಪಂ ವ್ಯಾಪ್ತಿಯ 6 ಮಂದಿ ತಮ್ಮ ಸ್ವಂತ ಉದ್ಯೋಗದ ನಿಮಿತ್ತ ಏಲಂ ನಲ್ಲಿ ಪಾಲ್ಗೊಂಡಿದ್ದು ಬಹಿರಂಗ ಹರಾಜು ಪ್ರಕ್ರಿಯೆ ಯಿಂದಾಗಿ ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿಯೇ ಹಸಿಮೀನು ಮಾರಾಟ ಮಾಡಲು ವಂಚಿತರಾಗಿರುವುದಕ್ಕೆ ಗ್ರಾಮ ಪಂಚಾಯತ್ ನ ಕ್ರಮದ ಮೇಲೆ ಅಸಮಾಧಾನ ವ್ಯಕ್ತವಾಗಿದೆ. ಅಭಿವೃದ್ದಿ ಅಧಿಕಾರಿ ಶಾಲಿನಿ ಸ್ವಾಗತಿಸಿ,ದನ್ಯವಾದ ಸಮರ್ಪಿಸಿದರು,ಪಂಚಾಯತ್ ಉಪಾಧ್ಯಕ್ಷೆ ಸಂಧ್ಯಾ,ಪಂಚಾಯತ್ ಸದಸ್ಯರಾದ ಮೋಹನದಾಸ ರೈ ಪರಾರಿಗುತ್ತು, ಕೃಷ್ಣ, ವೈ, ಮಮತಾ ಶೆಟ್ಟಿ,ಸುಶೀಲಾ, ಮೇನ್ಸಿಸಾಜನ್, ಉಪಸ್ಥಿತರಿದ್ದರು. ಪಂಚಾಯತ್ ಬಿಲ್ಲ್ ಕಲೆಕ್ಟರ್ ಪದ್ಮಾವತಿ, ಹಾಗು ಇನ್ನಿತರ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.