HomePage_Banner
HomePage_Banner
HomePage_Banner
HomePage_Banner

ಕೋಡಿಂಬಾಡಿಯಲ್ಲಿ ಸುದ್ದಿ ಬಿಡುಗಡೆಯ ಗ್ರಾಮ ಸ್ವರಾಜ್ಯ ರಥಕ್ಕೆ ಸ್ವಾಗತ: ಜನಜಾಗೃತಿ ಮೂಡಿಸುವ ಉತ್ತಮ‌ ಕಾರ್ಯಕ್ರಮ- ರಾಮಚಂದ್ರ ಪೂಜಾರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ಯು.ಪಿ.ಶಿವಾನಂದರವರ ನೇತೃತ್ವದಲ್ಲಿ ಸುದ್ದಿ ಬಳಗದಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ ಶಾಂತಿನಗರರವರು ಹೇಳಿದರು.
ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಸುದ್ದಿ ಬಿಡುಗಡೆ ನೇತೃತ್ವದಲ್ಲಿ ತಾಲೂಕಿನಾದ್ಯಂತ ಸಂಚರಿಸಲಿರುವ ಗ್ರಾಮ‌ ಸ್ವರಾಜ್ಯ ರಥವನ್ನು ಕೋಡಿಂಬಾಡಿ ಗ್ರಾ.ಪಂ. ಕಛೇರಿಯಲ್ಲಿ ಸ್ವಾಗತಿಸಿದ ರಾಮಚಂದ್ರ ಪೂಜಾರಿರವರು, ಗ್ರಾಮ ಸ್ವರಾಜ್ಯ ರಥದ ಮೂಲಕ ರಾಮ ರಾಜ್ಯದ ಆಶಯ ಈಡೇರಿಸುವಂತಹ ಉತ್ತಮ‌ ಕಾರ್ಯವನ್ನು ಸುದ್ದಿ ಬಳಗ ಮಾಡುತ್ತಿದೆ ಎಂದರು. ಸುದ್ದಿಯ ಸಮಾಜಮುಖಿ‌ ಕಲ್ಪನೆಗಳಲ್ಲಿ ಇದೂ ಒಂದಾಗಿದೆ, ಗಾಂಧೀಜಿಯವರ ಆಶಯವನ್ನು ತಳಮಟ್ಟಕ್ಕೂ ತಲುಪಿಸಲು ಜನಜಾಗೃತಿ ಮೂಡಿಸುವ ವಿಶಿಷ್ಟ ಕಾರ್ಯಕ್ರಮವನ್ನು ಸುದ್ದಿ ಬಳಗ ಆಯೋಜಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.‌
ಗ್ರಾಮ ಪಂಚಾಯತ್ ಪಿಡಿಓ ಚಿತ್ರಾವತಿ, ಕಾರ್ಯದರ್ಶಿ ರಮೇಶ್ ಕೆ, ಸಿಬ್ಬಂದಿಗಳಾದ ಸುರೇಶ್ ನಾಯ್ಕ ಕಿನ್ನಿತಪಳಿಕೆ, ಸುರೇಶ್ ಕೆ,‌ ಕಾವ್ಯ ಶೆಟ್ಟಿ, ರೀತಾ, ಗ್ರಂಥಪಾಲಕಿ‌ ಕುಸುಮ ವಿ.ರೈ, ಕೃಷಿಕ ಸುಬ್ರಹ್ಮಣ್ಯ ಶೆಟ್ಟಿ ರೆಂಜಾಜೆರವರು ರಥವನ್ನು‌ ಬರಮಾಡಿಕೊಂಡರು.
ಸುದ್ದಿ ನ್ಯೂಸ್ ಚಾನೆಲ್ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.‌ ಪ್ರಧಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ, ಸುದ್ದಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಫಾರೂಕ್ ಶೇಕ್ ಮುಕ್ವೆ, ಸುದ್ದಿ ಬಳಗದ ವಸಂತ ಸಾಮೆತ್ತಡ್ಕ ಮತ್ತು ರಮೇಶ್ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.‌

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.