HomePage_Banner
HomePage_Banner
HomePage_Banner
HomePage_Banner

ನಂಜನಗೂಡಿನಲ್ಲಿ ದೇವಸ್ಥಾನ ತೆರವುಗೊಳಿಸಿರುವುದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಮೈಸೂರಿನ ನಂಜನಗೂಡಿನಲ್ಲಿ ದೇವಸ್ಥಾನ ತೆರವುಗೊಳಿಸಿದ ಬಿಜೆಪಿ ಸರಕಾರದ ವಿರುದ್ದ ಮತ್ತು ಸರ್ವ ಧರ್ಮಿಯರ ಧಾರ್ಮಿಕ ಕೇಂದ್ರಗಳನ್ನು ಉಳಿಸಿವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್‌ನಿಂದ ಸೆ.20 ರಂದು ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್‌ರವರು, ತಾಲಿಬಾನ್ ಎಂದರೆ ಕುರಾನ್ ವಕ್ತಾರ ಅಲ್ಲ. ಮುಸ್ಲಿಂ ಧರ್ಮವೂ ಅಲ್ಲ್ಲದೇ ರೀತಿ ಬಿಜೆಪಿ ಎಂದರೆ ಹಿಂದೂ ಧರ್ಮವಲ್ಲ. ಧರ್ಮದ ಹೆಸರಿನಲ್ಲಿ ಅಧಿಕಾರ ಪಡೆದವರು ಧರ್ಮ ಭಕ್ಷಕರು. ಬಿಜೆಪಿಯವರ ಆಡಳಿತದಿಂದ ಧರ್ಮಕ್ಕೂ ಉಳಿಗಾಲವಿಲ್ಲ. ಧರ್ಮ ಕ್ಷೇತ್ರಗಳಿಗೂ ಉಳಿಗಾಲವಿಲ್ಲ ಎಂದರು. ಇಲ್ಲಿನ ಶಾಸಕ ಸಂಜೀವ ಮಠಂದೂರುರವರ ಹೆಸರಿನಲ್ಲಿಯೇ ಮಠವಿದೆ. ಆದರೂ ಅವರ ಸರಕಾರ ಮಠ, ಮಂದಿರಗಳನ್ನು ತೆರವುಗೊಳಿಸುತ್ತಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಹೆಸರಿನಲ್ಲಿರುವ ಕಟೀಲ್ ಅವರ ಸಂಬಂಧವೇ ಇಲ್ಲ. ಪಂಪ್‌ವೆಲ್ ಪ್ಲೈ ಓವರ್ ಅವರ ಜೀವ ಮಾನದ ಸಾಧನೆ. ಕಟೀಲು ದೇವಿಯ ಮೇಲಿನ ಭಕ್ತಿ ಶ್ರದ್ದೆಯು ನಳಿನ್ ಕುಮಾರ್‌ಗೆ ನಂಜನಗೂಡಿನ ಮಾದೇವಮ್ಮನ ಮೇಲೂ ಇರಲಿ. ನಳಿನ್ ಕುಮಾರ್ ಹೆಸರಿನೊಂದಿಗಿರುವ ಕಟೀಲ್ ಅವರಿಗೆ ಸೂಕ್ತವಲ್ಲ. ಅವರ ಹೆಸರನ್ನು ನಳಿನ್ ಕುಮಾರ್ ಪಂಪ್‌ವೆಲ್ ಎಂದು ಮರುನಾಮಕರಣ ಮಾಡಬೇಕು. ಬಿಜೆಪಿ ಪ್ರತಿಪಕ್ಷದಲ್ಲಿದ್ದಾಗ ದೇವಸ್ಥಾನ ತೆರವಾದರೆ ಅಗ ಧರ್ಮದ ರಕ್ಷಣೆ, ಅವರೇ ಅಧಿಕಾರದಲ್ಲಿರುವಾಗ ತೆರವುಗೊಳಿಸದರೆ ಧರ್ಮದ ಭಕ್ಷಣೆ. ಬೇರೆ ಯಾವುದೇ ಪಕ್ಷ ಆಡಳಿತದಲ್ಲಿರುವಾಗ ದೇವಸ್ಥಾನ ತೆರವುಗೊಳಿಸುತ್ತಿದ್ದರೆ ನಳಿನ್ ಕುಮಾರ್ ಚರ್ಮ ಹರಿದುಹೋಗುವ ರೀತಿಯಲ್ಲಿ ಉರುಳುಸೇವೆ ನಡೆಸುತ್ತಿದ್ದರು ಎಂದು ಲೇವಡಿ ಮಾಡಿದರು.



ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ ಬಿಜೆಪಿ ಸರಕಾರದ ವಿರುದ್ದ ಕಿಡಿಕಾರಿದರು. ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ನಗರ ಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಶಾರದಾ ಅರಸ್, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನ್ಯಾಯವಾದಿ ಸಾಹಿರಾ ಝುಬೈರ್, ಸೇವಾ ದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ ಸೋಜ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ರೋಷಣ್ ರೈ ಬನ್ನೂರು, ರಾಮಚಂದ್ರ ಅಮಳ, ಯಾಕೂಬ್ ಮುಲಾರ್, ಪ್ರಜ್ವಲ್ ರೈ ತೊಟ್ಲ, ಮೌರೀಸ್ ಮಸ್ಕರೇನಸ್, ಮಹಾಬಲ ರೈ ವಳತ್ತಡ್ಕ, , ರಾಮ ಮೇನಾಲ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.