ಅಷ್ಟ ಭಾಷಾ ವಿದ್ವಾಂಸ, ನಿಘಂಟು ತಜ್ಞ, ಸಂಶೋಧಕ, ಸಾಹಿತಿ ಡಾ| ಪದ್ಮನಾಭ ಕೇಕುಣ್ಣಾಯರಿಗೆ `ಪ್ರೊ| ಮರಿಯಪ್ಪ ಭಟ್ಟ ನಿಘಂಟು ಪ್ರಶಸ್ತಿ’

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಷ್ಟ ಭಾಷಾ ವಿದ್ವಾಂಸ, ನಿಘಂಟು ತಜ್ಞರೂ ಆಗಿರುವ ಸಂಶೋಧಕ, ಸಾಹಿತಿ ಡಾ|ಪದ್ಮನಾಭ ಕೇಕುಣ್ಣಾಯ ಅವರನ್ನು ಪ್ರತಿಷ್ಠಿತ ಮಿತ್ತೂರು ಸಂಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರೊ|ಮರಿಯಪ್ಪ ಭಟ್ಟ ನಿಘಂಟು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಸೆ.23ರಂದು ಕಬಕ ಪೋಳ್ಯ ಮಠದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಪುತ್ತೂರು: ಅಷ್ಟ ಭಾಷಾ ವಿದ್ವಾಂಸ, ನಿಘಂಟು ತಜ್ಞರೂ ಆಗಿರುವ ಸಂಶೋಧಕ, ಸಾಹಿತಿ ಡಾ|ಪದ್ಮನಾಭ ಕೇಕುಣ್ಣಾಯ ಅವರನ್ನು ಪ್ರತಿಷ್ಠಿತ ಮಿತ್ತೂರು ಸಂಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರೊ|ಮರಿಯಪ್ಪ ಭಟ್ಟ ನಿಘಂಟು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಸೆ.23ರಂದು ಕಬಕ ಪೋಳ್ಯ ಮಠದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪಿಲಿಂಬಳ ಭಟ್ಟರೆಂದೇ ಮನೆಮಾತಾದ ವೇ|ಮೂ| ಕಡುಮನಡ್ಕ ಗೋಪಾಲಕೃಷ್ಣ ಕೇಕುಣ್ಣಾಯ – ಗಂಗಮ್ಮ ದಂಪತಿಯ ಪತ್ರನಾಗಿ 1957ರಲ್ಲಿ ಕೇರಳ ರಾಜ್ಯದ ಅಂದಿನ ಕಾಸರಗೋಡು ತಾಲೂಕಿನ ಕಡುಮನಡ್ಕದಲ್ಲಿ ಪದ್ಮನಾಭ ಕೇಕುಣ್ಣಾಯರ ಜನನ. ಪ್ರಾಥಮಿಕ-ಮಾಧ್ಯಮಿಕ ವಿದ್ಯಾಭ್ಯಾಸವನ್ನು ಅಲ್ಲಿಯೇ ಪರೈಸಿ ಮುಂದೆ ಕರ್ನಾಟಕಕ್ಕೆ ಪ್ರವೇಶ. ಪತ್ತೂರಿನ ಕಾಲೇಜಿನಲ್ಲಿ ಬಿ.ಎ. ಪದವಿ ವ್ಯಾಸಂಗ. ಕನ್ನಡ ಎಂ.ಎ. ಸ್ನಾತಕೋತ್ತರ ಶಿಕ್ಷಣಕ್ಕಾಗಿ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಪಯಣ. ಅಲ್ಲಿಂದ ಹೊರಬಂದಾಗ ಪ್ರಥಮ ರ‍್ಯಾಂಕ್ ಗಳಿಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದವರು.
ಪದ್ಮನಾಭರ ಮಡದಿ ಸ್ವರ್ಣಲತಾ. ಇವರಿಗೆ ಕಂಪಟರ್ ಕಾರ್ಯನಿರ್ವಹಣೆಯೆಲ್ಲ ಸುಲಲಿತ. ಮೊದಲ ಪತ್ರಿ ನಮಿತಗಂಗಾ. ತಂತ್ರಾಂಶ ಕಂಪೆನಿಯಲ್ಲಿ ತಂತ್ರಜ್ಞೆ. ಚೆಲ್ಲುಮಾತಿನ ಚತುರೆ. ದ್ವಿತೀಯ ಪತ್ರಿ ಕವಿತಾ. ಯೋಗಪ್ರವೀಣೆ. ಮೊಗದಲ್ಲಿ ಸದಾ ತಿಳಿನಗೆಯ ಲಾಸ್ಯ.

ವೃತ್ತಿ ಮತ್ತು ಸೇವೆ:- ಸಾಂಸ್ಕೃತಿಕ ನಗರಿಯೆಂದೇ ಪ್ರಖ್ಯಾತವಾಗಿರುವ ಉಡುಪಿಗೆ ಆಗಮಿಸಿದ ಪದ್ಮನಾಭರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ತುಳು ನಿಘಂಟು ತಯಾರಿಯಲ್ಲಿ ಉಪಸಂಪಾದಕರಾಗಿ ಸೇರಿಕೊಂಡರು. ಜೊತೆಗೆ ಇಲ್ಲಿಯ ಸಂಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿಯೂ ಸೇವೆಗೈದರು.
ಬಳಿಕ ಉಡುಪಿಯಲ್ಲಿ ’ನವದುರ್ಗಾ ಲೇಸರ್‌ಟೆಕ್’ ನಾಮಾಂಕಿತ ಕಂಪಟರ್ ಕಾರ್ಯ, ಅಕ್ಷರ ವಿನ್ಯಾಸ, ಮುದ್ರಣ, ಲಿಪಿಕಾರಿಕೆ ಪ್ರಾರಂಭಿಸಿ ಲೇಖಕ-ಸಾಹಿತಿಗಳನ್ನು ತನ್ನತ್ತ ಸೆಳೆದರು. ಇಂದು ಎಂಟು ಭಾಷೆಗಳಲ್ಲಿ ಕಂಪಟರ್ ಅಕ್ಷರ ಸಂಯೋಜನೆ ನಡೆಯುತ್ತಿದೆ.
ಇತರ DTP ನಿರ್ವಾಹಕರಿಗಿಂತ ಪದ್ಮನಾಭರು ಭಿನ್ನ. ವಿವಿಧ ಭಾಷೆಗಳ ಆಳವಾದ ಅರಿವು, ಭಾಷಾ ಹಿಡಿತ, ಸಂಯೋಜನಾ ಕೌಶಲ್ಯ, ವ್ಯಾಕರಣ ಶುದ್ಧಿ, ಪರಿಪರ್ಣತೆಗೆ ನೀಡುವ ಆದ್ಯತೆ, ತಪ್ಪ ನುಸುಳದಂತೆ ವಹಿಸುವ ಜಾಗ್ರತೆ-ಇವೆಲ್ಲ ಪರಿಣತಿಯಿಂದ ಲೇಖಕರಿಗೆ ಪ್ರಫ್ ರೀಡಿಂಗ್‌ನ ಅಗತ್ಯವೇ ಬಾರದಂತೆ ಪಟಗಳನ್ನು ಮುದ್ರಿಸಿಕೊಡುವ ವೃತ್ತಿಪರತೆ ಇವರದ್ದು.

ಮೇರುಸಾಧನೆ:- ಇತ್ತೀಚೆಗೆ ನಿಟ್ಟೆ ವಿಶ್ವವಿದ್ಯಾನಿಲಯದವರು ಪ್ರಾಯೋಜಿಸಿದ ತುಳು ಜ್ಞಾತಿ ಪದಸಂಚಯ (ಇದು ಸಪ್ತ ಭಾಷೆಗಳ ಬೃಹನ್ನಿಘಂಟು) ರಚನೆಯಲ್ಲಿ ಇವರು ಪ್ರಧಾನ ಸಂಪಾದಕರು. ಇದು, ಒಂದು ಪದಕೋಶ ನಿರ್ಮಾಣದ ಎಲ್ಲ ಎಲ್ಲೆಗಳನ್ನೂ ವಿಸ್ತರಿಸಿಕೊಂಡು ಪ್ರತಿ ಪದಕ್ಕೂ ಆರು ಭಾಷೆಗಳ ಸಮಾನಾರ್ಥಗಳನ್ನು ನೀಡುವ ಬೃಹತ್ ಗ್ರಂಥವೇ ಆಗಿದೆ. ಈ ಮಹಾನ್ ಕೃತಿ ರಚನೆಯಲ್ಲಿ ಪದ್ಮನಾಭರ ಕಾರ್ಯದಕ್ಷತೆ ಎದ್ದುಕಾಣುವಂತಿದೆ. ಪರಿಣಾಮವಾಗಿ ಒಂದು ಪರಿಪರ್ಣ ಪದಕೋಶದ ಅನಾವರಣ. ಇದು ಪದ್ಮನಾಭರ ಜ್ಞಾನಭೌಮತೆಗೆ ಯೋಗ್ಯ ನಿದರ್ಶನ. ಆ ಕಡೆ ಅಕ್ಷರಗರ್ಭದಿಂದ ಆವಿರ್ಭವಿಸಿದ ಸುಂದರ ಪದಕೋಶ. ಈ ಕಡೆ ಆ ಕೃತಿ ರಚನೆಯಲ್ಲಿ ಮುಳುಗಿ, ಪಳಗಿ, ಇನ್ನಷ್ಟು ಬೆಳಗಿದ ಪದ್ಮನಾಭರ ಜ್ಞಾನಮಯ ಅನುಭವಕೋಶ!

ಪ್ರಕಟಗೊಂಡ ಕೃತಿಗಳು:- 1) ಇವರು ಬರೆದ “A Comparative Study of Tulu Dialects” ಎಂಬ ಮಹಾಪ್ರಬಂಧಕ್ಕೆ ಇವರಿಗೆ Ph.D. ಪದವಿ ದೊರಕಿದೆ. ಈ ಕೃತಿಗೆ ತುಳು ಸಾಹಿತ್ಯ ಅಕಾಡೆಮಿ ಂಯಿಂದ ಅತ್ಯುತ್ತಮ ಪಸ್ತಕ ಬಹುಮಾನವೂ ಲಭಿಸಿದೆ. 2) ಆಗಸ್ಟ್ ಮ್ಯಾನರ್ (ಜರ್ಮನ್ ನಿಘಂಟುಕಾರನ ವ್ಯಕ್ತಿ ಚಿತ್ರಣ) ತುಳು ಭಾಷೆಯಲ್ಲಿ, 3) ತುಳುಭಾಷಾ ವೈವಿಧ್ಯ ಮತ್ತು ಇತರ ಪ್ರಬಂಧಗಳು (ಸಂಶೋಧನಾತ್ಮಕ ಪ್ರಬಂಧ ಸಂಕಲನ), 4) ಕಾವೇರಿ (ತುಳು ಪ್ರಾಚೀನ ಕಾವ್ಯದ ಪರಿಚಯ), 5) ಕನ್ನಡ-ತುಳು ಶಬ್ದ ಪ್ರಯೋಗ ಕೋಶ (ಸಹ ನಿರ್ಮಾತೃ), 6) ಕರಾವಳಿಯ ಭಾಷಾನುಸಂಧಾನ (ಪ್ರಬಂಧ ಸಂಕಲನ), 7) “Traikalika Sandhyavandanam” (ಉಪನೀತ ವಟುಗಳ ನಿತ್ಯಾನುಷ್ಠಾನ) ಆಂಗ್ಲಭಾಷೆಯಲ್ಲಿ, 8) ತುಳು ಜ್ಞಾತಿ ಪದಕೋಶ (ಸಪ್ತಭಾಷಾ ನಿಘಂಟು) ಪ್ರಧಾನ ಸಂಪಾದಕ ಹುದ್ದೆ.

ಸಂಪನ್ಮೂಲ ವ್ಯಕ್ತಿಯಾಗಿ:-
1) ಮಂಗಳೂರು ಆಕಾಶವಾಣಿಯಲ್ಲಿ ತುಳು-ಕನ್ನಡ ಭಾಷೆಗಳಲ್ಲಿ ವಿವಿಧ ವಿಷಯಗಳ ಮೇಲೆ ಪದ್ಮನಾಭರು ಮಾಡಿದ ಸರಣಿ ಭಾಷಣ – ಚಿಂತನಗಳ ಪ್ರಸಾರ.
2) ’ತುಳು ಭಾಷೆ ಮತ್ತು ಸಂಸ್ಕೃತಿ’ಯ ಬಗೆಗೆ ಬೆಂಗಳೂರು ದೂರದರ್ಶನವು ಸಂಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
3) ಇವರು ಬರೆದ ಅನೇಕ ಸಂಶೋಧನಾತ್ಮಕ ಲೇಖನಗಳು ವಿವಿಧ ಸ್ಮರಣ ಸಂಚಿಕೆಗಳಲ್ಲಿ, ಪತ್ರಿಕೆಗಳಲ್ಲಿ, ಸಂಪಟಗಳಲ್ಲಿ, ಅಭಿನಂದನ ಗ್ರಂಥಗಳಲ್ಲಿ ಮತ್ತು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.
4) ಇವರು ಬರೆದ ಸಂಶೋಧನಾತ್ಮಕ ಪ್ರಬಂಧಗಳನ್ನು ವಿವಿಧ ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪದ್ಮನಾಭರು ಮಂಡನೆ ಮಾಡಿದ್ದಾರೆ.

ಸಾಧನೆಗೆ ಸಂದ ಸನ್ಮಾನ:-
ಮಲ್ಲಿಗೆಯನ್ನು ಎಲ್ಲಿಯೂ ಮುಚ್ಚಿಡಬಹುದು. ಅದರ ಕಂಪನ್ನು ಮುಚ್ಚಿಡಲಾದೀತೇ? ಪದ್ಮನಾಭರು ಪಟ್ಟು ಹಿಡಿದು ತನ್ನನ್ನು ತಾನು ದಂಡಿಸಿಕೊಂಡು ವಿಶ್ವಕ್ಕೇ ಮಂಡಿಸಿದ ಮಹಾನ್ ಕೃತಿಗಳು, ವಿಚಾರಗಳು ಪಸರಿಸಲು ಸಮಯ ಹಿಡಿಯಲಿಲ್ಲ. ಸಾಹಿತ್ಯಕ್ಷೇತ್ರದ ಜನರು ಪದ್ಮನಾಭರನ್ನು ಅರಸಿಕೊಂಡು ಬಂದರು. ಪರಿಣಾಮವಾಗಿ, ಅಖಿಲ ಭಾರತ ೭೪ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಕಾರ್ಯದರ್ಶಿತ್ವ ಪದ್ಮನಾಭರ ಶಿರವನ್ನು ಅಲಂಕರಿಸಿತು. ಬಳಿಕ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಇವರನ್ನೇ ಆರಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಇವರು ಆಯ್ಕೆಗೊಂಡರು.

ಅಂದು ವಾಮನಮೂರ್ತಿಯಾಗಿ ನಮ್ಮ ಸಾಂಸ್ಕೃತಿಕ ನಗರಿಗೆ ಆಗಮಿಸಿದ್ದ ಪದ್ಮನಾಭ ಕೇಕುಣ್ಣಾಯರು ಇಂದು ಅಕ್ಷರಲೋಕದ ತ್ರಿವಿಕ್ರಮನಾಗಿ ನಮ್ಮ ಮುಂದೆ ನಿಂತಿದ್ದಾರೆ! ಶಿಸ್ತಿನಿಂದ ಪ್ರಾಮಾಣಿಕ ಪ್ರಯತ್ನಪಟ್ಟು ತನ್ನನ್ನು ತಾನು ಗಟ್ಟಿಯಾಗಿಸಿಕೊಂಡು ಬೆಳೆದ ಪರಿ ಎಲ್ಲರಿಗೂ ಅಚ್ಚರಿ! ಇನ್ನು ಮುಂದೆ ನಿಘಂಟು ರಚನೆ ಮತ್ತು ಭಾಷಾ ಸಂಶೋಧನೆಯಲ್ಲಿ ಅಧ್ಯಯನ ಮಾಡಲು ಬರುವ ಆಸಕ್ತ ವಿದ್ಯಾರ್ಥಿಗಳಿಗೆ ಸಪ್ತಭಾಷಾ ನಿಘಂಟು ತಜ್ಞರಾದ ಡಾ| ಪದ್ಮನಾಭ ಕೇಕುಣ್ಣಾಯರು ಓರ್ವ ಸಮರ್ಥ ಗುರುಗಳು ಅನ್ನುವುದರಲ್ಲಿ ಎರಡು ಮಾತಿಲ್ಲ. ಗುರುಗಳಿಗೆ ಗುರುತ್ವವೇ ಕಡಿಮೆಯಾಗಿರುವ ಈ ದಿನಗಳಲ್ಲಿ ಡಾ| ಪದ್ಮನಾಭ ಕೇಕುಣ್ಣಾಯರು ಈಗಿನ ಕಾಲದ ಅಮೂಲ್ಯ ರತ್ನ. ಇದು ಉತ್ಪ್ರೇಕ್ಷೆಯ ಮಾತಾಗದು.

ಆದರೂ ಪದ್ಮನಾಭರು ತನ್ನ ಈ ಆಗಾಧ ಸಾಧನೆಯ ಕುರಿತು ಯಾರಿಗೂ ಗೊತ್ತುಪಡಿಸದ ಸಜ್ಜನಿಕೆಯ ಸಾಕಾರಮೂರ್ತಿ. ಎಂಟು ಭಾಷೆಗಳ ಮೇಲೆ ಹಿಡಿತ. ಮತ್ತಷ್ಟು ಸಾಧಿಸುವ ತೀವ್ರ ತುಡಿತ. ಪ್ರಚಾರ ಬಯಸದೆ, ತಾನಾಗಿ ಏನೂ ತೋರಿಸಿಕೊಳ್ಳದೆ, ಅವರು ತನ್ನೊಳಗೆಯೇ ಬಚ್ಚಿಟ್ಟು ಉಳಿಸಿಕೊಂಡದ್ದೆಷ್ಟೋ. ಅವರ ಸಾಧನೆಯ ಸುಗಂಧದ ಜಾಡು ಹಿಡಿದು ಪ್ರಸಾರ, ಸನ್ಮಾನ, ಕೀರ್ತಿಗಳು ಅವರ ಬೆನ್ನ ಹಿಂದೆಯೇ ಬರುತ್ತಾ ಇವೆ. ಅವುಗಳ ವಿಲಾಸದ ಜಾಲಕ್ಕೆ ಸಿಲುಕಿಕೊಳ್ಳದೆ ತನ್ನನ್ನು ತಾನು ಅದುಮಿಟ್ಟುಕೊಂಡು, ತನ್ನ ಮುಂದಿನ ಮಹಾತ್ಕಾರ್ಯದ ಕುರಿತೇ ಚಿಂತನೆಯಲ್ಲಿ ತಲ್ಲೀನರಾಗುವವರು ಡಾ| ಪದ್ಮನಾಭ ಕೇಕುಣ್ಣಾಯರು. ಅಷ್ಟು ಸರಳ ನಿಗರ್ವಿ ವ್ಯಕ್ತಿ. ಇಂತಹ ವ್ಯಕ್ತಿಯಿಂದ ಆ ವಾಗ್ದೇವಿಯು ತನ್ನ ಮಕುಟಕ್ಕೆ ಇನ್ನಷ್ಟು ಮಾಣಿಕ್ಯಗಳನ್ನು ಪಣಿಸಿಕೊಂಡು ಸಂತಸಪಡಲಿ.

ಗಾಳಿ ಎಲ್ಲ ಬಿದಿರಿನಲ್ಲೂ ಸಂಚರಿಸುತ್ತದೆ. ಆದರೆ ಕೊಳಲಿನ ಒಳಗೆ ಪ್ರವೇಶಿಸಿದ ಗಾಳಿ ಮಾತ್ರ ಷಡ್ಜ, ಗಾಂಧಾರ ಮುಂತಾದ ಸಂಗೀತದ ತುಷಾರವನ್ನೇ ಸಿಂಚನ ಮಾಡುತ್ತದೆ. ಇಂಪಾದ ಗಾನರಸಾಯನವನ್ನೇ ಹೊರಹೊಮ್ಮಿಸುತ್ತದೆ. ಸಂಯಮದಿಂದ ಶ್ರಮಪಟ್ಟು, ನಿಷ್ಠೆಯಿಂದ ಸಾಧನೆಗೈಯುವವರ ಮನದಲ್ಲಿ ಆ ಮುರಳೀಧರನೇ ಬಂದು ಮಿದುಳ ತಂತಿಯನ್ನು ಮೀಟುತ್ತಾನೇನೋ…

ಲೇಖನ :-ಮಹೇಂದ್ರ ಎನ್. ಶರ್ಮ ನಿವೃತ್ತ ಪ್ರಾಂಶುಪಾಲರು ಉಡುಪಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.