ರೋಟರಿ ಪುತ್ತೂರು ಎಲೈಟ್‌ನಿಂದ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ್‌ರಿಗೆ ಗೌರವ 

ಹತ್ತೂರಿಗೆ ತಂತ್ರಜ್ಞಾನದ ಅರಿವಿನ ರೂವಾರಿ – ರೇ ವಿಜಯ ಹಾರ್ವೀನ್

ಪುತ್ತೂರು: ಇಂಜಿನಿಯರ್ಸ್ ದಿನಾಚರಣೆಯ ಅಂಗವಾಗಿ ರೋಟರಿ ಪುತ್ತೂರು ಎಲೈಟ್ ವತಿಯಿಂದ ಸಾಧಕ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ್ ಅವರನ್ನು ಗೌರವಿಸಲಾಯಿತು.

 

ರೋಟರಿ ಪುತ್ತೂರು ಎಲೈಟ್‌ನ ನಿಕಟ ಪೂರ್ವ ಅಧ್ಯಕ್ಷ ರೆ.ವಿಜಯ ಹಾರ್ವಿನ್ ಅಭಿನಂದನಾ ಮಾತುಗಳನ್ನಾಡಿ ಎಸ್.ಕೆ.ಆನಂದ್ ರವರು ಪುತ್ತೂರು ಮಾತ್ರವಲ್ಲ ಹತ್ತೂರಿಗೆ ತಮ್ಮ ತಂತ್ರಜ್ಞಾನದ ಅರಿವನ್ನು ನೀಡಿದ್ದಾರೆ. ಪರಿಸರ ಸಂರಕ್ಷಣೆಯನ್ನು ಮುಖ್ಯ ಧ್ಯೇಯ ವಾಗಿರಿಸಿದ್ದು ಮಾತ್ರವಲ್ಲದೆ ಮರಕ್ಕೆ ಪರ್ಯಾಯ ವಸ್ತುವಾಗಿ ಸಿಮೆಂಟ್ ಉಪಕರಣಗಳನ್ನು ತಯಾರಿಸಿದ್ದು ಎಕರೆಗಟ್ಟಲೆ ಕಾಡುಗಳ ರಕ್ಷಣೆ ಮಾಡಿದಂತಾಗಿದೆ. ಇದರ ಜೊತೆಗೆ ತಮ್ಮ ನಾಲ್ವರು ಮಕ್ಕಳನ್ನೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮುನ್ನಡೆಯಲು ಪ್ರೇರೇಪಿಸಿರುವುದು ಕೂಡ ಅತ್ಯಂತ ಶ್ರೇಷ್ಠ ಕೆಲಸ ಎಂದು ಶ್ಲಾಘಿಸಿದರು. ರೋಟರಿ ಪುತ್ತೂರು ಎಲೈಟ್‌ನ ಅಧ್ಯಕ್ಷ ಮನ್ಸೂರ್ ಬಿ., ವೃತ್ತಿಸೇವಾ ವಿಭಾಗದ ನಿರ್ದೇಶಕ ಕಾರ್ಯಪ್ಪ, ಡಿಸ್ಟ್ರಿಕ್ಟ್ ಸೆವೆನ್ ಫೋಕಸ್ ಏರಿಯಾದ ವೈಸ್ ಚೇರ್ ಮೆನ್ ಆಸ್ಕರ್ ಆನಂದ್, ಮೌನೇಶ ವಿಶ್ವಕರ್ಮ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.