HomePage_Banner
HomePage_Banner
HomePage_Banner
HomePage_Banner

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಗಳಾದ ಅಭಿಷೇಕ್ ಪಿ.ಎಸ್, ಸುನೀಲ್ ಎನ್, ನಿತೇಶ್ ಎಸ್.ರವರಿಗೆ ಹೆಚ್‌ಡಿಸಿಎಂ ಪದವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾವು: ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮಾ ಪರೀಕ್ಷೆಯಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಗಳಾದ ಅಭಿಷೇಕ್ ಪಿ.ಎಸ್, ಸುನೀಲ್ ಎನ್, ನಿತೇಶ್ ಎಸ್.ರವರು ತೇರ್ಗಡೆಯಾಗಿ ಹೆಚ್‌ಡಿಸಿಎಂ ಪದವಿ ಪಡೆದಿದ್ದಾರೆ. ನವದೆಹಲಿಯ ನ್ಯಾಷನಲ್ ಕೌನ್ಸಿಲ್ ಫಾರ್ ಕೋ ಆಪರೇಟಿವ್ ಟ್ರೈನಿಂಗ್‌ನವರ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್‌ಸಿಎಂ) ಬೆಂಗಳೂರು ಇವರಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಬೆಂದೂರ್‌ವೆಲ್ ಮಂಗಳೂರು ಇವರ ಸಮನ್ವಯದಲ್ಲಿ ಮಂಗಳೂರು ಕೇಂದ್ರವಾಗಿರಿಸಿಕೊಂಡು ದೂರಶಿಕ್ಷಣದ ಮೂಲಕ ನಡೆದಿದ್ದ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮಾ ಪದವಿಯ 30ನೇ ಅಧಿವೇಶನದ ಪರೀಕ್ಷೆಯು ಮಂಗಳೂರು ವಿಶ್ವವಿದ್ಯಾನಿಲಯ ಹಂಪನಕಟ್ಟೆಯಲ್ಲಿ ನಡೆದು ಫಲಿತಾಂಶ ಪ್ರಕಟವಾಗಿದೆ.

                                                                   ಅಭಿಷೇಕ್ ಪಿ.ಎಸ್
                                                           ಸುನೀಲ್ ಎನ್
                                                                                       ನಿತೇಶ್ ಎಸ್

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪರೀಕ್ಷೆ ಬರೆದಿದ್ದ ಸಂಘದ ಸಿಬ್ಬಂದಿಗಳಾದ ನಿತೇಶ್ ಎಸ್.ರವರು ಉನ್ನತ ಶ್ರೇಣಿಯಲ್ಲಿ ಮತ್ತು ಅಭಿಷೇಕ್ ಪಿ.ಎಸ್ ಮತ್ತು ಸುನೀಲ್ ಎನ್.ರವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಹೆಚ್‌ಡಿಸಿಎಂ ಪದವಿ ಪ್ರಮಾಣ ಪತ್ರ ಪಡೆದಿದ್ದಾರೆ.

About The Author

Related posts

1 Comment

  1. L.B.Pernaje.

    ನಮ್ಮೂರ ಈ ಕಾವು ಸಹಕಾರ ಸಂಘದ ಶಿಬಂಧಿಗಳು ಉತ್ತಮ ಸೇವೆಯನ್ನು ನೀಡುವ ನೌಕರರಲ್ಲಿ ಸೇರಿದವರಾಗಿರುತ್ತಾರೆ.ಇವರುಗಳ ಉತ್ತಮ ಸಾಧನೆಗೆ ಶುಭಾಶಯಗಳು.
    ಮುಂದಿನ ದಿನಗಳಲ್ಲಿ ಇವರಿಂದ ಸದಸ್ಯರುಗಳಿಗೆ ಇನ್ನೂ ಉತ್ತಮ ಸೇವೆ ದೊರಕಿ ಸಹಕಾರ ಸಂಘವು ಸದಾ ಪ್ರಥಮ ಶ್ರೇಣಿಯ ಸಾಧನೆಯ ಕೀರ್ತಿಗೆ ಭಾಜನವಾಗುವಂತಾಗಲಿ ಎಂದು‌ ಹಾರೈಸುತ್ತಿರುವೆ.
    ಯಲ್.ಬಿ.ಪೆರ್ನಾಜೆ. ಮದ್ಲ.ಕಾವು.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.