HomePage_Banner
HomePage_Banner
HomePage_Banner
HomePage_Banner

ಸೆ.25:ಆಸ್ಪತ್ರೆಯ ವಿಶೇಷ ರಿಯಾಯಿತಿ ಸೌಲಭ್ಯಗಳಿಗಾಗಿ ಕೆಎಂಸಿ ಆಸ್ಪತ್ರೆ ಅತ್ತಾವರ ಲಾಯಲ್ಟಿ ಕಾರ್ಡ್ ನೋಂದಣಿ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ರೋಟರಿ ಕ್ಲಬ್ ಪುತ್ತೂರು ಯುವದ ಸಹಯೋಗದೊಂದಿಗೆ ಸೆ.25 ರಂದು ಪುತ್ತೂರು ಸೈನಿಕ ಭವನದ ಬಳಿಯ ರೋಟರಿ ಮನೀಷ ಸಭಾಂಗಣದಲ್ಲಿ ಆಸ್ಪತ್ರೆಯ ವಿಶೇಷ ರಿಯಾಯಿತಿ ಸೌಲಭ್ಯಗಳಿಗಾಗಿ ಕೆಎಂಸಿ ಆಸ್ಪತ್ರೆ ಅತ್ತಾವರ ಲಾಯಲ್ಟಿ ಕಾರ್ಡ್ ನೋಂದಣಿ ಶಿಬಿರವು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ.

ಹೊರರೋಗಿ ಸೌಲಭ್ಯಗಳಲ್ಲಿ ವೈದ್ಯರ ಸಮಾಲೋಚನೆ ಶೇ.50 ರಿಯಾಯಿತಿ, ಪ್ರಯೋಗಶಾಲೆ ಪರೀಕ್ಷೆಗಳು ಶೇ.20 ರಿಯಾಯಿತಿ, ಚಿಕಿತ್ಸಾ ವಿಧಾನಗಳು/ಶಸ್ತ್ರಚಿಕಿತ್ಸೆ ಶೇ.10 ರಿಯಾಯಿತಿ, ಎಕ್ಸ್ ರೇ, ಆಲ್ಟ್ರಾ ಸೌಂಡ್, ಸಿ.ಟಿ ಸ್ಕ್ಯಾನ್, ಎಂ.ಆರ್.ಐ ಶೇ.20 ರಿಯಾಯಿತಿ, ಔಷಧ ಶೇ.10 ರಿಯಾಯಿತಿ ಲಭ್ಯವಿದೆ. ಒಳರೋಗಿ ಸೌಲಭ್ಯಗಳಲ್ಲಿ ಒಳರೋಗಿ ಬಿಲ್ಲಿನ ಮೇಲೆ ಶೇ.90 ರಿಯಾಯಿತಿ(ಒಟ್ಟು ರಿಯಾಯಿತಿ ಮೊತ್ತವು ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ.35000/- ಮಾತ್ರ). ಈ ಸೌಲಭ್ಯವು ಅತ್ತಾವರದ ಕೆಎಂಸಿ ಆಸ್ಪತ್ರೆ ಮತ್ತು ಕಟೀಲಿನ ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆಯ ಜನರಲ್ ವಾರ್ಡಿಗೆ ಅನ್ವಯಿಸುತ್ತದೆ.

91 ದಿವಸದ ಶಿಶುವಿನಿಂದ 90 ವರ್ಷದ ಹಿರಿಯ ನಾಗರಿಕರೂ ಈ ಯೋಜನೆಯ ಸದಸ್ಯರಾಗಬಹುದು. ನೋಂದಾಯಿಸಿದವರಿಗೆ ಸ್ಥಳದಲ್ಲಿಯೇ ಕಾರ್ಡನ್ನು ನೀಡಲಾಗುವುದು. ಯೋಜನೆಯ ಅವಧಿಯು ಕಾರ್ಡ್‌ನಲ್ಲಿ ನಮೂದಿಸಿದ ದಿನಾಂಕದಿಂದ ಒಂದು ವರ್ಷಕ್ಕೆ ಲಭ್ಯವಿರುವ ಯೋಜನೆಯ ವಿಶೇಷತೆಗಳಾಗಿದೆ. ಶಿಬಿರಕ್ಕೆ ಆಗಮಿಸುವಾಗ ಸರಕಾರದ ಕೋವಿಡ್-19 ಮಾರ್ಗಸೂಚಿಯಂತೆ ಸಾಮಾಜಿಕ ಅಂತರವನ್ನು ಪಾಲಿಸತಕ್ಕದ್ದು ಹಾಗೂ ಕಡ್ಡಾಯವಾಗಿ ಮಾಸ್ಕನ್ನು ಧರಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9480204464 ಅನ್ನು ಸಂಪರ್ಕಿಬಹುದು ಎಂದು ಕೆಎಂಸಿ ಆಸ್ಪತ್ರೆ ಅತ್ತಾವರ ಪ್ರಕಟಣೆ ತಿಳಿಸಿದೆ.

* ಒಳರೋಗಿ ಬಿಲ್ಲಿನ ಮೇಲೆ ಶೇ.90 ರಿಯಾಯಿತಿ(ರೂ.35 ಸಾವಿರ ಮಾತ್ರ)
* ನೋಂದಾವಣೆ ಶುಲ್ಕ ಕುಟುಂಬವೊಂದಕ್ಕೆ(ಗರಿಷ್ಟ 5  ಮಂದಿ ಸದಸ್ಯರಿಗೆ) ರೂ.300.
ಪ್ರತೀ ಹೆಚ್ಚುವರಿ ಸದಸ್ಯನಿಗೆ ರೂ.100ರಂತೆ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
* ಹೆಸರನ್ನು ನೋಂದಾಯಿಸುವಾಗ ಕಡ್ಡಾಯವಾಗಿ ರೇಶನ್ ಕಾರ್ಡ್/ಆಧಾರ್ ಕಾರ್ಡ್(ಝೆರಾಕ್ಸ್ ಪ್ರತಿ) ದಾಖಲೆಗಳನ್ನು ತರತಕ್ಕದ್ದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.