ಪಾಣಾಜೆ ಗ್ರಾಮ ಪಂಚಾಯತಿನಲ್ಲಿ ಸ್ವಚ್ಚತಾ ರಥ ಉದ್ಘಾಟನೆ, ಸಾಧಕರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ; ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್ ಹಾಗೂ ಪಾಣಾಜೆ ಗ್ರಾಮ ಪಂಚಾಯತ್ ಇವುಗಳ ಸಹಯೋಗದೊಂದಿಗೆ  ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಪ್ರಯುಕ್ತ ಅಜಾದಿಕಾ ಅಮೃತ ಮಹೋತ್ಸವ ಅಂದೋಲನಡಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಪಾಣಾಜೆ ಗ್ರಾಮ ಪಂಚಾಯತಿನಲ್ಲಿ ಸ್ವಚ್ಚತಾ ರಥ ಉದ್ಘಾಟನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೆ.24 ರಂದು ಪಾಣಾಜೆ ಸಿ.ಎ ಬ್ಯಾಂಕ್ ಸಭಾಭವನದಲ್ಲಿ  ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.  ಗ್ರಾಮದ ಹಿರಿಯರಾದ ಮಹಾಬಲೇಶ್ವರ ಭಟ್ ಗಿಳಿಯಾಲು ಮತ್ತು ಮಹಮ್ಮದ್ ಕುಂಞ ಕಂಚಿಲ್ಕುಂಜ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

 ಸನ್ಮಾನ ಕಾರ್ಯಕ್ರಮ; ಕಾರ್ಯಕ್ರಮ ಉದ್ಘಾಟನೆ ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಗ್ರಾಮದ ಹಿರಿಯರಾದ ಮಹಾಬಲೇಶ್ವರ ಭಟ್ ಗಿಳಿಯಾಲು, ಮಹಮ್ಮದ್ ಕುಂಞ ಕಂಚಿಲ್ಕುಂಜ, ನಿವೃತ್ತ ಸೈನಿಕರಾದ ಮಾಂಕು ಮೂಲ್ಯ, ಪುಷ್ಪರಾಜ್ ಶೆಟ್ಟಿ ಕೋಟೆ, ನಾಟಿ ವೈದ್ಯರುಗಳಾದ ಆನಂದ ಬಲ್ಯಾಯ ದೇವಸ್ಯ, ಗೋಪಾಲಕೃಷ್ಣ ಭಟ್ ಕೆದಂಬಾಡಿ, ಅಂದುಂಞ ಯವರ ಪರವಾಗಿ ಅವರ ಮಗ ತಾಜರ್ ಖಾನ್, ಕೊರಗ ನಲಿಕೆ, ಚನಿಯ ನಲಿಕೆ, ಕಳೆದ ವರ್ಷದ ಕೋವಿಡ್ ಸಂಕಷ್ಟದ ಸಮಯದಲ್ಲಿ ಕಿಟ್ ಹಾಗೂ ಇನ್ನೀತರ ಸೇವೆ ನೀಡಿದ ಸಂಘ ಸಂಸ್ಥೆಗಳಾದ ಪಾಣಾಜೆ ಹಾಲುತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ವಿದ್ಯಾಶ್ರೀ ಚಾರಿಟೇಬಲ್ ಟ್ರಸ್ಟ್ ಪಾಣಾಜೆ ಇದರ ಅಧ್ಯಕ್ಷ ಚಂದ್ರ.ಎ.ಬಿ, ಸ್ಕಂದಶ್ರೀ ಸೇವಾ ಸಮಿತಿ ಇದರ ಅಧ್ಯಕ್ಷ ವಿನೋದ್ ರಾಜ್, ಚಿರಂಜೀವಿ ಸೇವಾ ಸಮಿತಿಯ ಪ್ರವೀಣ್ ಶೆಟ್ಟಿ ಸೂರಂಬೈಲು, ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ ರೈ ಗೋಳಿತ್ತಡಿ, ಸನ್ಮಿತ್ರ ಅಟೋ ಚಾಲಕ ಮಾಲಕ ಸಂಘದ ಶಿವಪ್ಪ ನಾಯ್ಕ, ಲಯನ್ಸ್ ಕ್ಲಬ್‌ನ ಉಮ್ಮರ್ ಜನಪ್ರಿಯ, ಈ ಸಾಲಿನ ಕೋವಿಡ್ ಸಂಕಷ್ಟದ ಸಮಯದಲ್ಲಿ ಸಹಕರಿಸಿದ  ನಮ್ಮ ರಸ್ತೆ ನಮ್ಮ ಹಕ್ಕು ಸಮಿತಿಯ ಮೋಹನ ಪಾಣಾಜೆ, ಹಿಂದೂ ಜಾಗರಣ ವೇದಿಕೆಯ ಹರೀಶ್, ಸೇವಾ ಭಾರತಿಯ ಸುಖಿನ್ ಕೊಂದಲ್ಕಾನ, ಅಕ್ಷಯ ಸೇವಾ ಸಮಿತಿಯ ಸಂತೋಷ ಕೊಂದಲ್ಕಾನ ಮತ್ತು ಸೀತಾ ಉದಯ ಶಂಕರ ಭಟ್, ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಸುಬೋಧ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕು.ಚೈತ್ರಾ ರೈ, ಕು.ಫಾತಿಮಾತ್ ಮೆಹನೂಫ, ಕು.ಕವನಶ್ರೀ, ಕೌಶಲ್, ಶೃತಿ.ಕೆ ಹಾಗೂ ಪಾಣಾಜೆ ಗ್ರಾಮದವಳಾದ ಉಪ್ಪಳಿಗೆ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ದಿಶಾ ಭರಣ್ಯ , ರಾಜ್ಯ ಪಂಚಾಯತ್ ರಾಜ್ ಇಲಾಖೆಯ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಡಾ.ಹಾಜಿ.ಎಸ್ ಅಬೂಬಕ್ಕರ್ , ಪಿಡಬ್ಲ್ಯೂಡಿ ಗುತ್ತಿಗೆದಾರ ಮತ್ತು ಸಮಾಜ ಸೇವಾ ಕರ್ತರಾದ ಸದಾಶಿವ ರೈ ಸೂರಂಬೈಲು, ಖ್ಯಾತ ಕಲಾವಿದ ಯೊಗೀಶ್ ಕಡಂದೇಲು ಇವರನ್ನು ಶಾಲು ಹೊದಿಸಿ, ಸಸಿ ಮತ್ತು ಪುಸ್ತಕ ನೀಡಿ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಗಳು ಗೌರವಿಸಿದರು.

 ನಂತರ ಹಸಿ ಕಸ ಒಣ ಕಸ ವಿಂಗಡಿಸುವ ಮಾಹಿತಿಯನ್ನೊಳಗೊಂಡ ಕರಪತ್ರದ ಬಿಡುಗಡೆ ಮತ್ತು ಕಸ ಸಂಗ್ರಹಿಸಲು ಗ್ರಾಮದ ಪ್ರತಿ ಅಂಗಡಿ, ಶಾಲೆ ಮತ್ತು ಮನೆ ಮನೆಗೆ ಗೋಣಿ ಚೀಲವನ್ನು ನೀಡುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.ನಂತರ ಗ್ರಾಮ ವ್ಯಾಪ್ತಿಯಲ್ಲಿ ಸ್ವಚ್ಚತಾ ರಥವನ್ನು ಕೊಂಡೊಯ್ಯಲಾಯಿತು. ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್ .ಕೆ, ಸದಸ್ಯರಾದ ಸುಭಾಸ್ ರೈ, ನಾರಾಯಣ ನಾಯಕ್, ಮೈಮುನಾತುಲ್ ಮೆಹ್ರಾ, ವಿಮಲ, ಮೋಹನ ನಾಯ್ಕ, ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯೆ ಸುಲೋಚನ ಪ್ರಾರ್ಥಿಸಿ, ಜಯಶ್ರೀ. ಡಿ ವಂದಿಸಿದರು. ಪಿಡಿಒ ಚಂದ್ರಮತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಆಶಾ, ಸಿಬ್ಬಂದಿಗಳಾದ ವಿಶ್ವನಾಥ, ಸೌಮ್ಯಲತಾ, ರೂಪಶ್ರೀ, ಅರುಣ ಕುಮಾರ್ ಸಹಕರಿಸಿದರು. ಗ್ರಾಮಸ್ಥರು, ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.