HomePage_Banner
HomePage_Banner
HomePage_Banner
HomePage_Banner

ಕಡಬ ಕಳಾರದಲ್ಲಿರುವ ಸ್ನೇಹಾ ಪಂಚಕರ್ಮ ಚಿಕಿತ್ಸಾಲಯದ ವೈದ್ಯನಿಂದ ಲೈಂಗಿಕ ಕಿರುಕುಳ ಪ್ರಕರಣ – ಆರೋಪಿ ವೈದ್ಯನ ಬಂಧನ, ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕಳಾರದಲ್ಲಿರುವ ಸ್ನೇಹಾ ಪಂಚಕರ್ಮ ಚಿಕಿತ್ಸಾಲಯದಲ್ಲಿ ಅಲ್ಲಿನ ವೈದ್ಯ ಮಹಿಳೆಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಕಡಬ ಠಾಣೆಯಲ್ಲಿ ಆರೋಪಿ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಈತನಿಗೆ ಸಹಕರಿಸುತ್ತಿರುವ ಇನ್ನೋರ್ವ, ಹಾಗೂ ಅಲ್ಲಿ ವೈದ್ಯನ ಜತೆಯೇ ಕೆಲಸ ಮಾಡಿಕೊಂಡಿದ್ದ ಯುವತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿ ಅಬ್ರಹಾಂ ವಿರುದ್ದ ಮಹಿಳೆಯೊಬ್ಬರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಅಬ್ರಹಾಂ ಕಳೆದ ಹಲವಾರು ವರ್ಷಗಳಿಂದ ಮಸಾಜ್ ಸೆಂಟರ್ ನಡೆಸುತ್ತಿದ್ದು, ಕಳಾರದಲ್ಲಿ ಒಂದೆರಡು ವರ್ಷಗಳ ಹಿಂದೆ ಚಿಕಿತ್ಸಾಲಯ ಪ್ರಾರಂಭಿಸಿದ್ದ, ಸೆ.23 ರಂದು ಅಬ್ರಹಾಂ ಸ್ಥಳೀಯ ನಿವಾಸಿ ಇಬ್ಬರು ಮಹಿಳೆಯರು ಕೆಲಸಕ್ಕೆ ಬರುತ್ತಿದ್ದು ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಆ ಈರ್ವರಲ್ಲಿ ಓರ್ವ ಮಹಿಳೆ ಸೆ.24ರಂದು ದೂರು ನೀಡಿದ್ದರೆ, ಇನ್ನೋರ್ವ ಮಹಿಳೆ ಸೆ.25ರಂದು ದೂರು ದಾಖಲಿಸುವ ಸಂಭವ ಇದೆ. ಸೆ.24ರ ರಾತ್ರಿ ಮಹಿಳೆಯಿಂದ ದೂರು ದಾಖಲಾದ ಕೂಡಲೇ ಮಸಾಜ್ ಸೆಂಟರ್ ಗೆ ದಾಳಿ ನಡೆಸಿ ಆರೋಪಿ ಅಬ್ರಹಾಂ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ಬಳಿಕ ತಡರಾತ್ರಿ ಆತನಿಗೆ ಸಹಕರಿಸುತ್ತಿರುವ ಇನ್ನೋರ್ವನನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಮತ್ತು ಆತನ ಸೆಂಟರ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಯುವತಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ತಡರಾತ್ರಿ ಆಗಿರುವುದರಿಂದ ಯುವತಿಯನ್ನು ಠಾಣೆಗೆ ಹಾಜರುಪಡಿಸದೆ ಮಹಿಳಾ ಪೊಲೀಸರ ಸುಪರ್ಧಿಯಲ್ಲಿ ಇಟ್ಟುಕೊಳ್ಳಲಾಗಿದೆ.

ನಿರಂತರ ನಡೆಯುತ್ತಿತ್ತು ಲೈಂಗಿಕ ಕಿರುಕುಳ !
ಆರೋಪಿ ವೈದ್ಯ ಅಬ್ರಹಾಂ ವಿರುದ್ದ ಈ ಹಿಂದೆಯೂ ಸಾಕಷ್ಟು ಆರೋಪಗಳು ಕೇಳಿ ಬಂದಿದೆ. ಮಸಾಜ್ ಬರುವ ಮಹಿಳೆಯರ ಅಂಗಾಂಗಗಳನ್ನು ಸ್ಪರ್ಶಿಸುವ ಕೆಟ್ಟ ಚಾಳಿ ಹೊಂದಿದ್ದಾನೆಂದು ಹಲವಾರು ಆರೋಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತು ಪೊಲೀಸರು ಈ ಹಿಂದೆ ಮಸಾಜ್ ಸೆಂಟರ್ ಗೆ ತೆರಳಿ ಆತನಿಗೆ ಎಚ್ಚರಿಕೆ ನೀಡಿದ್ದರು. ಆದರೂ ಚಾಳಿ ಬಿಡದ ಅಬ್ರಹಾಂ ಕೆಲಸಕ್ಕೆ ಬರುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಬಳಿಕ ಫೋನ್ ಮೂಲಕ ಜೀವ ಬೆದರಿಕೆಯೂ ಹಾಕಿದ್ದ ಎಂದು ತಿಳಿದು ಬಂದಿದೆ. 

ಅಬ್ರಹಾಂ ಚಿಕಿತ್ಸಾಲಯಕ್ಕೆ ಬರುವ ಮಹಿಳೆಯರು, ಯುವತಿಯರಿಗೂ ಅಲ್ಲದೆ ಅಪ್ರಾಪ್ತ ಬಾಲಕಿಗೂ ಕಿರುಕುಳ ನೀಡಿರುವ ಬಗ್ಗೆ ಮಾಹಿತಿ ಇದ್ದು, ದೂರು ನೀಡಲು ಅವರು ಮುಂದೆ ಬಾರದೆ ಇರುವ ಹಿನ್ನಲೆಯಲ್ಲಿ ಈತನ ವಿರುದ್ಧ ಇನ್ನಷ್ಟು ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಈತನ ಕಿರುಕುಳ ನಿರಂತರ ನಡೆಯುತ್ತಿರುವ ಬಗ್ಗೆ ಡಿವೈಎಸ್ಪಿಯವರಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅವರು ಸೆ.23ರಂದು ಕಡಬಕ್ಕೆ ಆಗಮಿಸಿ ಮಹಿಳೆಯರ ಜತೆ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಮಹಿಳೆಯೋರ್ವರು ರಾತ್ರಿಯೇ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅಬ್ರಹಾಂ ಸೇರಿದಂತೆ ಮೂರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸೆ.25ರಂದು ಅಬ್ರಹಾಂ ವಿರುದ್ದ ಇನ್ನಷ್ಟು ದೂರು ದಾಖಲಾಗುವ ಸಂಭವ ಇದೆ ಎಂದು ಮಾಹಿತಿ ಲಭಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.