HomePage_Banner
HomePage_Banner
HomePage_Banner
HomePage_Banner

ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಜನ್ಮದಿನ – ಗಣಪತಿಹೋಮ, ಬೂತ್ ಮಟ್ಟದಲ್ಲಿ ವಿವಿಧ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹುಟ್ಟು ಸಾವಿನ ಮಧ್ಯೆ ರಾಷ್ಟ್ರಸಮರ್ಪಿತ ಬದುಕಾಗಬೇಕು- ಸಂಜೀವ ಮಠಂದೂರು

ಪುತ್ತೂರು: ಏಕಾತ್ಮ ಮಾನವ ದರ್ಶನ ಮತ್ತು ಅಂತ್ಯೋದಯದ ಪರಿಕಲ್ಪನೆಯನ್ನು ತೋರಿಸಿಕೊಟ್ಟ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ105 ನೇ ಜನ್ಮದಿನದ ಅಂಗವಾಗಿ ದುರ್ಬಲ ವರ್ಗದವರಿಗೆ ಹಲವಾರು ಕಾರ್ಯಕ್ರಮಗಳು ಮತ್ತು ಯೋಜನೆ ರೂಪಿಸಿ ಅನುಷ್ಟಾನಗೊಳಿಸುವ ಮೂಲಕ ಅಂತ್ಯೋದಯದ ಗುರಿ ಮುಟ್ಟಿಸುವಲ್ಲಿ ಬಿಜೆಪಿ ಬೂತ್ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಕ್ಕೆ ಸೆ.25 ರಂದು ಬಿಜೆಪಿ ಕಚೇರಿಯಲ್ಲಿ ಚಾಲನೆ ನೀಡಲಾಯಿತು.

ಬೆಳಿಗ್ಗೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಗಣಪತಿ ಹೋಮ ನಡೆದ ಬಳಿಕ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾದಿಂದ ಹಾಕಿಕೊಂಡ ಕಾರ್ಯಕ್ರಮದಂತೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದಾನಿಗಳ ಮೂಲಕ ಸುಕನ್ಯ ಸಮೃದ್ಧಿ ಯೋಜನೆ ಖಾತೆ ಪಾಸ್ ಬುಕ್ ವಿತರಣೆ ಮಾಡಲಾಯಿತು, ಉರಗ ರಕ್ಷಕ ಬನ್ನೂರು ಕರ್ಮಲ ನಿವಾಸಿ ತೇಜಸ್ಸ್ ಅವರನ್ನು ಗೌರವಿಸಲಾಯಿತು. ಬಳಿಕ ಪ್ರತಿ ಬೂತಿನಲ್ಲೂ ಪಂಡಿತ್ ದೀನ್‌ದಯಾಳ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಮಾಲಾರ್ಪಣೆ ಮಾಡುವ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ದಂಪತಿ ಹೋಮದಲ್ಲಿ ಪಾಲ್ಗೊಂಡರು. ಅರ್ಚಕ ಉದಯನಾರಾಯಣ ವೈದಿಕ ಕಾರ್ಯಕ್ರಮ ನೆರವೇರಿಸಿದರು.


ಹುಟ್ಟು ಸಾವಿನ ಮಧ್ಯೆ ರಾಷ್ಟ್ರಸಮರ್ಪಿತ ಬದುಕಾಗಬೇಕು:
ಬೆಳಿಗ್ಗೆ ಗಣಪತಿ ಹೋಮದ ಬಳಿಕ ದೀನ್ ದಯಾಳ್ ಉಪಾಧ್ಯಾಯರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಬಿಜೆಪಿ ಕಾರ್ಯಕರ್ತರು ಇವತ್ತು ದೇಶ ಆಡಳಿತ ಹಿಡಿಯಲು ಕಾರಣಕರ್ತರಾದವರು ದೀನ್ ದಯಾಳ್ ಉಪಾಧ್ಯಾಯರು. ಅವರ ಚಿಂತನೆ ಇವತ್ತು ಭಾರತವನ್ನು ಜಗದ್ಗುರು ಭಾರತದತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶ ತ್ರಿಖಂಡ ಭಾರತವಾಗಿ ವಿಭಾಗ ಆದಾಗ ಹಿಂದುತ್ವದ ಭಾವೆಗಳಿಗೆ ದಕ್ಕೆಯಾಗಿತ್ತು. ಇಂತಹ ಸಂದರ್ಭದಲ್ಲಿ ಹಿಂದುಗಳ ಪರವಾಗಿ ರಾಜಕೀಯ ಪಾರ್ಟಿ ಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜನಸಂಘ ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಬಿಜೆಪಿ ಇನ್ನೂ ನೂರು ವರ್ಷ ರಾಜಕಾರಣ ಮಾಡಬೇಕು ಮತ್ತು ಹೇಗಿರಬೇಕೆಂಬ ಚಿಂತನೆ ಹಾಕಿಕೊಟ್ಟವರು ದೀನ್ ದಯಳ್ ಉಪಾಧ್ಯಾಯರು. ಅವರ ಚಿಂತನೆ, ವಿಚಾರ ಇವತ್ತಿಗೂ ಪ್ರಸ್ತುತ ಎಂದ ಅವರು ಏಕಾತ್ಮ ಮಾನವ ದರ್ಶನ ಮತ್ತು ಅಂತ್ಯೋದಯದ ಪರಿಕಲ್ಪನೆಯನ್ನು ತೋರಿಸಿಕೊಟ್ಟ ದೀನ್ ದಯಾಳ್ ಉಪಾಧ್ಯಾಯರು ದೇಶಕ್ಕಾಗಿ ಬದುಕಬೇಕೆಂದ ಸಂದೇಶ ಕೊಟ್ಟಿದ್ದಾರೆ. ಹುಟ್ಟು ಮತ್ತು ಸಾವು ಮನುಷ್ಯನಿಗೆ ಸಹಜವಾಗಿ ಬಂದರೂ ಇವೆರಡರ ನಡುವಿನ ಬದುಕು ರಾಷ್ಟ್ರ ಸಮರ್ಪಿತ ಬದುಕಾಗಬೇಕೆಂದು ಅವರು ತಿಳಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕೆಂದರು.

ಸುಕನ್ಯ ಸಮೃದ್ಧಿಯೋಜನೆ ಪಾಸ್ ಬುಕ್ ವಿತರಣೆ:
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬಿಜೆಪಿ ಮಹಿಳಾ ಮೋರ್ಚಾ ಕಳೆದ ವರ್ಷ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನದಂದು ಆರಂಭಿಸಿದ ಸೇವಾ ಕಾರ್ಯದಂತೆ ಸುಕನ್ಯ ಸಮೃದ್ಧಿಯೋಜನೆಯ ಖಾತೆ ತೆರೆದಿದ್ದು, ಕಳೆದ ವರ್ಷ ೨೦ ಮಕ್ಕಳಿಗೆ ಈ ಯೋಜನೆ ಸೌಲಭ್ಯ ಒದಗಿಸಿದ್ದು, ಈ ವರ್ಷ ಕೋವಿಡ್ ಸಂಕಷ್ಟದಿಂದಾಗಿ ಬಹಳಷ್ಟು ಮಂದಿ ಕುಟುಂಬಗಳಿಗೆ ಖಾತೆಗೆ ಹಣ ಹಾಕಲು ಆಗಿರಲಿಲ್ಲ. ಹಾಗಾಗಿ ಈ ವರ್ಷವೂ ಸುಕನ್ಯ ಸಮೃದ್ಧಿ ಯೋಜನೆ ಪಡೆದ ಕುಟುಂಬದ ಖಾತೆಗಳಿಗೆ ಹಣ ಜಮೆ ಮಾಡಿದ್ದು, ಆ ಪಾಸ್ ಬುಕ್‌ಗಳನ್ನು ಶಾಸಕ ಸಂಜೀವ ಮಠಂದೂರು ಫಲಾನುಭವಿಗಳಿಗೆ ವಿತರಿಸಿದರು. ನಗರ ಮಂಡಲ ಮಹಿಳಾ ಮೋರ್ಚಾದ ಆಧ್ಯಕ್ಷೆ ಶರಾವತಿ ರವಿನಾರಾಯಣ್ ಸುಕನ್ಯ ಸಮೃದ್ಧಿ ಕಾರ್ಯಕ್ರಮ ನಿರ್ವಹಿಸಿದರು.


ಗೌರವ: ದೀನ್‌ದಯಾಳ್ ಉಪಾಧ್ಯಾಯರ ಜನ್ಮದಿನಕ್ಕೆ ಪಕ್ಷದ ಸೂಚನೆಯಂತೆ ಸಾಧಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಮಿಕ್ಕಿ ಉರಗ ರಕ್ಷಣೆ ಮಾಡಿದ ಪುತ್ತೂರು ಬನ್ನೂರು ಕರ್ಮಲ ನಿವಾಸಿ ತೇಜಸ್ಸ್ ಅವರನ್ನು ಪಕ್ಷದ ವತಿಯಿಂದ ಗೌರವಿಸಲಾಯಿತು.


ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಕಾರ್ಯಕ್ರಮ ನಿರ್ವಹಿಸಿದರು. ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ವಂದಿಸಿದರು.

ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಿರ್ದೇಶಕ ರಮೇಶ್ ಭಟ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಉಪಾಧ್ಯಕ್ಷೆ ಜ್ಯೋತಿ ಆರ್ ನಾಯಕ್, ಹಿರಿಯರಾದ ಸುಭಾಶ್ ರೈ ಕಡಮಜಲು, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್, ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷ ಅರ್.ಸಿ.ನಾರಾಯಣ್, ಶಿವಪ್ರಸಾದ್ ಭಟ್, ಜಯರಾಮ ಪೂಜಾರಿ, ಸುರೇಶ್ ಆಳ್ವ, ರಘುನಾಥ್ ರಾವ್, ನಗರಸಭಾ ಸದಸ್ಯರಾದ ಶಶಿಪ್ರಭಾ ಸಿ.ಎಸ್, ಶಿವರಾಮ ಸಪಲ್ಯ, ಕೃಷಿಕ ಸಮಾಜದ ಅಧ್ಯಕ್ಷ ರೈ, ತಾ.ಪಂ ಮಾಜಿ ಸದಸ್ಯರಾದ ದಿವ್ಯಾ ಪುರಷೋತ್ತಮ್, ಮೀನಾಕ್ಷಿ ಮಂಜುನಾತ್, ಮುಕುಂದ ಗೌಡ, ಬನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ರಮಣಿ ಗಾಣಿಗ, ಕೊಂಬೆಟ್ಟು ಬಿಜೆಪಿ ಬೂತ್ ಸಮಿತಿಯ ನವೀನ್ ಪಡಿವಾಳ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.