HomePage_Banner
HomePage_Banner
HomePage_Banner
HomePage_Banner

ಫೇಸ್‌ಬುಕ್ ಬಳಕೆದಾರರೇ ಎಚ್ಚರ ಯುವತಿಯರ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್…!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

@ಯೂಸುಫ್ ರೆಂಜಲಾಡಿ

  • ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸುವ ಮುನ್ನ ಹುಷಾರ್

ಪುತ್ತೂರು: ಹನಿಟ್ರ್ಯಾಪ್ ಮಾಡುವ ವಂಚಕರು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿದ್ದು ನೀವೇನಾದರೂ ಕೊಂಚ ಮೈ ಮರೆತರೂ ಫೇಸ್‌ಬುಕ್ ಮಾಯಾಂಗನೆಯರ ಖೆಡ್ಡಾಗೆ ಬಿದ್ದು ಒದ್ದಾಡುವುದರಲ್ಲಿ ಸಂಶಯವಿಲ್ಲ. ಜಾಲತಾಣಗಳ ಮೂಲಕ ವಿವಿಧ ರೀತಿಯಲ್ಲಿ ವಂಚನೆ ಮಾಡುವವರಿದ್ದರೂ ಇದೀಗ ಹೆಚ್ಚಿನ ವಂಚಕರು ಫೇಸ್‌ಬುಕ್‌ನಲ್ಲೇ ಸಕ್ರಿಯರಾಗಿ ಜನರನ್ನು ಯಾಮಾರಿಸುತ್ತಿದ್ದಾರೆ. ವಿವಿಧ ಮಹಿಳಾ ಹೆಸರುಗಳಲ್ಲಿ ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿರುವ ಖದೀಮರ ಪ್ರೊಫೈಲ್‌ಗಳಲ್ಲಿ ಹೆಣ್ಣಿನ ಫೊಟೋಗಳಿರುತ್ತವೆ. ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ಇವರ ಬಗ್ಗೆ ಜಾಗೃತರಾಗದೇ ಹೋದಲ್ಲಿ ವಂಚನೆಯ ಕೂಪಕ್ಕೆ ಬಿದ್ದು ನರಳಾಡುವ ಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ. ಯಾವುದೇ ಸಂಶಯ ಬಾರದ ರೀತಿಯಲ್ಲಿ ಮೊದಲಿಗೆ ವರ್ತಿಸುವ ಖದೀಮರು ನಂತರ ತಮ್ಮ ಅಸಲಿ ಮುಖ ತೋರಿಸಿಯೇ ಬಿಡುತ್ತಾರೆ.

ವಾಟ್ಸಾಪ್ ನಂಬರ್ ಕೇಳುತ್ತಾರೆ:
ಫೇಸ್‌ಬುಕ್ ಮೂಲಕ ಬರುವ ಅನಾಮಧೇಯ ಹೆಣ್ಣಿನ ಫ್ರೆಂಡ್ ರಿಕ್ವೆಸ್ಟ್‌ನ್ನು ಸ್ವೀಕಾರ ಮಾಡಿದ್ದೇ ಆದಲ್ಲಿ ಆ ಕಡೆಯಿಂದ ಸಂದೇಶ ಬರಲು ಶುರುವಾಗುತ್ತದೆ. ಮೊದಲಿಗೆ ಗೆಳೆಯರ ರೀತಿಯಲ್ಲಿ ವರ್ತಿಸಿ ಫೇಸ್‌ಬುಕ್ ಮೆಸೆಂಜರ್ ಮೂಲಕ ಸಂದೇಶ ಕಳುಹಿಸುವ ಖದೀಮರು ಮೆಸೇಜ್ ಮುಂದುವರಿದಂತೆ ಚಾಟಿಂಗ್ ಮಾಡಲು ವಾಟ್ಸಾಪ್ ನಂಬರ್ ಕೇಳುತ್ತಾರೆ, ವಾಟ್ಸಾಪ್ ನಂಬರ್ ನೀವು ನೀಡಿದ್ದೇ ಆದಲ್ಲಿ ಅದರಲ್ಲಿ ಒಂದೆರಡು ದಿನ ಮೆಸೇಜ್ ಮುಂದುವರಿಯುತ್ತದೆ. ನಂತರ ಯಾವುದೇ ಅನುಮಾನ ಬಾರದಂತೆ ನಟಿಸುವ ವಂಚಕರು ವೀಡಿಯೋ ಕಾಲ್ ಮಾಡಿ ಮಾತನಾಡುವ ಇಂಗಿತ ವ್ಯಕ್ತಪಡಿಸುತ್ತಾರೆ. ವಿಡಿಯೋ ಕಾಲ್ ನೀವು ಸ್ವೀಕರಿಸಿದರೆ ಅಶ್ಲೀಲವಾಗಿ ವರ್ತಿಸುವ ಖದೀಮರು ನಿಮ್ಮನ್ನೂ ಅಶ್ಲೀಲವಾಗಿ ವರ್ತಿಸಲು, ದೇಹದ ಭಾಗಗಳಲ್ಲು ತೋರಿಸಲು ಪ್ರೇರೇಪಿಸುತ್ತಾರೆ. ಮಾತ್ರವಲ್ಲದೇ ಆ ಸಂದರ್ಭದಲ್ಲಿ ಸ್ಕ್ರೀನ್ ರೆಕಾರ್ಡ್ ಕೂಡಾ ಮಾಡಿರುತ್ತಾರೆ. ಥೇಟ್ ಹುಡುಗಿಯೇ ಮಾತನಾಡುವ ರೀತಿಯಲ್ಲಿ ಎಲ್ಲವನ್ನೂ ಮ್ಯಾನೇಜ್ ಮಾಡಿ ಕರೆ ಕಟ್ ಮಾಡುತ್ತಾರೆ. ನಂತರ ನಡೆಯುವ ಪ್ರಸಂಗವೇ ಬೇರೆ.

ಹಣದ ಬೇಡಿಕೆಯಿಟ್ಟು ಬ್ಲ್ಯಾಕ್‌ಮೇಲ್:
ನಂತರ ಇಂತಿಷ್ಟು ದಿನಗಳ ಬಳಿಕ ಇದೇ ಖದೀಮರು ನಿಮಗೆ ಮೆಸೇಜ್ ಮಾಡಿ ಇಂತಿಷ್ಟು ಹಣದ ಬೇಡಿಕೆ ಇಡುತ್ತಾರೆ. ಹಣ ಕೊಡಲು ನೀವು ಹಿಂದೇಟು ಹಾಕಿದ್ದೇ ಆದಲ್ಲಿ ನಿಮ್ಮ ಜೊತೆಗಿನ ಖಾಸಗಿ ಕರೆಯ ವಿಡಿಯೋ, ಫೋಟೋಗಳನ್ನು ನಿಮ್ಮ ವಾಟ್ಸಾಪ್‌ಗೆ ಕಳುಹಿಸಿ ಇದನ್ನು ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸುತ್ತಾರೆ. ಮರ್ಯಾದೆಗೆ ಅಂಜಿ ಅನೇಕರು ಸಾಲ ಮಾಡಿಯಾದರೂ ವಂಚಕರಿಗೆ ಹಣ ನೀಡುತ್ತಾರೆ, ಹಣ ನೀಡಲು ಅಸಾಧ್ಯವಾದರೆ ಜಾಲತಾಣಗಳಲ್ಲಿ ಅವರ ಅಶ್ಲೀಲ ಫೋಟೋ, ವಿಡಿಯೋಗಳನ್ನು ವೈರಲ್ ಮಾಡುತ್ತಾರೆ. ಅನೇಕರು ಆತ್ಮಹತ್ಯೆಗೂ ಮುಂದಾಗುತ್ತಾರೆ. ಹಲವರು ದೊಡ್ಡ ಮೊತ್ತದ ಹಣವನ್ನು ವಂಚಕರ ಕೈಗಿತ್ತು ಸುಮ್ಮನಾದರೆ ಇನ್ನು ಹಣ ಇಲ್ಲದವರ ಮಾನ ಹರಾಜಾದ ಸಾಕಷ್ಟು ಉದಾಹರಣೆಗಳಿವೆ. ಉದ್ಯಮಿಗಳು, ರಾಜಕಾರಣಿಗಳನ್ನೂ ಈ ವಂಚಕರ ತಂಡ ಬಿಟ್ಟಿಲ್ಲ. ರಾಜ್ಯದ ನಾನಾ ಕಡೆಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇದೆ. ಪುತ್ತೂರು, ಕಡಬ ತಾಲೂಕಿನಲ್ಲೂ ಹನಿಟ್ರ್ಯಾಪ್ ಪ್ರಕರಣ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿತ್ತು.

ಅಪರಿಚಿತರ ಫ್ರೆಂಡ್‌ಶಿಪ್ ಬೇಡವೇ ಬೇಡ:
ಆನ್‌ಲೈನ್ ಬ್ಲ್ಯಾಕ್‌ಮೇಲ್ ಜಾಲ ಸಕ್ರಿಯವಾಗಿದ್ದು ಹನಿಟ್ರ್ಯಾಫ್ ಮೂಲಕ ಅಮಾಯಕರನ್ನು ತಮ್ಮ ಖೆಡ್ಡಾಗೆ ಬೀಳಿಸಿ ಹಣ ದೋಚುವ ವ್ಯವಸ್ಥಿತ ತಂಡ ಇದರ ಹಿಂದಿದೆ. ಹಾಗಾಗಿ ಫೇಸ್‌ಬುಕ್ ಸೇರಿದಂತೆ ಯಾವುದೇ ಜಾಲತಾಣಗಳಲ್ಲಿ ಅಪರಿಚಿತರ ಫ್ರೆಂಡ್‌ಶಿಪ್ ಬೆಳೆಸಿ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಿಂತ ಅಪರಿಚಿತರ ಫ್ರೆಡ್‌ಶಿಪ್ ಮಾಡದೇ ಇರುವುದು ಉತ್ತಮ. ಅಪರಿಚಿತರ ಗೆಳೆತನ ಬೆಳೆಸಿ ವಂಚನೆಗೊಳಗಾದ ಬಳಿಕ ಪರಿತಪಿಸುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಸೂಕ್ತ.

ವಂಚಕರನ್ನು ಪತ್ತೆಹಚ್ಚುವುದು ಸುಲಭವಲ್ಲ:
ಸಾಮಾಜಿಕ ಜಾಲತಾಣಗಳ ಮೂಲಕ ಬ್ಲ್ಯಾಕ್‌ಮೇಲ್‌ಗೊಳಗಾದ ಅನೇಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಎಲ್ಲೋ ಕುಳಿತು ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಮಾಡುವವರನ್ನು ಪತ್ತೆ ಹಚ್ಚುವುದೆಂದರೆ ಪೊಲೀಸರಿಗೂ ಅಷ್ಟು ಸುಲಭವಲ್ಲ. ಸೈಬರ್‌ಕ್ರೈಂ ಪೊಲೀಸರಿಗೆ ಇಂತಹ ನೂರಾರು ದೂರುಗಳು ಬರುತ್ತಿದ್ದರೂ ಅದರಲ್ಲಿ ಕೆಲವೊಂದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯೂ ಆಗಿದ್ದಾರೆ. ಸಮಾಜದ ಗಣ್ಯರು ಕೂಡಾ ಇಂತಹ ವಂಚನಾ ಜಾಲಕ್ಕೆ ತುತ್ತಾಗಿ ಕೈ ಸುಟ್ಟುಕೊಂಡಿದ್ದು ಅತ್ತ ಪೊಲೀಸ್ ದೂರನ್ನೂ ನೀಡದೇ ಇತ್ತ ಯಾರಲ್ಲೂ ಹೇಳಿಕೊಳ್ಳಲಾಗದೇ ತಮ್ಮಷ್ಟಕ್ಕೆ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಾಗಿರುವ ಬಗ್ಗೆಯೂ ಮಾಹಿತಿಯಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.