HomePage_Banner
HomePage_Banner
HomePage_Banner
HomePage_Banner

ರಾಮಕುಂಜ ಕ.ಮಾ.ಪ್ರೌಢಶಾಲೆಯಲ್ಲಿ ಕ್ರೀಡಾಕೊಠಡಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕ್ರೀಡಾ ಸಾಧನೆಗೆ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಇರಬೇಕು; ಪ್ರಶಾಂತ್ ರೈ

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಕ್ರೀಡಾಚಟುವಟಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ ಕ್ರೀಡಾ ಕೊಠಡಿಯ ಉದ್ಘಾಟನೆ ಸೆ.25ರಂದು ನಡೆಯಿತು.

ಪ್ರೋ ಕಬಡ್ಡಿ ಆಟಗಾರ ಪ್ರಶಾಂತ್‌ಕುಮಾರ್ ರೈಯವರು ಕ್ರೀಡಾಕೊಠಡಿ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಹಿರಿಯರ, ಗುರುಗಳ ಆಶೀರ್ವಾದದಿಂದ ಕಬಡ್ಡಿಯಲ್ಲಿ ಸಾಧನೆ ಮಾಡಿದ್ದೇನೆ. ಪ್ರೋ.ಕಬಡ್ಡಿ ಆರಂಭಗೊಂಡ ಬಳಿಕ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಬಗ್ಗೆ ಜನರಲ್ಲಿ ಆಸಕ್ತಿಯೂ ಹೆಚ್ಚಾಗಿದ್ದು ಪ್ರೋತ್ಸಾಹವೂ ಸಿಗುತ್ತಿದೆ. ಕ್ರೀಡಾಪಟುವಿನ ಗಾಯ, ನೋವು ಕ್ರೀಡಾಪಟುವಿಗೆ ಮಾತ್ರ ಗೊತ್ತು. ಒಂದೆರಡು ದಿನದ ಅಭ್ಯಾಸದಿಂದ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಕಲಿಕೆಯಲ್ಲಿ ರ್‍ಯಾಂಕ್ ಪಡೆಯಲು ಪಡುವ ಕಠಿಣ ಶ್ರಮದಂತೆ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಇರಬೇಕು. ಇದರ ಜೊತೆಗೆ ಕ್ರೀಡೆಯ ಮೇಲೆ ಪ್ರೀತಿಯೂ ಇರಬೇಕೆಂದು ಹೇಳಿದರು. ಕಲಿತ ಶಾಲೆಯ ಮೇಲೆ ಹೆಚ್ಚಿನ ಪ್ರೀತಿ ಇರುವುದು ಕ್ರೀಡಾಪುಟವಿಗೆ ಮಾತ್ರ. ಕ್ರೀಡೆಯ ಜೊತೆಗೆ ಶಿಕ್ಷಣಕ್ಕೂ ಗಮನಕೊಡುವಂತೆ ಪ್ರಶಾಂತ್ ರೈಯವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗ್ರೇಸ್ ಮಾರ್ಕ್ ಕೊಡಿ:
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.,ರವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಸಾಧಕರಾಗಬೇಕು. ಶಿಕ್ಷಣ ಇಲಾಖೆಯಿಂದ ಕ್ರೀಡಾಪಟುಗಳಿಗೆ ಯಾವುದೇ ಸಹಕಾರ, ಪ್ರೋತ್ಸಾಹ ಸಿಗುತ್ತಿಲ್ಲ. ಕ್ರೀಡಾಪಟುವಿಗೆ ಶೇ.೫ ಇಲ್ಲವೇ ಶೇ.೧೦ರಷ್ಟು ಗ್ರೇಸ್ ಮಾರ್ಕ್ ಕೊಡುವ ಕೆಲಸ ಶಿಕ್ಷಣ ಇಲಾಖೆಯಿಂದ ಆಗಬೇಕು. ಈ ರೀತಿಯಾದಲ್ಲಿ ಮಾತ್ರ ಹೆಚ್ಚಿನ ಕ್ರೀಡಾಪಟುಗಳು ಸೃಷ್ಟಿಯಾಗಲಿದ್ದಾರೆ ಎಂದರು. ಅತಿಥಿಯಾಗಿದ್ದ ಅಮೆಚ್ಚೂರು ಕಬಡ್ಡಿ ಎಸೋಸಿಯೇಶನ್ ಪುತ್ತೂರು ಇದರ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಮಾತನಾಡಿ, ಕ್ರೀಡಾಪಟುವಿಗೆ ಆಟದ ಮೇಲೆ ಶ್ರದ್ಧೆ, ಪ್ರೀತಿ, ನಿಷ್ಠೆ ಇದ್ದಲ್ಲಿ ಪ್ರತಿಫಲ ಸಿಗುತ್ತದೆ. ವಿಜಯಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ನಾಲ್ಕು ಮಂದಿ ಆಟಗಾರರು ಪ್ರೋ.ಕಬಡ್ಡಿಯಲ್ಲಿ ಆಡುತ್ತಿದ್ದಾರೆ. ವಿಜಯಬ್ಯಾಂಕ್ ಕಬಡ್ಡಿ ತಂಡದ ನಾಯಕ, ನಂ.೧ ಆಟಗಾರರೂ ಆಗಿರುವ ಪ್ರಶಾಂತ್ ರೈಯವರು ಎಲ್ಲರಿಗೂ ರೋಲ್ ಮಾಡೆಲ್ ಆಗಿದ್ದಾರೆ ಎಂದರು.

ಇನ್ನೋರ್ವ ಅತಿಥಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಕಡಬ ತಾಲೂಕು ಕ್ರೀಡಾಭಾರತಿ ಅಧ್ಯಕ್ಷ ಶಿವರಾಮ ಏನೆಕಲ್ಲು ಮಾತನಾಡಿ, ಕ್ರೀಡಾಪಟುಗಳು ಉದಾಸೀನತೆ ತೋರದೆ ತರಬೇತಿಯಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಬೇಕೆಂದು ಹೇಳಿದರು. ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡರವರು ಮಾತನಾಡಿ, ಮಾದರಿ ಪ್ರೌಢಶಾಲೆಯಾಗಿರುವ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಆರಂಭಗೊಂಡಿರುವ ಕ್ರೀಡಾ ಕೊಠಡಿ ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಪಟುಗಳನ್ನು ಸೃಷ್ಟಿಸುವ ಕ್ರೀಡಾ ಪ್ರಯೋಗಾಲಯವಾಗಿ ಮೂಡಿ ಬರಲಿ. ಕ್ರೀಡೆ ಉತ್ತಮ ಜೀವನ, ಗೌರವ, ಹಣದ ಜೊತೆಗೆ ದೈಹಿಕ, ಮಾನಸಿಕ ಶಕ್ತಿ,ದೃಢತೆ ಕೊಡುತ್ತದೆ. ಆರೋಗ್ಯವಂತ ಸಮಾಜವನ್ನೂ ನಿರ್ಮಿಸುತ್ತದೆ ಎಂದರು. ಕ್ರೀಡಾಕೊಠಡಿಯ ಪ್ರಾಯೋಜಕರಾದ ಬೆಂಗಳೂರಿನಲ್ಲಿ ಚಾರ್ಟಟೆಡ್ ಎಕೌಂಟೆಂಟ್ ಆಗಿರುವ ಭರತ್ ಶೆಟ್ಟಿಯವರ ಪತ್ನಿ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅಶ್ವಿನಿ ಭರತ್ ಶೆಟ್ಟಿ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಿಕ್ಷಕರಾದ ವೆಂಕಟೇಶ್ ದಾಮ್ಲೆ, ದಿನೇಶ್, ಬಾಲಚಂದ್ರ ಮುಂಚಿತ್ತಾಯ, ಪುಷ್ಪಾವತಿ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರಪುಲ್ಲ ರೈಯವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಮುಖ್ಯಶಿಕ್ಷಕ ಸತೀಶ್ ಭಟ್ ಸ್ವಾಗತಿಸಿ, ಶಿಕ್ಷಕಿ ಸುಪ್ರೀತಾ ವಂದಿಸಿದರು. ಶಿಕ್ಷಕ ಪ್ರವೀಣ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಯೋಧ ರಾಧಾಕೃಷ್ಣ ಗೌಡ ಆನ, ಐಸಿಐಸಿಐ ಬ್ಯಾಂಕ್‌ನ ಕೇಶವ ಗೌಡ, ಪುತ್ತೂರು ಎಸ್‌ಆರ್‌ಕೆ ಲ್ಯಾಡರ್‍ಸ್‌ನ ಕೇಶವ್, ಶ್ರೀರಾಮ ಬೆಂಗಳೂರು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ಲೋಕನಾಥ ರೈ ಕೇಳ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕಟ್ಟಪುಣಿ, ಎ.ಎನ್.ಕೊಳಂಬೆ, ಉಪನ್ಯಾಸಕರು, ಶಿಕ್ಷಕರು,ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕ್ರೀಡಾ ಮಾದರಿ ಹಸ್ತಾಂತರ;
ಕಬಡ್ಡಿ, ವಾಲಿಬಾಲ್ ಕೋರ್ಟ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದ ಮಾದರಿಗಳನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಲಾಯಿತು. ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಶಾಲು ಹಾಕಿ, ದೀಪ, ಪುಸ್ತಕ ನೀಡಿ ಗೌರವಿಸಲಾಯಿತು. ಕೊಠಡಿ ನಿರ್ಮಾಣದ ನೇತೃತ್ವ ವಹಿಸಿದ್ದ ಸಂಸ್ಥೆಯ ಸಿಬ್ಬಂದಿ ರಾಧಾಕೃಷ್ಣ ಆನರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.