HomePage_Banner
HomePage_Banner
HomePage_Banner
HomePage_Banner

ನರಿಮೊಗರು: ಬಿಜೆಪಿಯಿಂದ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ, ಹಿರಿಯ ಕಾರ್ಯಕರ್ತರಿಗೆ ಸನ್ಮಾನ 

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

         ಪಕ್ಷವನ್ನು ಬೆಳೆಸುವಲ್ಲಿ ಹಿರಿಯರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ-ನವೀನ್ ಕುಮಾರ್ ರೈ

 

ಪುತ್ತೂರು: ಬಿಜೆಪಿ ನರಿಮೊಗರು ಶಕ್ತಿ ಕೇಂದ್ರ, ಪಾಣಾಜೆ ಮಹಾಶಕ್ತಿ ಕೇಂದ್ರ, ಪಾಣಾಜೆ ಮಹಿಳಾ ಶಕ್ತಿ ಕೇಂದ್ರ ಇವರ ಜಂಟಿ ಸಹಯೋಗದಲ್ಲಿ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನ ಹಾಗೂ ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಪಕ್ಷದ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸುವುದರೊಂದಿಗೆ ಆಚರಿಸಲಾಯಿತು. ನರಿಮೊಗರು ಗ್ರಾಮದ ಚಂದ್ರಶೇಖರ ಶೆಟ್ಟಿ ಶೆಟ್ಟಿಮಜಲು ಹಾಗೂ ರಾಮಣ್ಣ ಹೆಗ್ಡೆ ಮುಕ್ವೆ ಅವರನ್ನು ಸನ್ಮಾನಿಸಲಾಯಿತು. ನರಿಮೊಗರು ಶಕ್ತಿ ಕೇಂದ್ರದ ಪ್ರಮುಖರಾದ ಎಸ್ ನವೀನ್ ಕುಮಾರ್ ರೈ ಮಾತನಾಡಿ ಪಕ್ಷವನ್ನು ಬೆಳೆಸುವಲ್ಲಿ ನಮ್ಮ ಹಿರಿಯರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ.


 

ಆದ್ದರಿಂದ ಹಿರಿಯರ ಆಶೀರ್ವಾದ ನಮಗೆ ಯಾವತ್ತೂ ಮುಖ್ಯ ಎಂದು ತಿಳಿಸಿದರು. ಮೋಹನ್ ರೈ, ಪಾಣಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಮ ಪೂಜಾರಿ, ಮಹಿಳಾ ಘಟಕದ ಕಾರ್ಯದರ್ಶಿ ಯಶೋದ ಕೆ, ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ರೈತ ಮೋರ್ಚಾದ ಕೋಶಾಧಿಕಾರಿ ಶರತ್ ಚಂದ್ರ ಬೈಪಡಿತ್ತಾಯ ಸಂದರ್ಭೋಚಿತವಾಗಿ ಮಾತನಾಡಿದರು. ಜಿಲ್ಲಾ ಒ.ಬಿ.ಸಿ ಮೋರ್ಚಾದ ಕಾರ್ಯದರ್ಶಿ ಉದಯ ಕುಮಾರ್, ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ಸದಸ್ಯರಾದ ಪುಷ್ಪಾ, ಚಿತ್ರಾ, ಕೇಶವ, ಗಣೇಶ, ಜಯಲಕ್ಷ್ಮಿ, ಹರಿಣಿ, ಪುಷ್ಪಾವತಿ, ಸುಂದರ ನಾಯ್ಕ, ಉಮೇಶ್ ಎಂ, ಬಿಜೆಪಿ ಬೂತ್ ಕಾರ್ಯದರ್ಶಿ ಗುರುಪ್ರಸಾದ್, ಸುರೇಶ್ ಪ್ರಭು, ಕೃಷ್ಣಪ್ಪ, ರಾಜಶೇಖರ್, ತಿಮ್ಮಪ್ಪ ಹೆಗ್ಡೆ ಉಪಸ್ಥಿತರಿದ್ದರು. ಪಾಣಾಜೆ ಮಹಿಳಾ ಶಕ್ತಿ ಕೇಂದ್ರದ ಅಧ್ಯಕ್ಷೆ ಮಲ್ಲಿಕಾ ಲತಾ ರೈ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.