HomePage_Banner
HomePage_Banner
HomePage_Banner
HomePage_Banner

ದ್ವಿತೀಯ ಪಿಯುಸಿ; ಭೌತಿಕ ಪರೀಕ್ಷೆ ಬರೆದಿದ್ದ ನೆಲ್ಯಾಡಿಯ ಶ್ರೇಯಾಗೆ 37 ಹೆಚ್ಚುವರಿ ಅಂಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕೋವಿಡ್ ಹಿನ್ನೆಲೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೆ ಎಸ್ಎಸ್ಎಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಪ್ರಕಟಿಸಿದ್ದ ಫಲಿತಾಂಶ ತಿರಸ್ಕರಿಸಿ ಹೊಸದಾಗಿ ಭೌತಿಕ ಪರೀಕ್ಷೆ ಬರೆದಿದ್ದ ನೆಲ್ಯಾಡಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ 37 ಹೆಚ್ಚುವರಿ ಅಂಕ ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೆ ಎಸ್ಎಸ್ಎಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದಲ್ಲಿ ಶಿಕ್ಷಣ ಇಲಾಖೆ ಪ್ರಕಟಿಸಿದ ಫಲಿತಾಂಶದಲ್ಲಿ ಶ್ರೇಯಾ 600ರಲ್ಲಿ 555ಅಂಕ ಪಡೆದುಕೊಂಡಿದ್ದರು. ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ತಲಾ 100, ಅರ್ಥಶಾಸ್ತ್ರ92 , ವ್ಯವಹಾರ ಅಧ್ಯಯನ89, ಲೆಕ್ಕಶಾಸ್ತ್ರ89 ಹಾಗೂ ಸಂಖ್ಯಾ ಶಾಸ್ತ್ರ85 ಅಂಕ ಪಡೆದುಕೊಂಡಿದ್ದರು. ಫಲಿತಾಂಶವನ್ನು ತಿರಸ್ಕರಿಸಿದ ಶ್ರೇಯಾ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಿನಲ್ಲಿ ನಡೆದ ಭೌತಿಕ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ವಿಷಯದಲ್ಲಿ ಪರೀಕ್ಷೆ ಬರೆದಿದ್ದರು. ಇದರ ಫಲಿತಾಂಶ ಸೆ.20ರಂದು ಪ್ರಕಟಗೊಂಡಿದ್ದು ಶ್ರೇಯಾರವರು ಒಟ್ಟು 600ರಲ್ಲಿ 592 ಅಂಕ ಪಡೆದುಕೊಂಡಿದ್ದಾರೆ. ಅರ್ಥಶಾಸ್ತ್ರ97, ವ್ಯವಹಾರ ಅಧ್ಯಯನ98, ವಾಣಿಜ್ಯಶಾಸ್ತ್ರ98, ಸಂಖ್ಯಾಶಾಸ್ತ್ರ99 ಅಂಕ ಪಡೆದುಕೊಂಡು ತೇರ್ಗಡೆಯಾಗಿದ್ದಾರೆ. ಶ್ರೇಯಾ ಉಪ್ಪಿನಂಗಡಿ ನಿವಾಸಿ ಚಿದಂಬರಂ ಹಾಗೂ ರೇಷ್ಮಾ ದಂಪತಿ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.