HomePage_Banner
HomePage_Banner
HomePage_Banner
HomePage_Banner

ಅಸ್ಸಾಮಿನಲ್ಲಿ ಪ್ರತಿಭಟನಾಕಾರರ ಮೇಲೆ ದಾಳಿ, ದಾರುಣ ಹತ್ಯೆ ವಿರುದ್ಧ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಉಪ್ಪಿನಂಗಡಿಯಲ್ಲಿ ಪಾಪ್ಯುಲರ್ ಫ್ರಂಟ್ ವತಿಯಿಂದ ಪ್ರತಿಭಟನೆ

ಉಪ್ಪಿನಂಗಡಿ: ಅಸ್ಸಾಮಿನಲ್ಲಿ ಪ್ರತಿಭಟನಾಕಾರರ ಮೇಲೆ ದಾಳಿ ಹಾಗೂ ದಾರುಣ ಹತ್ಯೆ ನಡೆಸಿರುವ ಅಸ್ಸಾಂ ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ಉಪ್ಪಿನಂಗಡಿಯಲ್ಲಿ ಸೆ. 25ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಯಿತು.

ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅಸ್ಸಾಂನಲ್ಲಿ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿರುವ ಅಸ್ಸಾಂ ರಾಜ್ಯ ಸರ್ಕಾರ ಮತ್ತು ಅಲ್ಲಿನ ಪೊಲೀಸರ ವಿರುದ್ಧ ಘೋಷಣೆ ಕೂಗಿ ಖಂಡಿಸಿ, ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.

ಇಮಾಂ ಕೌನ್ಸಿಲ್ ಆಲ್ ಇಂಡಿಯಾ ಅಧ್ಯಕ್ಷ ಜಾಫರ್ ಸಾದಿಕ್ ಫೈಝಿ ಮತ್ತು ಪಿ.ಎಫ್.ಐ. ನೆಕ್ಕಿಲಾಡಿ ಡಿವಿಜನ್ ಕಾರ್‍ಯದರ್ಶಿ ಸಮದ್ ಶಾಂತಿನಗರ ಮಾತನಾಡಿ ದೇಶದಲ್ಲಿ 2014 ರ ಬಳಿಕ ಬಂದ ಕೋಮುವಾದಿ ಸರ್ಕಾರ ದೇಶದ ಎಲ್ಲೆಡೆಯಲ್ಲಿ ಕರಾಳತೆಯನ್ನು ತಂದಿಟ್ಟಿದೆ. ಅದರ ಭಾಗವಾಗಿ ಅಸ್ಸಾಂನಲ್ಲಿ ದ್ವೇಷ ರಾಜಕೀಯದೊಂದಿಗೆ ಮುಸ್ಲಿಂ ಸಮುದಾಯದ ಮೇಲೆ ದಾಳಿ, ದಾರುಣ ಹತ್ಯೆ ನಡೆಯುತ್ತಿದ್ದು, ಇದು ಖಂಡನೀಯವಾಗಿದೆ ಎಣದರು.

ಪ್ರತಿಭಟನೆಯಲ್ಲಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜಿಸ್ಟಿಕ್ ಮಾತನಾಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪದಾಧಿಕಾರಿಗಳಾದ ಸುಲೈಮಾನ್ ಕೊಳ್ಳೇಜಾಲ್, ಝಕರಿಯಾ ಕೊಡಿಪ್ಪಾಡಿ, ಅಬ್ದುಲ್ ರಹಿಮಾನ್ ಹಾಜಿ, ಮುಸ್ತಫಾ ಜಿ.ಎನ್. ಯೂಸುಫ್ ಬೇರಿಕೆ, ರಜಾಕ್ ಕುದ್ರಡ್ಕ, ರಶೀದ್ ಮಠ, ಕಿಲರ್ ಕೆಮ್ಮಾರ, ಆದಂ ಬಾವಾ ಪಂಜಾಳ, ಸಿದ್ದಿಕ್ ನೆಲ್ಯಾಡಿ, ಉಸ್ಮಾನ್ ನೆಲ್ಯಾಡಿ, ಹನೀಫ್ ಬಿಳಿಯೂರು ಉಪಸ್ಥಿತರಿದ್ದರು.  ಇಕ್ಬಾಲ್ ಕೆಂಪಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.