HomePage_Banner
HomePage_Banner
HomePage_Banner
HomePage_Banner

ಸರಕಾರಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ದಿವಸ್ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಣೆ
ಪುತ್ತೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಆಯುಷ್ಮಾನ್ ದಿವಸ್ ಅನ್ನು ಸೆ.25ರಂದು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.

 

ಸರಕಾರಿ ಆಸ್ಪತ್ರೆಯ ಡಾ.ಜಯದೀಪ್ ಕಾರ್ಯಕ್ರಮದ ಕುರಿತು ಮಾತನಾಡಿ, ಪ್ರಧಾನಮಂತ್ರಿ ಮೋದಿಯವರು ಮೂರು ವರ್ಷಗಳ ಹಿಂದೆ ಆಯುಷ್ಮಾನ್ ಯೋಜನೆಯನ್ನು ಜಾರಿಗೊಳಿಸಿದ್ದು, ಎಲ್ಲೆಡೆಯೂ ಆರೋಗ್ಯ-ಎಲ್ಲರಿಗೂ ಆರೋಗ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಇದನ್ನು ಆರಂಭಗೊಳಿಸಲಾಗಿದೆ. ಈ ಯೋಜನೆಯಲ್ಲಿ ಬಿಪಿಎಲ್‌ದಾರರಿಗೆ ಸಂಪೂರ್ಣ ಉಚಿತ ಹಾಗೂ ಎಪಿಎಲ್‌ದಾರರಿಗೆ ಶೇ.30 ರಷ್ಟು ಧನಸಹಾಯ ನೀಡಲಾಗುತ್ತಿದೆ ಎಂದು ತಿಳಿಸಿದರು. ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ಅವರು ಮಾತನಾಡಿ, ಆಯುಷ್ಮಾನ್ ಯೋಜನೆಯಿಂದ ಆಸ್ಪತ್ರೆ ಸಾಕಷ್ಟು ಅಭಿವೃದ್ಧಿಗೊಂಡಿದೆ ಎಂದರು. ವೇದಿಕೆಯಲ್ಲಿ ಡಾ.ಅರ್ಚನಾ ಕಾವೇರಿ, ಡಾ.ಅಜಯ್, ಡಾ.ಸ್ಮಿತಾರಾಣಿ, ಡಾ.ರಾಧಿಕಾ, ಡಾ.ಸೂರಜ್, ಡಾ.ಮಧುರಾಜ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಯ್ದ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು. ಆರೋಗ್ಯ ಮಿತ್ರದ ಹರೀಶ್ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಎಫ್.ಜಿ.ಎಮ್.ಗೌಡ ವಂದಿಸಿದರು.

ಆರೋಗ್ಯ ರಕ್ಷಾ ಸಮಿತಿಗೆ ಮಾಹಿತಿಯಿಲ್ಲ:
ಸರಕಾರದ ಮಹತ್ವಪೂರ್ಣ ಯೋಜನೆಯಾದ ಆಯುಷ್ಮಾನ್‌ನ ದಿವಸ್ ಕಾರ್ಯಕ್ರಮದ ಕುರಿತು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಮಾಹಿತಿ ಇರಲಿಲ್ಲ. ಕೋವಿಡ್ ನಿಯಮಕ್ಕೆ ಸಂಬಂಧಿಸಿ ಹೆಚ್ಚು ಜನ ಸೇರಬಾರದು ಎಂದು ಆಸ್ಪತ್ರೆಯ ಆರೋಗ್ಯ ಮಿತ್ರದ ಹರೀಶ್ ಅವರು ಸಾಂಕೇತಿಕವಾಗಿ ಆಯುಷ್ಮಾನ್ ದಿವಸ್ ಆಚರಣೆ ಮಾಡಿರುವುದಾಗಿ ತಿಳಿದು ಬಂದಿದೆ. ಇದರ ಬೆನ್ನಲ್ಲೆ ಕಾರ್ಯಕ್ರಮದ ಕುರಿತು ನಮಗೆ ಮಾಹಿತಿ ಇರಲಿಲ್ಲ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.