HomePage_Banner
HomePage_Banner
HomePage_Banner
HomePage_Banner

ಪುತ್ತೂರಿನಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಶೇ.100ರಷ್ಟು ವಾಹನ ಸೌಲಭ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

6 ಪಂಚಾಯತ್‌ಗಳಿಗೆ ಹೊಸ ವಾಹನಗಳ ಹಸ್ತಾಂತರ

ಸ್ವಚ್ಛ ಸುಂದರ ಪಂಚಾಯತ್‌ಗೆ ನಗದು ಪ್ರಶಸ್ತಿ ಶಾಸಕ ಸಂಜೀವ ಮಠಂದೂರು ಘೋಷಣೆ

ಪುತ್ತೂರು: ತಾಲೂಕಿನಲ್ಲಿ ಶೇ.100 ರಷ್ಟು ಘನ ತ್ಯಾಜ್ಯ ವಿಲೇವಾರಿ ಗುರಿಯನ್ನು ಹೊಂದುವ ಮೂಲಕ ಗ್ರಾ.ಪಂಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಒಂದು ವರ್ಷದ ಹಿಂದೆ ನೂತನ 10 ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಇದೀಗ ಸೆ.27ರಂದು ಇನ್ನೂ 6 ವಾಹನಗಳಿಗೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡುವ ಮೂಲಕ ತಾಲೂಕಿನಲ್ಲಿ ಶೇ.100 ಘನ ತ್ಯಾಜ್ಯ ಸಾಗಾಟದ ವಾಹನ ಪೂರ್ಣಗೊಂಡಿದೆ. ಆ ಮೂಲಕ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವಲ್ಲಿ ಜಿಲ್ಲೆಯಲ್ಲೇ ಪುತ್ತೂರು ತಾಲೂಕು ಪ್ರಥಮ ತಾಲೂಕು ಎನಿಸಿದೆ.


ವರ್ಷದ 365ದಿನವೂ ಸ್ವಚ್ಛತೆಗೆ ಆದ್ಯತೆ ನೀಡಬೇಕು:
ಸ್ವಚ್ಛಭಾರತ್ ಮಿಷನ್ ಮತ್ತು 15ನೇ ಹಣಕಾಸು ಯೋಜನೆಯಡಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ತಲಾ ರೂ. 7.80ಲಕ್ಷದಂತೆ 6 ವಾಹನಗಳನ್ನು ಶಾಸಕ ಸಂಜೀವ ಮಠಂದೂರು ಅವರು 6 ಗ್ರಾ.ಪಂಗಳ ಅಧ್ಯಕ್ಷರಿಗೆ ವಾಹನದ ಕೀಲಿ ಕೈ ನೀಡಿ ಹಸಿರು ನಿಶಾನೆ ತೋರಿಸಿದರು. ಬಳಿಕ ಅವರು ಮಾತನಾಡಿ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ದೇಶದ ಪ್ರಧಾನಿಯವರು ವಿಶೇಷ ಕಾಳಜಿ ವಹಿಸಿ ಗ್ರಾಮೀಣ ಭಾಗದ ಜನರ ಆರೋಗ್ಯಕ್ಕಾಗಿ ಸ್ವಚ್ಛ ಭಾರತ್ ಮಿಷನ್ ಇಲಾಖೆಯ ಮೂಲಕ ಅನುದಾನ ನೀಡಿದ್ದಾರೆ. ಅದರ ಸದ್ಬಳಕೆಯಿಂದ ಜನಸಾಮಾನ್ಯರಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಬೇಕು. ಮಹಾತ್ಮಗಾಂಧೀಜಿಯವರು ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಈ ಕಾಳಜಿ ಅ.2ರಂದು ಗಾಂಧೀ ಜಯಂತಿಯಂದು ಮಾತ್ರವಲ್ಲದೆ ವರ್ಷದ 365 ದಿವಸವೂ ಸ್ವಚ್ಛತೆಗೆ ಆದ್ಯತೆ ನೀಡುವ ಕೆಲಸ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ಮಾಡುತ್ತಿದೆ ಎಂದರು. ಇವತ್ತು ವಾಹನ ಪಡೆದ ೬ ಪಂಚಯತ್ ಗಳು ಮುಂದಿನ ಆರ್ಥಿಕ ವರ್ಷದಲ್ಲಿ ಮಾದರಿ ಪಂಚಾಯತ್ ಆಗಿ ಮೂಡಿ ಬರಲಿ ಎಂದರು. ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾಡಿ, ಸಹಾಯಕ ನಿರ್ದೇಶಕಿ ಶೈಲಜಾ, ಬನ್ನೂರು ಗ್ರಾ.ಪಂ.ಅಧ್ಯಕ್ಷೆ ಜಯ ಏಕ ರಮೇಶ್, ಬಲ್ನಾಡು ಗ್ರಾ.ಪಂ.ಅದ್ಯಕ್ಷೆ ಇಂದಿರಾ ಎಸ್ ರೈ, ಬೆಟ್ಟಂಪಾಡಿ ಗ್ರಾ.ಪಂ.ಅಧ್ಯಕ್ಷೆ ಪವಿತ್ರಾ, ಒಳಮೊಗ್ರು ಗ್ರಾ.ಪಂ.ಅಧ್ಯಕ್ಷೆ ತ್ರಿವೇಣಿ, ಬಜತ್ತೂರು ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ, ಕಬಕ ಗ್ರಾ.ಪಂ.ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ, ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರಿಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಸ್ವಚ್ಛ ಸುಂದರ ಪಂಚಾಯತ್‌ಗೆ ರೂ. 10ಸಾವಿರ ನಗದು ಬಹುಮಾನ
ಗಾಂಧಿ ಜಯಂತಿಯಂದು ಸ್ವಚ್ಛ ಸುಂದರ ಪಂಚಾಯತ್‌ಗೆ ಶಾಸಕನ ನೆಲೆಯಲ್ಲಿ ವೈಯುಕ್ತಿಕ ನಗದು ಬಹುಮಾನ ಪ್ರಶಸ್ತಿಯನ್ನು ನೀಡುತ್ತೇನೆ. ರೂ. 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಪಡೆಯುವಲ್ಲಿ ಪಂಚಾಯತ್‌ಗಳು ಸ್ವಚ್ಚತೆಯಲ್ಲಿ ಸಾಧನೆ ಮಾಡಬೇಕು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಉತ್ತಮ ಪಂಚಾಯತ್ ಅನ್ನು ಆಯ್ಕೆ ಮಾಡಲಿದ್ದಾರೆ. ಮುಂದಿನ ವರ್ಷದ ಗಾಂಧಿ ಜಯಂತಿಗೆ ಪ್ರಶಸ್ತಿ ಪಡೆಯಲು ಉತ್ತಮ ಕೆಲಸ ಕಾರ್ಯ ಮಾಡಿ.
ಸಂಜೀವ ಮಠಂದೂರು, ಶಾಸಕರು ಪುತ್ತೂರು

ಘನ ತ್ಯಾಜ್ಯ ವಿಲೇವಾರಿಯಲ್ಲಿ ಶೇ.100 ಗುರಿ ಸಾಧಿಸಿದ್ದೇವೆ
ತಾಲೂಕಿನಲ್ಲಿ ಘನ ತ್ಯಾಜ್ಯ ಸಾಗಾಟಕ್ಕೆ ಪಂಚಾಯತ್‌ಗಳಿಗೆ ಶೇ.100 ವಾಹನ ಸೌಲಭ್ಯವಾಗಿದೆ. ಇವತ್ತು ಬನ್ನೂರು, ಬಲ್ನಾಡು, ಕಬಕ, ಬೆಟ್ಟಂಪಾಡಿ, ಒಳಮೊಗ್ರು, ಬಜತ್ತೂರಿಗೆ ವಾಹನ ನೀಡಲಾಗಿದೆ. ಕಡಿಮೆ ವಾಣಿಜ್ಯ ಇರುವ ಗ್ರಾ.ಪಂಗಳಲ್ಲಿ ಒಣ ತ್ಯಾಜ್ಯ ಮಾತ್ರ ಸಂಗ್ರಹಿಸಲಾಗುತ್ತಿದೆ. ಹೆಚ್ಚು ವಾಣಿಜ್ಯ ಇರುವ ಗ್ರಾ.ಪಂಗಳಲ್ಲಿ ಹಸಿ ಕಸವನ್ನೂ ಕೂಡಾ ಸಂಗ್ರಹಿಸಲಾಗುತ್ತಿದೆ. ಇನ್ನು ೨೨ ಗ್ರಾಮಗಳ ಪೈಕಿ ನರಿಮೊಗರು ಮತ್ತು ಬನ್ನೂರು ಗ್ರಾ.ಪಂಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ನಿವೇಶನ ಆಗಲಿಲ್ಲ. ಉಳಿದಲ್ಲಾ ಗ್ರಾ.ಪಂಗಳಿಗೆ ಘನ ತ್ಯಾಜ್ಯ ವಿಲೇವಾರಿಗೆ ನಿವೇಶನ ಆಗಿದೆ. ಒಟ್ಟು ಘನ ತ್ಯಾಜ್ಯ ವಿಲೇವಾರಿಯಲ್ಲಿ ಶೇ.100 ಗುರಿ ಸಾಧಿಸಿದ್ದೇವೆ.
ನವೀನ್ ಭಂಡಾರಿ, ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.