HomePage_Banner
HomePage_Banner
HomePage_Banner
HomePage_Banner

ಸೆ.29(ನಾಳೆ) ಕೆದಂಬಾಡಿ, ಕೆಯ್ಯೂರು, ಬಡಗನ್ನೂರು, ನೆಟ್ಟಣಿಗೆಮುಡ್ನೂರು ಗ್ರಾಪಂಗಳಿಗೆ ಸುದ್ದಿಯ ಗ್ರಾಮ ಸ್ವರಾಜ್ಯ ಗಾಂಧಿರಥ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸುದ್ದಿ ಬಿಡುಗಡೆ ವತಿಯಿಂದ ಹಮ್ಮಿಕೊಂಡಿರುವ ಗ್ರಾಮ ಸ್ವರಾಜ್ಯ ಗಾಂಧಿ ರಥ ಈಗಾಗಲೇ ಪುತ್ತೂರು ಹಾಗೂ ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಸಂಚರಿಸಿದ್ದು ಎಲ್ಲಾ ಕಡೆಯೂ ಅದ್ದೂರಿ ಸ್ವಾಗತ ದೊರೆತಿದೆ. ಗ್ರಾ.ಪಂ.ಗಳಲ್ಲಿ ಗ್ರಾ.ಪಂ.ಅಧ್ಯಕ್ಷರು, ಸದಸ್ಯರುಗಳು, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ರಥವನ್ನು ಸ್ವಾಗತಿಸಿ ಶುಭಹಾರೈಸಿದ್ದಾರೆ. ಗ್ರಾಮ ಸ್ವರಾಜ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಗ್ರಾಮ ಸ್ವರಾಜ್ಯದತ್ತ ರಾಮರಾಜ್ಯದ ಕಡೆಗೆ ಜನರ ನಡಿಗೆ ಎಂಬ ಘೋಷಣೆಯೊಂದಿಗೆ ಅ.2ರಂದು ಗಾಂಧಿಜಯಂತಿಯ ದಿನ ಪ್ರತಿ ಗ್ರಾಮಗಳಲ್ಲಿ ಗಾಂಧಿ ನಡಿಗೆ ನಡೆಯಬೇಕು ಎನ್ನುವುದು ಸುದ್ದಿಬಿಡುಗಡೆಯ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಯು.ಪಿ.ಶಿವಾನಂದರವರ ಕಲ್ಪನೆಯಾಗಿದ್ದು ಇದರ ಪ್ರಚಾರ ರಥವು ಸೆ.೨೯ ರಂದು ಕೆದಂಬಾಡಿ, ಕೆಯ್ಯೂರು, ಬಡಗನ್ನೂರು ಮತ್ತು ನೆಟ್ಟಣಿಗೆಮುಡ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಬೆಳಿಗ್ಗೆ 10.30ಗಂಟೆಗೆ ಕೆದಂಬಾಡಿ ಗ್ರಾ.ಪಂ., 11.30 ಕ್ಕೆ ಕೆಯ್ಯೂರು ಗ್ರಾಪಂ, ೦೧ ಗಂಟೆಗೆ ಬಡಗನ್ನೂರು, ಅಪರಾಹ್ನ 3 ಗಂಟೆಗೆ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ರಥ ಸಂಚರಿಸಲಿದೆ. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ, ಸದಸ್ಯರುಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಸುದ್ದಿ ಬಳಗದಿಂದ ವಿನಂತಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.