HomePage_Banner
HomePage_Banner
HomePage_Banner
HomePage_Banner

ಒಳಮೊಗ್ರು: ಕಾಂಗ್ರೆಸ್ ಬೂತ್‌ಕಾರ್ಯಕರ್ತರ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಗ್ರಾಮ ಗ್ರಾಮದಲ್ಲಿ ಪಕ್ಷದ ಬಲವರ್ಧನೆ ಕೆಲಸ ಕಾರ್ಯಕರ್ತರಿಂದ ಆಗುತ್ತಿದೆ; ಎಂ ಬಿ ವಿಶ್ವನಾಥ ರೈ
  • ನೆಮ್ಮದಿಯ ಜೀವನಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ: ಅಶೋಕ್ ಪೂಜಾರಿ

ಪುತ್ತೂರು: ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಯುವ ಜನತೆ ವಿದ್ಯೆ ಇದ್ದರೂ ಉದ್ಯೋಗ ಸಿಗುತ್ತಿಲ್ಲ, ಕೂಲಿ ಕಾರ್ಮಿಕರಿಗೂ ಕೆಲಸವಿಲ್ಲ. ಬೆಲೆ ಏರಿಕೆಯಿಂದ ಪ್ರತೀ ಮನೆಯಲ್ಲೂ ತಿನ್ನುವ ಅನ್ನಕ್ಕೂ ಕಷ್ಟ ಉಂಟಾಗುತ್ತಿದೆ ಇದಕ್ಕೆಲ್ಲಾ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವೇ ಕಾರಣ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹೇಳಿದರು.

ಅವರು ಅಜಲಡ್ಕ ಸಮುದಾಯ ಭವನದಲ್ಲಿ ನಡೆದ ಒಳಮೊಗ್ರು 5 ನೇ ಬೂತ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಇಂಧನ ಬೆಲೆ ಏರಿಕೆ ಜೊತೆಗೆ ಅಡುಗೆ ಅನಿಲ ಬೆಲೆಯೂ ಏರಿಕೆಯಾಗಿದೆ. ಇವೆರಡರ ನಡುವೆ ದಿನಸಿ ಸಾಮಾಗ್ರಿಗಳ ಬೆಲೆಯೂ ಗಗನಕ್ಕೇರಿದೆ. ದುಡಿದು ತಿನ್ನುವ ಕೈಗಳಿಗೆ ಕೆಲಸವಿಲ್ಲದೆ, ಕೈಯ್ಯಲ್ಲಿ ಹಣ ಇಲ್ಲದೆ ಜನ ನಿತ್ಯ ಗೋಳು ಅನುಭವಿಸುತ್ತಿದ್ದಾರೆ. ಜನರ ನೋವು ಬಿಜೆಪಿ ಸರಕಾರಗಳಿಗೆ ಅರ್ಥವಾಗುತ್ತಿಲ್ಲ. ಪ್ರತೀಯೊಬ್ಬ ಕಾರ್ಯಕರ್ತರೂ ಇದನ್ನು ಮನೆ ಮನೆಗೆ ತೆರಳಿ ವಿವರಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದ ಅವರು ಚುನವಣೆ ಸಂದರ್ಭದಲ್ಲಿ ಧರ್ಮ, ದೇವರ ಹೆಸರಲ್ಲಿ ಜನರ ಭಾವನೆಯನ್ನು ಕೆರಳಿಸಿ ಅಧಿಕಾರ ಗದ್ದುಗ ಏರುವ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜನರನ್ನು ಮರೆತು ಬಿಡುತ್ತಾರೆ. ಜನರಿಗೆ ಮಾತ್ರವಲ್ಲದೆ ಬಿಜೆಪಿ ಆಡಳಿತದಿಂದ ದೇವಸ್ಥಾನಗಳಿಗೂ ಉಳಿಗಾಲವಿಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಗ್ರಾಮದ ಪ್ರತೀಯೊಂದು ಮನೆಗೂ ಕಾರ್ಯಕರ್ತರ ನೇತೃತ್ವದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ನೆಮ್ಮದಿಯ ಜೀವನಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ: ಅಶೋಕ್ ಪೂಜಾರಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಮ ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಪೂಜಾರಿ ಬೊಳ್ಳಾಡಿ ಮಾತನಾಡಿ ದೇಶದಲ್ಲಿ ಸೇರಿದಂತೆ ದೇಶದ ಹಳ್ಳಿಯ ಜನರು ನೆಮ್ಮದಿಯಿಂದ ಬದುಕಬೇಕಾದರೆ ಕೇಂದ್ರದಲ್ಲಿ , ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಬಡ ಜನರ ಬದುಕಿಗೆ ಕೊಳ್ಳಿ ಇಡುವ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ , ದೇಶದ ಆರ್ಥಿಕ ಸ್ಥಿತಿ ಶೋಚನೀಯವಾಗಿದ್ದರೂ ಪ್ರಧಾನಿಗಳು ಶೋಕಿ ಜೀವನ ನಡೆಸುತ್ತಿದ್ದಾರೆ, ಜನರ ನೋವುಗಳನ್ನು ಆಲಿಸುತ್ತಿಲ್ಲ ಹೇಳಿದರು.ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರಾಮುಖ್ಯತೆ ನೀಡುವ ಬಿಜೆಪಿ ಸರಕಾರ ಸಣ್ಣ ವ್ಯಾಪಾರಿಗಳ ವ್ಯಾಪಾರಕ್ಕೆ ಹೊಡೆತವನ್ನು ನೀಡುತ್ತಿದೆ. ನೋಟ್ ಬ್ಯಾನ್ ಮತ್ತು ಅವೈಜ್ಞಾನಿಕ ಜಿಎಸ್‌ಟಿ ಕಾರಣಕ್ಕೆ ಅನೇಕ ಸಣ್ಣ ಉದ್ಯಮಗಳು ಬಂದಾಗಿದೆ, ಅನೇಕ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಪಕ್ಷದ ಹಿರಿಯ ಕಾರ್ಯಕರ್ತ ವಿಠಲಪೂಜಾರಿ ಮಾತನಾಡಿ ಪಕ್ಷ ಸಂಘಟನೆಯ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ನೀಡಿ ಪಕ್ಷ ಬಲವರ್ಧನೆಗೆ ಎಲ್ಲರೂ ಶಕ್ತಿ ಮೀರಿ ಕೆಲಸ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರುಗಳಾದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಶಶಿಕಿರಣ್ ರೈನೂಜಿಬೈಲು ಮೌರಿಶ್ ಮಸ್ಕರೇನಸ್, ಪ್ರಸಾದ್ ಕೌಶಲ್ ಶೆಟ್ಟಿ,ರಕ್ಷಿತ್ ರೈ ಮುಗೇರು, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್ ರೈ ತೊಟ್ಲ, ಮನಮೋಹನ್ ರೈ ಬೆಟ್ಟಂಪಾಡಿ, ಒಳಮೊಗ್ರು ಗ್ರಾಪಂ ಸದಸ್ಯರಾದ ಅಶ್ರಫ್‌ಯು ಕೆ, ಶೀನಪ್ಪ ನಾಯ್ಕ್, ವಿನೋದ್ ಶೆಟ್ಟಿ ಮುಡಾಲ, ಒಳಮೊಗ್ರು ವಲಯ ಕಾಂಗ್ರೆಸ್ ಕಾರ್ಯದರ್ಶಿ ಸಲಾಮುದ್ದೀನ್ ಕುಂಬ್ರ, ಒಳಮೊಗ್ರು ವಲಯ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಬೊಳ್ಳಾಡಿ, ಎಂ ಮನೋಹರ್ ರೈ, ಚೇತನ್‌ಕುಮಾರ್, ಜಿ ಕುಶಾಲಪ್ಪ ಗೌಡ, ಅಣ್ಣು, ವಿಠಲ ಪೂಜಾರಿ, ಮಾದವ ಎ, ಗಿರೀಶ್ ಶೆಟ್ಟಿ ಗೋವಿಂದ ಮೂಲೆ,ರಾಧಾಕೃಷ್ಣ, ಮಹೇಶ್, ದಾಮೋದರ, ಮಾಯಿಲಪ್ಪ, ಶೀನಪ್ಪ, ಯೋಗೀಶ, ಕಿರಣ್, ಕುಶಾಲಪ್ಪ ನಾಯ್ಕ್, ಮಹೇಶ್, ಮಹಮ್ಮದ್ ಅಡ್ಕ , ಶಾಫಿ ಅಡ್ಕ, ಉಪಸ್ಥಿತರಿದ್ದರು. ಸಂತೋಷ್‌ಭಂಡಾರಿ ಚಿಲ್ಮೆತ್ತಾರು ಸ್ವಾಗತಿಸಿದರು. ಒಳಮೊಗ್ರು ಬೂತ್ ಅಧ್ಯಕ್ಷ ಜಾಫರ್ ಸಾದಿಕ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.