HomePage_Banner
HomePage_Banner
HomePage_Banner
HomePage_Banner

ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದಿಂದ ವಂಚಿತರಾಗಬಾರದು – ಸಂಜೀವ ಮಠಂದೂರು

ಪುತ್ತೂರು: ಸರಕಾರಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕೂಡಾ ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಆಧುನಿಕತೆಯ ತಂತ್ರಜ್ಞಾನತೆಯಿಂದ ವಂಚಿತರಾಗಬಾರದು ಎಂದು ಕರ್ನಾಟಕರ ಸರಕಾರ ಎಲ್ಲಾ ಸರಕಾರಿ ಕಾಲೇಜುಗಳಿಗೆ ಕಂಪ್ಯೂಟರ್ ಒದಗಿಸುವ ಕೆಲಸ ಮಾಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ರೋಟರಿ ಕ್ಲಬ್ ಪುತ್ತೂರು ಸಹಯೋಗದಲ್ಲಿ ಕಾಗ್ನಿಝಂಟ್ ಮತ್ತು ರೋಟರಿ ಇಂಡಿಯಾದ ಪ್ರಾಯೋಜಿತ್ವದಲ್ಲಿ ಮಹಿಳಾ ಕಾಲೇಜಿಗೆ ಹಸ್ತಾಂತರಗೊಂಡ ಕಂಪ್ಯೂಟರ್ ಲ್ಯಾಬ್‌ನ್ನು ಸೆ.28ರಂದು ಅವರು ಉದ್ಘಾಟಿಸಿ ಮಾತನಾಡಿದರು. ಖಾಸಗಿ ಕಾಲೇಜುಗಳು ಡೊನೆಷನ್ ತೆಗೆದು ಕೊಂಡು ವ್ಯವಸ್ಥಿತವಾಗಿವೆ. ಸರಕಾರಿ ಕಾಲೇಜಿಗೆ ಬರುವವರು ವಿದ್ಯಾರ್ಥಿಗಳು ಒಂದಷ್ಟು ಬಡ ವಿದ್ಯಾರ್ಥಿಗಳಾಗಿದ್ದು, ಆರ್ಥಿಕವಾಗಿ ವ್ಯವಸ್ಥೆಯನ್ನು ಹೊಂದಲು ಕಷ್ಟ ಎನ್ನುವ ದೃಷ್ಟಿಯಿಂದ ಸರಕಾರಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡಾ ಖಾಸಗಿ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳ ಹಾಗೆ ಕಂಪ್ಯೂಟರ್ ಲ್ಯಾಪ್‌ಟಾಪ್, ಟ್ಯಾಬ್ ಹಿಡಿದು ಕೊಂಡು ಹೋಗಬೇಕು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೂಡಾ ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನತೆಯಿಂದ ವಂಚಿತರಾಗಬಾರದು ಎಂದು ಕರ್ನಾಟಕ ಸರಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಮಾಡಿದೆ ಎಂದರು. ಇವತ್ತು ಐಟಿಬಿಟಿ ಯುಗದಲ್ಲಿ ಇದ್ದೇವೆ. ಮೊಬೈಲ್, ಟ್ಯಾಬ್, ಇಲ್ಲದೆ ನಮ್ಮ ಜೀವನ ಇಲ್ಲ ಎಂದಾಗಿದೆ. ಕೋವಿಡ್ ಬಂದ ಸಂದರ್ಭದಲ್ಲಿ ಎಲ್.ಕೆ.ಜಿ ಮಗುವಿಗೂ ಕೂಡಾ ಆನ್‌ಲೈನ್ ಕ್ಲಾಸ್ ಅನಿವಾರ್ಯ ಎಂದಾಗಿದೆ. ಇಂತಹ ಸಂದರ್ಭದಲ್ಲಿ ಈ ಪರಿವರ್ತನೆ ಕಾಲಗಟ್ಟದಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಂಡು ಕಂಪ್ಯೂಟರ್ ಜ್ಞಾನವನ್ನು ಪೂರ್ಣ ತಿಳಿದು ಕೊಂಡು ತಮ್ಮ ಆಂತರಿಕ ಜ್ಞಾನವನ್ನು ವೃದ್ದಿಸಿಕೊಂಡು ಮುಂದಿನ ಕೌಶಲ್ಯ ಹೆಚ್ಚಿಸುವ ದೃಷ್ಟಿಯಿಂದ ಕಂಪ್ಯೂಟರಿಗೆ ಮಹತ್ವ ಕೊಟ್ಟಿದೆ ಎಂದರು.

ಸರಕಾರ ರೋಟರಿ ಸಂಸ್ಥೆಯಲ್ಲಿ ವಿಶ್ವಾಸ ಇಟ್ಟಿದೆ:
ರೋಟರಿ ಇಂಡಿಯಾದ ವಲಯ 5  ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ಎನ್.ಎ ಅವರು ಮಾತನಾಡಿ ಪುತ್ತೂರು ಮಹಿಳಾ ಕಾಲೇಜಿನ ಕಟ್ಟಡ ಗುರುಕುಲ ಮಾದರಿಯಲ್ಲಿದೆ. ಇಲ್ಲಿ ಶಿಕ್ಷಣದೊಂದಿಗೆ ಜೀವನದ ಮೌಲ್ಯ ಕಲಿಯಲು ಈ ಪರಿಸರ ಕಂಡಿತ ಸಹಕಾರಿಯಾಗಲಿದೆ ಎಂದ ಅವರು ಸರಕಾರದ ತನ್ನ ಇಲಾಖೆಯ ಮೂಲಕ ಅಥವಾ ಇನ್ಯಾರೋ ಖಾಸಗಿ ಸಂಸ್ಥೆಯ ಮೂಲಕ ಕಾಲೇಜುಗಳಿಗೆ ಕಂಪ್ಯೂಟರ್ ಸರಬರಾಜು ಮಾಡಲಾಗುವುದಿಲ್ಲ ಎಂದಾಗ ರೋಟರಿ ಸಂಸ್ಥೆಯಲ್ಲಿ ಸರಕಾರ ಮತ್ತು ಕಾಗ್ನಿಝಂಟ್ ಸಂಸ್ಥೆಗೆ ವಿಶ್ವಾಸ ಇಟ್ಟಿದೆ. ಹಾಗಾಗಿ ಇವತ್ತು ಕಂಪ್ಯೂಟರ್‌ಗಳನ್ನು ಎಲ್ಲಿ ಯಾವ ಕಾಲೇಜಿಗೆ ಮುಟ್ಟಿಸುವ ಜವಾಬ್ದಾರಿಯನ್ನು ರೋಟರಿಗೆ ನೀಡಿದೆ. ಅತ್ಯಂತ ಪ್ರಾಮಣಿಕವಾಗಿ ರೋಟರಿ ಸಂಸ್ಥೆ 12,500ಕಂಪ್ಯೂಟರ್‌ಗಳನ್ನು ವಿತರಣೆ ಮಾಡುತ್ತಿದೆ ಎಂದರು.

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ:
ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಮಧು ನರಿಯೂರು ಅವರು ಮಾತನಾಡಿ ಗುಣಮಟ್ಟದ ಶಿಕ್ಷಣಕ್ಕೆ ಇವತ್ತು ಆದ್ಯತೆ ಇದೆ. ಅಂತಹ ಗುಣಮಟ್ಟದ ಶಿಕ್ಷಣಕ್ಕೆ ಕಂಪ್ಯೂಟರ್ ಶಿಕ್ಷಣ ಅಗತ್ಯ. ಇಂತಹ ಶಿಕ್ಷಣ ದೊರೆತಾಗ ಒಬ್ಬ ವಿದ್ಯಾರ್ಥಿ ಮುಂದೆ ಸಮಾಜದಲ್ಲಿ ತನ್ನ ಜೀವನದ ಮೌಲ್ಯ ಅರಿಯುತ್ತಾ ಸಾಗುತ್ತಾನೆ. ಸ್ಪರ್ಧಾತ್ಮಕ ಬದುಕಿನಲ್ಲಿ ತಂತ್ರಜ್ಞಾನದ ವಿದ್ಯೆ ಅಗತ್ಯವಿದೆ ಎಂದರು.

ಖಾಸಗಿ ಶಾಲೆಗಿಂತ ಹೆಚ್ಚಿನ ಸೌಲಭ್ಯ ನಮ್ಮ ಕಾಲೇಜಿನಲ್ಲಿದೆ:
ಸ.ಪ್ರ.ದ.ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ್ ಗೌಡ ಪಾಣತ್ತಿಲ ಅವರು ಮಾತನಾಡಿ ಖಾಸಗಿ ಶಾಲೆಗಳಲ್ಲಿ ಏನು ಸವಲತ್ತು ಸಿಗುತ್ತದೆಯೋ ಅದಕ್ಕಿಂತ ಹೆಚ್ಚಿನ ಸವಲತ್ತು ಇವತ್ತು ನಮ್ಮ ಕಾಲೇಜಿನಲ್ಲಿ ಸಿಗುತ್ತಿದೆ. ನಮ್ಮ ಪ್ರತಿ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ಸಿಕ್ಕಿದೆ. ಹಿಂದಿನ ವರ್ಷ ಲ್ಯಾಪ್‌ಟಾಪ್, ಟ್ಯಾಬ್ ಸಿಕ್ಕಿದೆ. ಮುಂದಿನ ವರ್ಷವೂ ಟ್ಯಾಬ್ ಸಿಗಲಿದೆ. ಪ್ರಸ್ತುತ ಆಧುನಿಕ ಕಂಪ್ಯೂಟರ್ ಲ್ಯಾಬ್ ಕೂಡಾ ಲಭ್ಯವಾಗಿದೆ ಎಂದ ಅವರು ಮುಖ್ಯ ಗುರಿ ಮಾರುಕಟ್ಟೆಯಲ್ಲಿ ಬೇಡಿಕೆ ಹೇಗಿದೆ ಅದೇ ರೀತಿ ವಸ್ತುಗಳ ಪೂರೈಕೆ ಆಗಬೇಕು. ಈ ನಿಟ್ಟಿನಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಯಾವ ರೀತಿ ಬೇಡಿಕೆ ಇದೆ ಅದೇ ರೀತಿ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರಿ ಕಾಲೇಜುಗಳು ಕೆಲಸ ಮಾಡುತ್ತಿವೆ ಎಂದರು. ವೇದಿಕೆಯಲ್ಲಿ ಸ.ಪ್ರ.ದ.ಮಹಿಳಾ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೆ.ನಾರಾಯಣ ಭಟ್, ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು, ಟಿಇಎಸಿಎಚ್ ಚೆಯರ್‌ಮ್ಯಾನ್ ಪ್ರೀತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್‌ನ ದೀಪಕ್ ಕೆ.ಪಿ, ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಸದಸ್ಯೆ ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು. ಪ್ರೊ. ಐವನ್ ಪ್ರಾನ್ಸಿಸ್ ಲೊಬೊ , ಪ್ರೊ. ಜಯರಾಮ, ದೈಹಿಕ ಶಿಕ್ಷಣ ನಿರ್ದೇಶಕ ಅಬ್ದುಲ್ ಕುಂಞಿ, ವಿದ್ಯಾರ್ಥಿನಿ ಅನುಷಾ, ನಿಶಾ, ರಿಫಾ ಅತಿಥಿಗಳನ್ನು ಗೌರವಿಸಿದರು. ಕಾಲೇಜಿನ ಐಟಿ ಸಂಯೋಜಕ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಜಯಶ್ರೀ ಸ್ವಾಗತಿಸಿದರು. ಪಾತಿಮಾತ್ ಸಾನಿದಾ ವಂದಿಸಿದರು. ಉಪನ್ಯಾಸಕ ಲಕ್ಷ್ಮೀಕಾಂತ್ ರೈ ಅನಿಕೂಟೇಲು ಕಾರ್ಯಕ್ರಮ ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.