HomePage_Banner
HomePage_Banner
HomePage_Banner
HomePage_Banner

ಸೇವೆ, ಸಮರ್ಪಣಾ ಭಾವ ಬಿಜೆಪಿಯಿಂದ ಮಾತ್ರ ಸಾಧ್ಯ – ಬಿಜೆಪಿ ನಗರಮಂಡಲ ಕಾರ್ಯನಿರ್ವಹಣ ತಂಡದ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸೇವೆಯನ್ನು ಮಾಡುವುದರಿಂದ ಸ್ಪಂದನೆ, ಪರಹಿತ ಚಿಂತನೆ, ಕೊಡುವ ಮನೋಭಾವ, ನಾಯಕತ್ವ, ಸಮರ್ಪಣ ಮನೋಭಾವದಂತಹ ಗುಣಗಳು ನಮ್ಮಲ್ಲಿ ಬೆಳೆಯುತ್ತವೆ. ಇಂತಹ ಸೇವೆ, ಸಮರ್ಪಣಾ ಭಾವ ಬಿಜೆಪಿಯ ಕಾರ್ಯಕರ್ತರಿಂದ ಮಾತ್ರ ಸಾಧ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಬಿಜೆಪಿ ನಗರ ಮಂಡಲದ ಅಪೇಕ್ಷಿತರ ಕಾರ್ಯನಿರ್ವಹಣ ತಂಡದ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲ ಸೇವೆಗಳಿಗಿಂತಲೂ ಸಮಾಜ ಸೇವೆ ಭಿನ್ನವಾದದ್ದು. ಇಡೀ ಜಗತ್ತೇ ನನ್ನ ಕುಟುಂಬ ಎಂದು ಭಾವಿಸಬೇಕು. ಭಾರತದಲ್ಲಿ ಸರ್ವಧರ್ಮ ಸಮಭಾವದಿಂದ ಬಾಳುತ್ತಿದ್ದೇವೆ. ಸೇವಾ ಹೀ ಪರಮೋ ಧರ್ಮ ಎಂಬಂತೆ ಸೇವೆಯನ್ನು ಅತ್ಯಂತ ಶ್ರೇಷ್ಠವಾದ ಕರ್ತವ್ಯ ಎಂದು ತಿಳಿಯಬೇಕು ಎಂದ ಅವರು ಬೂತ್ ಮಟ್ಟದಿಂದ ರಾಷ್ಡ್ರಮಟ್ಡದ ತನಕ ನಿಯಮಿತ ಸಭೆ, ಪ್ರವಾಸ, ಸಂಪರ್ಕ ಮಾಡುವ ಮೂಲಕ ಕಾರ್ಯಕರ್ತರಿಗೆ ಪ್ರೇರಣೆ ನೀಡುವ ಕೆಲಸ ನಿರ್ವಹಣಾ ತಂಡದ ಮೂಲಕ ಆಗಬೇಕೆಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಬಂಟ್ವಾಳ್ ಅವಧಿಯಲ್ಲಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪುತ್ತೂರು ನಗರ ಮಂಡಲದಲ್ಲೂ ಬಿಜೆಪಿ ಶಕ್ತಿಕೇಂದ್ರದ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದರು. ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ಸ್ವಾಗತಿಸಿ, ಜಯಶ್ರೀ ಶೆಟ್ಟಿ ಎಸ್ ವಂದಿಸಿದರು. ಉಪಾಧ್ಯಕ್ಷ ಇಂಧು ಶೇಖರ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.