HomePage_Banner
HomePage_Banner
HomePage_Banner
HomePage_Banner

ಸವಣೂರು: ಪ್ರಶಸ್ತಿ ಪುರಸ್ಕೃತ ಬಿ.ವಿ.ಸೂರ್‍ಯನಾರಾಯಣರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ. ವರದಿ. ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಸವಣೂರು ಸ.ಪ.ಪೂ,ಕಾಲೇಜ್ ಹಾಗೂ ಪ್ರೌಢ ಶಾಲಾ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಚಿನ್ಮಯ್ಯಜ್ಞಾನಿ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಬಿ.ವಿ.ಸೂರ್‍ಯನಾರಾಯಣರವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್‍ಯಧ್ಯಕ್ಷ ಗಿರಿಶಂಕರ್ ಸುಲಾಯ ದೇವಶ್ಯ  ಮಾತನಾಡಿ ಬಿ.ವಿ.ಸೂರ್‍ಯನಾರಾಯಣರವರು ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಜನ ಮಾನಸದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ, ಇವರು ಶಿಕ್ಷಕ ವೃತ್ತಿಗೆ ಅರ್ಥಪೂರ್ಣವಾದ ಸೇವೆಯನ್ನು ಸಲ್ಲಿಸುವ ಜೊತೆಗೆ ಸಂಸ್ಥೆಯ ಅಭಿವೃದ್ಧಿಗೆ ದುಡಿದ್ದಾರೆ, ತನ್ನ ಅವಿರತ ಶ್ರಮದಿಂದ ಸುಸಜ್ಜಿತವಾದ ಭವ್ಯ ಕೊಠಡಿ, ಕಟ್ಟಡವನ್ನು ಸುಮಾರು 1.20 ಕೋಟಿ ವೆಚ್ಚದಲ್ಲಿ ಕಟ್ಟಿರುವುದು ಶ್ಲಾಘನೀಯ ಎಂದರು. ಅತ್ಯುತ್ತಮ ಲ್ಯಾಬ್, ಮೀಟಿಂಗ್ ಹಾಲ್, ತರಗತಿ ಕೊಠಡಿಗಳು, ವಾಚಾನಾಯ, ಹಾಗೂ ಸುಜ್ಜಿತವಾದ ಕಟ್ಟಡ ಇವರ ಬಿ.ವಿ.ಎಸ್‌ರವರು ಅವಿರತ ಶ್ರಮದ ಫಲ ಎಂದು ಹೇಳಿದರು.

ಮುಖ್ಯ ಅತಿಥಿಯಾದ ಕಾಲೇಜ್ ಕಟ್ಟಡ ಸಮಿತಿಯ ಅಧ್ಯಕ್ಷ ಪಿ.ಡಿ.ಕೃಷ್ಣಕುಮಾರ್ ರೈ ದೇವಶ್ಯರವರು ಮಾತನಾಡಿ ಬಿ.ವಿ.ಸೂರ್‍ಯನಾರಾಯಣರವರಿಗೆ ಆರ್ಹವಾಗಿಯೇ ಪ್ರಶಸ್ತಿ ಬಂದಿದೆ, ಇವರು ಶಿಕ್ಷಕರಿಗೆ ಮಾದರಿಯಾಗಿದ್ದಾರೆ, ಮುಂದೆಯೂ ಇವರಿಗೆ ಉತ್ತಮ ಪ್ರಶಸ್ತಿ ಪುರಸ್ಕಾರಗಳು ಬರಲಿ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿದ ಬಿ.ವಿ.ಸೂರ್‍ಯನಾರಾಯಣರವರು ಕೃತಜ್ಞತೆ ಸಲ್ಲಿಸಿದರು.

ಸಂಸ್ಥೆಯ ಪ್ರಾಂಶುಪಾಲೆ ಪದ್ಮಾವತಿಯವರು ಸ್ವಾಗತಿಸಿ ಮಾತನಾಡಿ ಬಿ.ವಿ, ಸೂರ್‍ಯನಾರಾಯಣರವರ ಕರ್ತವ್ಯ ನಿಷ್ಠೆಗೆ ಆರ್ಹವಾಗಿ ಪ್ರಶಸ್ತಿಯು ಬಂದಿದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್, ರಾಜಶೇಖರ್, ನಾಗೇಶ್ ರವರು ಸಂದಭೋಚಿತವಾಗಿ ಮಾತನಾಡಿದರು. ಉಪನ್ಯಾಸಕಾರದ ಅಶ್ವಿನಿ, ಶಶಿಕಲಾ, ಅಮೃತಾ, ಮಮತಾ, ವಿದ್ಯಾಧರ್, ಚಿತ್ರಾ ಶೆಟ್ಟಿರವರು ಕಾರ್‍ಯಕ್ರಮದಲ್ಲಿ ಸಹಕರಿಸಿದರು. ಉಪನ್ಯಾಸಕಿ ಶೋಭಾ ಕೆ ವಂದಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.