HomePage_Banner
HomePage_Banner
HomePage_Banner
HomePage_Banner

ಸವಣೂರು- ಸುದ್ದಿಯ ಗ್ರಾಮ ಸ್ವರಾಜ್ಯ ಗಾಂಧಿ ರಥಕ್ಕೆ ಸ್ವಾಗತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

  • ಡಾ.ಯು.ಪಿ.ಶಿವಾನಂದ್‌ರವರ ಜನ ಪರ ಕಾಳಜಿ ಸಮಾಜಕ್ಕೆ ಮಾದರಿ- ಸೀತಾರಾಮ ರೈ
  • ಸುದ್ದಿಯ ಕಾರ್‍ಯಕ್ರಮ ಸಮಾಜದ ಹೊಸ ಬೆಳಕು- ರಾಜೀವಿ ಶೆಟ್ಟಿ ಕೆಡೆಂಜಿ

ಪುತ್ತೂರು: ಗಾಂಧಿ ಜಯಂತಿ ಹಿನ್ನಲೆಯಲ್ಲಿ ಸುದ್ದಿ ಬಿಡುಗಡೆ ವತಿಯಿಂದ ಹಮ್ಮಿಕೊಳ್ಳಲಾದ ಗ್ರಾಮ ಸ್ವರಾಜ್ಯ ಗಾಂಧಿ ರಥಕ್ಕೆ ಸೆ. ೨೭ ರಂದು ಸವಣೂರಿನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಡಾ.ಯು.ಪಿ.ಶಿವಾನಂದ್‌ರವರು ತಮ್ಮ ಸುದ್ದಿ ಬಿಡುಗಡೆ ದಿನ ಪತ್ರಿಕೆಯ ಮೂಲಕ ಮಾಡುತ್ತಿರುವ ಜನಪರ ಕಾಳಜಿ ಸಮಾಜಕ್ಕೆ ಮಾದರಿಯಾಗಿದೆ. ರಾಜ್ಯ ಸರಕಾರ ವಿಕೇಂಡ್ ಕರ್ಪ್ಯೂ ಜಾರಿಗೆ ತಂದಾಗ ಅದರ ಬಗ್ಗೆ ಜನಾಭಿಪ್ರಾಯವನ್ನು ರೂಪಿಸಿ, ಇಲ್ಲಿಗೆ ಈ ವಿಕೇಂಡ್ ಕರ್ಪ್ಯೂ ಅಗತ್ಯವಿಲ್ಲ ಎಂದು ಮನವರಿಕೆ ಮಾಡುವ ಮಾಲಕ ಸಮಾಜದಲ್ಲಿ ಜಾಗೃತಿಯ ಚಿಂತನೆಯನ್ನು ಸಾಕಾರಗೊಳಿಸಿದ ಕೀರ್ತಿ ಸಲ್ಲುತ್ತದೆ ಎಂದರು. ಗಾಂಧಿ ಜಯಂತಿಯ ದಿವಸ ಕೇವಲ ಗಾಂಧಿ ಪೋಟೋಗೆ ಪುಷ್ಪಾರ್ಚನೆ ಮಾಡುವುದು ಅಲ್ಲ , ಗಾಂಧಿ ಚಿಂತೆನೆಯ ಅಂಶವಾದ ಭಷ್ಟಾಚಾರ ನಿರ್ಮೂಲನೆ, ಗಾಂಧಿ ತತ್ವವನ್ನು ಅಳವಡಿಸುವ ಕಾರ್‍ಯ ನಿರಂತರವಾಗಿ ನಡೆಯಲು ಸುದ್ದಿ ಈ ಕಾರ್‍ಯಕ್ರಮ ಯಶಸ್ಸು ಆಗಲಿ ಎಂದರು.

ಸವಣೂರು ಗ್ರಾ.ಪಂ, ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿರವರು ಮಾತನಾಡಿ ಸುದ್ದಿ ಪತ್ರಿಕೆ ಹಮ್ಮಿಕೊಂಡ ಗ್ರಾಮ ಸ್ವರಾಜ್ಯ ಗಾಂಧಿ ರಥ ಸಮಾಜದಲ್ಲಿ ಹೊಸ ಬೆಳಕನ್ನು ಸೃಷ್ಟಿ ಮಾಡಿದೆ. ಇದು ನಿರಂತರಾಗಿ ಮೂಡಿಬರಲಿ ನಮ್ಮ ಗ್ರಾಮ ಪಂಚಾಯತ್‌ನ ಪೂರ್ಣ ಸಹಕಾರ ಇದೆ ಎಂದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳರವರು ಮಾತನಾಡಿ ಗಾಂಧಿ ಚಿಂತನೆಯ ಪರಿಕಲ್ಪನೆ ನಿರಂತರವಾಗಿ ಮೂಡಿ ಬಂದಾಗ ಹೊಸ ಭಾರತ ನಿರ್ಮಾಣ ವಾಗುತ್ತದೆ ಎಂದರು.

ಸವಣೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿರವರು ಮಾತನಾಡಿ, ಗಾಂಧಿ ಜಯಂತಿಯ ದಿನ ಮಾತ್ರ ನಾವು ಗಾಂಧಿ ನೆನಪು ಮಾಡುವುದಲ್ಲ, ಗಾಂಧಿಯ ವಿಚಾರಧಾರೆ ನಾಡಿನ ಜನತೆಗೆ ತಿಳಿಹೇಳುವ ಸುದ್ದಿಯ ಕಾರ್‍ಯಕ್ರಮ ಸಮಾಜಕ್ಕೆ ಪೂರಕ ಎಂದರು.
ಸವಣೂರು ಗ್ರಾ.ಪಂ, ಸದಸ್ಯ ಅಬ್ದುಲ್ ರಜಾಕ್ ಕೆನರಾರವರು ಮಾತನಾಡಿ ನಮ್ಮ ಗ್ರಾಮದಲ್ಲಿ ಗಾಂಧೀಜಿಯವರ ಪರಿಕಲ್ಪನೆಯ ಕಾರ್‍ಯಕ್ರಮ ಮೂಡಿ ಬರಲು ಸುದ್ದಿ ಬಿಡುಗಡೆಯ ಈ ಕಾರ್‍ಯಕ್ರಮ ಸಂತೋಷ ತಂದಿದೆ ಎಂದರು. ಸವಣೂರು ಗ್ರಾ.ಪಂ, ಸದಸ್ಯ ಭರತ್ ರೈ ಪಾಲ್ತಾಡುರವರು ಮಾತನಾಡಿ ಸುದ್ದಿಯಲ್ಲಿ ನಿತ್ಯ ಕೇಂದ್ರ ಮತ್ತು ರಾಜ್ಯ ಸರಕಾರದ ಹೊಸ ಹೊಸ ಯೋಜನೆಗಳ ಮಾಹಿತಿಯ ವರದಿ ಬಂದಾಗ ಅದು ಜನರಿಗೆ ಉಪಯೋಗವಾಗಲಿದೆ ಎಂದರು.

ಸವಣೂರಿನ ಹಿರಿಯ ಉದ್ಯಮಿ ಸವಣೂರು ಸುಂದರ ರೈ, ಸವಣೂರು ಗ್ರಾ.ಪಂ, ಲೆಕ್ಕ ಸಹಾಯಕ ಮನ್ಮಥ, ಸದಸ್ಯರುಗಳಾದ ತೀರ್ಥರಾಮ್ ಕೆಡೆಂಜಿ, ಬಾಬು ಸವಣೂರು, ಚಂದ್ರಾವತಿ ಸುಣ್ಣಾಜೆ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ಸವಣೂರು ಶ್ರೀ ಶಾರದಾಂಭಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕೋಡಿ, ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ ಸೊಂಪಾಡಿ, ಕಾರ್‍ಯದರ್ಶಿ ಜತ್ತಪ್ಪ ಗೌಡ, ಉಪಾಧ್ಯಕ್ಷ ಬಾಲಚಂದ್ರ ರೈ ಕೆರೆಕೋಡಿ, ಗಿರಿಧರ್ ಮೆದು, ಸುರೇಶ್ ದೋಳ, ದಿವಾಕರ್ ಬಸ್ತಿ, ಪ್ರಭಾಕರ್ ಶೆಟ್ಟಿ ನಡುಬೈಲು, ರಾಮಕೃಷ್ಣ ಪ್ರಭು, ಕುಶಾಲಪ್ಪ ಗೌಡ ನೆಕ್ಕರೆ, ಜಯರಾಮ ರೈ ಮೂಡಂಬೈಲು, ಸವಣೂರು ಗ್ರಾ.ಪಂ, ಸಿಬ್ಬಂಧಿಗಳಾದ ಪ್ರಮೋದ್ ಕುಮಾರ್ ರೈ, ದಯಾನಂದ ಮಾಲೆತ್ತಾರು, ಯತೀಶ್, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಗೀತಾ, ಕೃಷಿಕರಾದ ಬಾಲಕೃಷ್ಣ ರೈ ದೇವಶ್ಯ, ಜೀವನ್ ಸವಣೂರು, ವಿದ್ಯುತ್ ಗುತ್ತಿಗೆದಾರ ಬಾಲಕೃಷ್ಣ, ಪುಟ್ಟಣ್ಣ ಪರಣೆ ಸಹಿತ ಹಲವು ಮಂದಿ ಉಪಸ್ಥಿತರಿದ್ದರು. ಸುದ್ದಿ ಬಿಡುಗಡೆ ದಿನ ಪತ್ರಿಕೆಯ ಹಿರಿಯ ವರದಿಗಾರ ಉಮಾಪ್ರಸಾದ್ ರೈ ನಡುಬೈಲು ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಪ್ರಧಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಪ್ರಾಸ್ತಾವಿಕವಾಗಿ ಮಾತನಾಡಿದರು, ವರದಿಗಾರ ಪ್ರವೀಣ್ ಚೆನ್ನಾವರ ವಂದಿಸಿದರು. ಸುದ್ದಿ ಬಿಡುಗಡೆ ಪುತ್ತೂರು ಸಿಇಓ ಸೃಜನ್ ಊರುಬೈಲು, ಸುದ್ದಿ ಬಿಡುಗಡೆ ವರದಿಗಾರರಾದ ರಾಜೇಶ್ ಎಂ,ಎಸ್, ಶಿವಕುಮಾರ್, ಚೈತ್ರಾ ಬಂಗೇರಾ, ಶಿವ ಪ್ರಸಾದ್ ರೈ ಪೆರುವಾಜೆ, ಫಾರೂಕ್ ಮುಕ್ವೆ, ಪ್ರಶಾಂತ್ ಮಿತ್ತಡ್ಕರವರುಗಳು ಕಾರ್‍ಯಕ್ರಮದಲ್ಲಿ ಸಹಕರಿಸಿದರು.

ಆರಂಭದಲ್ಲಿ ಸುದ್ದಿಯ ಗ್ರಾಮ ಸ್ವರಾಜ್ಯ ಗಾಂಧಿ ರಥಕ್ಕೆ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಮತ್ತು ಸವಣೂರು ಗ್ರಾ.ಪಂ, ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿರವರು ಮಾಲಾರ್ಪಣೆ ಮಾಡಿ ರಥವನ್ನು ಸ್ವಾಗತಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.