HomePage_Banner
HomePage_Banner
HomePage_Banner
HomePage_Banner

ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಅವರಿಗೆ ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿ ಪ್ರದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಸವಣೂರು : ಮೈಸೂರಿನ ಶರಣ ವಿಶ್ವವಚನ ಫೌಂಡೇಶನ್‌ವತಿಯಿಂದ  ನೀಡಿದ  2021ನೇ ಸಾಲಿನ ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿಯನ್ನು ಸವಣೂರು ಸರಕಾರಿ ಪ.ಪೂ.ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರಾದ ಬಿ.ವಿ.ಸೂರ್ಯನಾರಾಯಣ ಅವರಿಗೆ ಮೈಸೂರಿನ ನಟರಾಜ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಈ ಸಂದರ್ಭ ಬೀದರ್ ಜಿಲ್ಲೆಯ ಬಸವಕಲ್ಯಾಣ ಅನುಭವ   ಮಂಟಪದ ಡಾ.ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯ ವಹಿಸಿದ್ದರು. ಮೈಸೂರಿನ ಹೊಸಮಠದ ಚಿದಾನಂದ ಸ್ವಾಮಿಗಳು, ಮೈಸೂರಿನ ಶರಣ ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ,ರೂಪಾ ಕುಮಾರ ಸ್ವಾಮಿ,ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಸ್ವಾಮಿ, ಮೈಸೂರಿನ ಶರಣ ವಿಶ್ವವಚನ ಫೌಂಡೇಶನ್ ಅಧ್ಯಕ್ಷ  ಅನಿಲ್ ಕುಮಾರ್ ವಾಜಂತ್ರಿ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿಬಿಡುಗಡೆಯ ಅಂಕಣಕಾರರೂ ಆಗಿರುವ ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಅವರು ಸವಣೂರು ಪ.ಪೂ.ಕಾಲೇಜಿಗೆ ಸುಮಾರು 1.20  ಕೋಟಿ ದೇಣಿಗೆಯನ್ನು ದಾನಿಗಳಿಂದ ಸಂಗ್ರಹಿಸಿ ತರಗತಿ ಕೊಠಡಿಗಳು,ಪ್ರಯೋಗಾಲಯಗಳು,ವಾಚನಾಲಯ, ಶೌಚಾಲಯ ಮೊದಲಾದ ಮೂಲಭೂತ ಸೌಕರ್ಯಗಳನ್ನು ಸಂಸ್ಥೆಗೆ ಕಲ್ಪಿಸಿದಲ್ಲದೆ, ಸುಮಾರು 500ಕ್ಕೂ ಮಿಕ್ಕಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಧೃತಿ ಫೌಂಡೇಶನ್ ಮಂಗಳೂರು ಸಂಸ್ಥೆಯ ಸ್ವಯಂ ಸೇವಕನಾಗಿ ಆರ್ಥಿಕ ನೆರವನ್ನು ಒದಗಿಸಿದ್ದಾರೆ.
ಅಲ್ಲದೆ ಉತ್ತಮ ತರಬೇತುದಾರರಾಗಿ ನಾಡಿನ ವಿವಿಧೆಡೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತು ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದಾರೆ. ಇವರು ಕಳೆದ 38 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿದ್ದಾರೆ..

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.