HomePage_Banner
HomePage_Banner
HomePage_Banner
HomePage_Banner

ಸೆ. 30 ಸವಣೂರು ಸಿ.ಎ.ಬ್ಯಾಂಕ್ ಉಪ ಕಾರ್ಯನಿರ್ವಹಣಾಧಿಕಾರಿ ಕುಸುಮಾ ಪಿ.ಶೆಟ್ಟಿ ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
                                                           ಕುಸುಮಾ ಪಿ.ಶೆಟ್ಟಿ

ಪುತ್ತೂರು: ಸವಣೂರು ಸಿ.ಎ.ಬ್ಯಾಂಕಿನ ಉಪ ಕಾರ್ಯನಿರ್ವಹಣಾಧಿಕಾರಿ ಕುಸುಮಾ ಪಿ.ಶೆಟ್ಟಿಯವರು ಸೆ. 30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಸವಣೂರು ಗ್ರಾಮದ ಕೆರೆಕೋಡಿ ಸ್ನೇಹ ಸಿಂಚನ ನಿವಾಸಿ ಕುಸುಮಾ ಪಿ.ಶೆಟ್ಟಿರವರು ಬಿ.ಎ ಪದವಿ ಮತ್ತು ಸಹಕಾರಿ ಡಿಪ್ಲೋಮೋ ಪಡೆದು, ಸವಣೂರು ಸಿ.ಎ ಬ್ಯಾಂಕ್‌ನಲ್ಲಿ 36 ವರ್ಷಗಳ ಕಾಲ ಸೇವಾವಧಿಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ, ಶಾಖಾ ವ್ಯವಸ್ಥಾಪಕರಾಗಿ, ಉಪ-ಕಾರ್‍ಯನಿರ್ವಹಣಾಧಿಕಾರಿಯಾಗಿ ಅತ್ಯಂತ ಪ್ರಾಮಾಣಿಕ ಮತ್ತು ಶ್ರದ್ಧೆಯಿಂದ ಆಡಳಿತ ಮಂಡಳಿ, ಸಿಬ್ಬಂಧಿ ವರ್ಗ ಮತ್ತು ಗ್ರಾಹಕರು ಮೆಚ್ಚುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸವಣೂರು ಪದ್ಮಶ್ರೀ ಮಹಿಳಾ ಮಂಡಲ ಮತ್ತು ಯುವತಿ ಮಂಡಲದ ಸ್ಥಾಪಕಾಧ್ಯಕ್ಷರಾಗಿ ಹತ್ತು ಹಲವು ಕಾರ್‍ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ಇತರ ಅನೇಕ ಸಂಘ-ಸಂಸ್ಥೆಗಳ ಮೂಲಕ ಸಾಮಾಜಿಕವಾಗಿ ಗುರುತಿಸಿಕೊಂಡ ಇವರು ಕಥೆ, ಕವನ, ನಾಟಕ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ಪತಿ ಪದ್ಮನಾಭ ಶೆಟ್ಟಿ ಮತ್ತು ಮಗ ಸ್ನೇಹಿತ್ ಶೆಟ್ಟಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇನ್ನೂರ್ವ ಮಗ ಸಿಂಚನ್ ಶೆಟ್ಟಿರವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.