HomePage_Banner
HomePage_Banner
HomePage_Banner
HomePage_Banner

ಬಾಲಕನ ಅಪಹರಣ ಯತ್ನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಓಮ್ನಿ ಕಾರಿನಲ್ಲಿ ಬಂದವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನನ್ನು ಹಿಡಿದೆಳೆದು ಅಪಹರಣ ಮಾಡಲು ಯತ್ನಿಸಿದ ಘಟನೆ ಉಪ್ಪಿನಂಗಡಿ ಬಳಿಯ ಮಠ ಹಿರ್ತಡ್ಕ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಹಿರ್ತಡ್ಕದ ಜನತಾ ಕಾಲನಿ ನಿವಾಸಿ 14ರ ಬಾಲಕ ಸಿಫಾನ್ ಎಂಬಾತನೇ ಅಪಹರಣಕಾರರಿಂದ ಬಿಡಿಸಿಕೊಂಡು ಬಂದ ಬಾಲಕ. ಈತ ಇಂದು ಸಂಜೆ ಬೀಡಿ ಕೊಡಲೆಂದು ಬೀಡಿ ಬ್ರಾಂಚ್‌ಗೆ ತೆರಳಿದ್ದು, ಈ ಸಂದರ್ಭ ಬೆಂಗಳೂರು ಕಡೆಗೆ ತೆರಳುತ್ತಿದ್ದ ಓಮ್ನಿ ಕಾರೊಂದು ಇವನ ಹಿಂದಿನಿಂದ ಇವನಿಗೆ ಗೊತ್ತಿಲ್ಲದಂತೆ ಬಂದಿದ್ದು, ಇದರಿಂದ ಇಳಿದ ಓರ್ವ ಬಾಲಕನನ್ನು ಬಂದು ಹಿಂದಿನಿಂದ ಹಿಡಿದಿದ್ದ ಅಲ್ಲದೇ, ಅದೇ ಸಮಯದಲ್ಲಿ ಓಮ್ನಿ ಕಾರು ಇವನಿಗೆ ಅಡ್ಡಲಾಗಿ ಬಂದು ನಿಂತಿತ್ತು ಎನ್ನಲಾಗಿದೆ. ಆಗ ಈ ಬಾಲಕ ಕೊಸರಾಡಿಕೊಂಡು ಅಪರಿಚಿತನಿಂದ ಬಿಡಿಸಿಕೊಂಡು ಹೋಗಿದ್ದು, ಓಮ್ನಿ ಪರಾರಿಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಇನ್ನಷ್ಟೇ ದಾಖಲಾಗಬೇಕಿದ್ದು, ಆ ಬಳಿಕವಷ್ಟೇ ಹೆಚ್ಚಿನ ಮಾಹಿತಿ ದೊರೆಯಲು ಸಾಧ್ಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.