ಕೋರ್ಟುರಸ್ತೆಯಲ್ಲಿ ಹಾಸುಕಲ್ಲಿನ ಅವೈಜ್ಞಾನಿಕ ಜೋಡಣೆ ದುರಸ್ಥಿ- ನಗರಸಭೆ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಕೋರ್ಟು ರಸ್ತೆಯಲ್ಲಿ ಮೂರು ತಿಂಗಳ ಹಿಂದೆ ಮುರಿದು ಹೋದ ಮಳೆ ನೀರು ಹರಿದು ಹೋಗುವ ಚರಂಡಿ ಹಾಸುಕಲ್ಲಿಗೆ ಬದಲಿ ವ್ಯವಸ್ಥೆಯಾಗಿ ಹಾಸುಕಲ್ಲು ಅಳವಡಿಸಿದ್ದರೂ ಅದನ್ನು ಅವೈಜ್ಞಾನಿಕವಾಗಿ ಜೋಡಿಸಿರುವ ಕುರಿತು ಗಮನಿಸಿದ ನಗರಸಭೆ ಸೆ.29ರಂದು ಬೆಳಗ್ಗೆ ಹಾಸುಕಲ್ಲನ್ನು ಮತ್ತೆ ದುರಸ್ಥಿ ಪಡಿಸಿದೆ.

ಅವೈಜ್ಞಾನಿಕವಾಗಿ ಹಾಸುಕಲ್ಲನ್ನು ಜೋಡಣೆ ಮಾಡಲಾಗಿದೆ ಎಂದು ಸುದ್ದಿಯಲ್ಲಿ ವರದಿಯಾಗಿತ್ತು. ಮುರಿದ ಹಾಸುಕಲ್ಲನ್ನು ನಗರಸಭೆ ಅಳವಡಿಸಿತ್ತಾದರೂ ಅಲ್ಲಿ ಹಾಸುಕಲ್ಲು ಮಾತ್ರ ಸಮತ್ತಟಾಗದಿದ್ದರಿಂದ ಪಾದಚಾರಿಗಳು ಎಡವಿ ಬೀಳುವ ಸಂಭವ ಹೆಚ್ಚಾಗಿತ್ತು. ಈ ಕುರಿತು ಸ್ಥಳೀಯ ಸಾರ್ವಜನಿಕರ ಆಗ್ರಹದಂತೆ ಸುದ್ದಿಯಲ್ಲಿ ವರದಿಯಾಗಿತ್ತು. ಇದೀಗ ನಗರಸಭೆ ಹಾಸುಕಲ್ಲನ್ನು ದುರಸ್ಥಿ ಮಾಡಿದೆ. ಸಾರ್ವಜನಿಕರು ಎಡವಿ ಬೀಳುವ ಸಂಭವ ಇದೀಗ ತಪ್ಪಿದೆ. ಸಮಸ್ಯೆಗೆ ಸ್ಪಂಧಿಸಿದ ನಗರಸಭೆ ಈ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.