ಬಡಾವು; ಜಾನುವಾರು ಆರೋಗ್ಯ ತಪಾಸಣೆ, ಬಂಜೇತನ ಚಿಕಿತ್ಸಾ ಶಿಬಿರ

ಪುತ್ತೂರು; ದ.ಕ‌ಜಿಲ್ಲಾ ಪಂಚಾಯತ್, ಪಶುಪಾಲನಾ‌ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದ.ಕ ಹಾಲು ಒಕ್ಕೂಟ ಮಂಗಳೂರು ಮತ್ತು ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ಜಾನುವಾರು ಆರೋಗ್ಯ ತಪಾಸಣೆ ಮತ್ತು ಬಂಜೇತನ ಚಿಕಿತ್ಸಾ ಶಿಬಿರ ಸೆ.29ರಂದು ನಗರ ಸಭಾ ಸದಸ್ಯರು, ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿರುವ ಸುಂದರ ಪೂಜಾರಿ ಬಡಾವುರವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶಿಬಿರಗಳನ್ನು ಆಯೋಜಿಸಲಾಗಿದೆ. ಇದರ ಮುಖಾಂತರ ಸಂಘದ ಬೆಳವಣಿಗೆ ಜೊತೆಗೆ ರೈತರು ಬೆಳೆಯಲು ಅವಕಾಶ ನೀಡಲಾಗುತ್ತಿದ್ದು ಜನರು ಇದರ ಸದುಪಯೋಗಪಡೆದುಕೊಳ್ಳಬೇಕು. ಶಿಬಿರವು ಎಲ್ಲಾ‌ ಕಡೆಗಳಲ್ಲಿ ನಡೆಯಲಿ ಎಂದರು.

ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಪ್ರಸನ್ನ ಹೆಬ್ಬಾರ್ ಮಾತನಾಡಿ, ಪ್ರಗತಿಪರ ಹೈನುಗಾರರ ಸಮಸ್ಯೆ, ಸವಾಲು ಅದನ್ನು ಹೇಗೆ ನಿಭಾಯಿಸುವುದು, ರೋಗ ಬಾರದಂತೆ ಮುನ್ನೆಚ್ಚರಿಕೆ ನೀಡುವ ಮಾಹಿತಿಗಳನ್ನು ಹೈನುಗಾರರ ಮನೆ ಬಾಗಿಲಿಗೆ ನೀಡಿ ಹೈನುಗಾರರಲ್ಲಿ ನೀಡಿ ಸ್ಪೂರ್ತಿ ತುಂಬಲಾಗುತ್ತದೆ ಎಂದರು. ದ.ಕ‌ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ ಹೈನುಗಾರಿಕೆಗೆ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.



ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರಿ‌ ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುರೇಶ್ ಪೂಜಾರಿ ಕೇಪುಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೈಗಾರರಿಕೆಗೆ ಸಂಬಂದಿಸಿದ ಔಷಧೀಯ ಕಿಟ್ ಗಳನ್ನು ವಿತರಿಸಲಾಯಿತು. ಹೊನ್ನಪ್ಪ ಗೌಡ ಸ್ವಾಗತಿಸಿದರು. ಚಿದಾನಂದ ಕಾರ್ಯಕ್ರಮ ನಿರೂಪಿಸಿದರು. ಪಶುವೈದ್ಯಕೀಯ ಇಲಾಖೆಯ ಸಿಬಂದಿಗಳು ಹಾಗೂ ಹೈನುಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.