ಬೈಕ್‌ನಲ್ಲಿ ಲಡಾಕ್‌ಗೆ ಪ್ರವಾಸ ಹೊರಟ ಯುವಕರಿಬ್ಬರು ಮರಳಿ ಊರಿಗೆ ಅದ್ದೂರಿ ಸ್ವಾಗತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುರುಷರಕಟ್ಟೆಯ ಯುವಕರಿಬ್ಬರು ಬೈಕಿನಲ್ಲಿ ಜಮ್ಮು ಕಾಶ್ಮೀರದ ಲಡಾಕ್ ಹಾಗೂ ಮತ್ತಿತರ ಕಡೆಗೆ ಪ್ರವಾಸ ಹೊರಟಿದ್ದು ಹಾಗೂ ಒಂದು ತಿಂಗಳ ಪ್ರವಾಸ ಮುಗಿಸಿ ಪುತ್ತೂರಿಗೆ ಮರಳಿದ್ದು ಅವರಿಗೆ ಪುತ್ತೂರಿನಲ್ಲಿ ಅದ್ದೂರಿಯ ಸ್ವಾಗತ ನೀಡಲಾಯಿತು.

ಪುರುಷರಕಟ್ಟೆಯ ಯುವಕರಾದ ಇಮ್ರಾನ್ ಡಿ. ಡಾಟ್ಸ್ ಹಾಗೂ ಶಾಹಿದ್ ಶೇಖ್‌ರವರು ಯುವಕರಲ್ಲಿ ದೇಶಾಭಿಮಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಮ್ಮು ಕಾಶ್ಮೀರದ ಲಡಾಕ್ ಸಹಿತ ವಿವಿಧ ಕಡೆಗಳಿಗೆ ಪ್ರವಾಸ ಬೆಳೆಸಿದ್ದರು. ಆ.26ರಂದು ಪುತ್ತೂರಿಂದ ಅದ್ದೂರಿಯ ಸ್ವಾಗತದೊಂದಿಗೆ ಬೈಕ್ ಮೂಲಕ ಹೊರಟ ಇವರು 14  ರಾಜ್ಯ ಮೂಲಕ 8.900 ಕಿ.ಮೀ ಸಂಚರಿಸಿ ಸೆ.28ರಂದು ಪುತ್ತೂರಿಗೆ ಆಗಮಿಸಿದರು. ಈ ಯುವಕರಿಬ್ಬರು 1 ತಿಂಗಳ ಪ್ರವಾಸ ಮುಗಿಸಿ ಪುತ್ತೂರಿಗೆ ಆಗಮಿಸಿಸುತ್ತಿದ್ದಂತೆ ನೆಹರುನಗರದ ಬಳಿ ಯುವಕರ ಗೆಳೆಯರು ಹಾಗೂ ಆತ್ಮೀಯರು ಅದ್ದೂರಿಯಾಗಿ ಸ್ವಾಗತಿಸಿ ಬೈಕ್ ರ್‍ಯಾಲಿಯ ಮೂಲಕ ಪುರುಷರಕಟ್ಟೆಗೆ ಕರೆತರಲಾಯಿತು. ಈ ಮಧ್ಯೆ ಕೂರ್ನಡ್ಕದಲ್ಲಿ ಯುವಕರಿಬ್ಬರಿಗೆ ಅದ್ದೂರಿಯ ಸ್ವಾಗತ ನೀಡಲಾಯಿತು.

ಪುತ್ತೂರಿನಿಂದ ಹೊರಟ ಈ ಯುವಕರಿಬ್ಬರು ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ತಾನ, ಹರಿಯಾನ, ಪಂಜಾಬ್, ಜಮ್ಮು ಕಾಶ್ಮೀರ, ಲಡಾಕ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ದೆಹಲಿ, ಚಂಡೀಗಡ ಹೀಗೆ 14 ರಾಜ್ಯಗಳನ್ನು ಸುತ್ತಿ ಯುವಕರಲ್ಲಿ ದೇಶಾಭಿಮಾನವನ್ನು ಮೂಡಿಸಿದರು. ಇವರಿಗೆ ವಿವಿಧ ರಾಜ್ಯಗಳಲ್ಲಿ ಹಲವಾರು ಕಡೆ ಸಾರ್ವಜನಿಕರು ಹುರಿದುಂಬಿಸಿ ಪ್ರಯಾಣಕ್ಕೆ ಸ್ಫೂರ್ತಿ ನೀಡಿದರು. ಕೆಲವು ಕಡೆ ಸ್ಥಳೀಯರು ಆಹಾರದ ವ್ಯವಸ್ಥೆಯನ್ನು ಮಾಡಿದರು ಎಂದು ಯುವಕರಿಬ್ಬರು ತಿಳಿಸಿದರು. ಊರಿಗೆ ಮರಳುವ ಹಿಂದಿರುಗುವ ವೇಳೆ ಉಡುಪಿ ಹಾಗೂ ಮೂಡಬಿದ್ರೆಗಳಲ್ಲಿ ಅದ್ದೂರಿಯ ಸ್ವಾಗತ ನೀಡಲಾಯಿತು.

ಲಡಾಕ್‌ನಲ್ಲಿ ಕನ್ನಡದ ಧ್ವಜ ಹಾರಿಸಿದ ಯುವಕರು
ಇಮ್ರಾನ್ ಡಿ. ಮತ್ತು ಶಾಹಿದ್ ಶೇಖ್‌ರವರು ತಮ್ಮ ಲಡಾಕ್ ಪ್ರವಾಸದ ವೇಳೆ ಜಮ್ಮು ಕಾಶ್ಮೀರದ ಲಡಾಕ್ ಎಂಬಲ್ಲಿ ಕನ್ನಡದ ಧ್ವಜವನ್ನು ಹಾರಿಸುವ ಮೂಲಕ ಕನ್ನಡಾಭಿಮಾನವನ್ನು ಮೂಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಯುವಕರು ಸೇರಿ ಇವರಿಗೆ ಅಭಿನಂದಿಸಿದರು. ಲಡಾಕ್‌ನಲ್ಲಿ ಸೇನಾಧಿಕಾರಿಗಳೊಂದಿಗೆ ಇವರು ಚರ್ಚಿಸಿದರು. ಆದರೆ ಯಾವುದೇ ಫೋಟೋವನ್ನು ತೆಗೆಯಲು ಅವಕಾಶ ನೀಡಲಿಲ್ಲ ಎಂದು ಯುವಕರು ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.