ಪುತ್ತೂರು ಬದ್ರಿಯಾ ಮಸೀದಿಯಲ್ಲಿ ದರ್ಬೆ ಯಾಕೂಬ್ ಹಾಜಿ, ಕೆನರಾ ಹುಸೈನ್‌ರವರ ಸ್ಮರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತ್ತೀಚೆಗೆ ನಿಧನರಾದ ರಾಜಕೀಯ ದುರೀಣ, ಧಾರ್ಮಿಕ ಮುಂದಾಳು ಯಾಕೂಬ್ ಹಾಜಿ ದರ್ಬೆ ಮತ್ತು ಕೆನರಾ ಹುಸೈನ್‌ರವರ ಸ್ಮರಣೆ ಬದ್ರಿಯಾ ಮಸೀದಿಯಲ್ಲಿ ಜರಗಿತು. ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಅಬ್ಬಾಸ್ ಪೈಝಿ ಪುತ್ತಿಗೆ ಪ್ರಾರ್ಥನೆಗೆ ನೇತೃತ್ವ ನೀಡಿ ಅಗಲಿದವರ ಪರಲೋಕ ಮೋಕ್ಷಕ್ಕಾಗಿ ದುವಾ ನಡೆಸಿದರು.

ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅದ್ಯಕ್ಷ ಎಸ್‌ಬಿ ದಾರಿಮಿ ಮಾತನಾಡಿ ಯಾಕೂಬ್ ಹಾಜಿಯವರು ಅನ್ಸಾರುದ್ದೀನ್ ಜಮಾತ್ ಸಮಿತಿಯ ಉಪಾಧ್ಯಕ್ಷರಾಗಿ ಬಹಳಷ್ಟು ಕಾಳಜಿಯಿಂದ ಕೆಲಸ ಮಾಡಿದ್ದಾರೆ. ದರ್ಬೆ ಮೊಯಿದಿನ್ ಪ್ಯಾಮಿಲಿಯ ಹಿರಿಯ ಸದಸ್ಯರಾಗಿ ರಾಜಕೀಯ ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಸೇವೆಗೈದು ಜನಾನುರಾಗಿಯಾಗಿದ್ದರು. ಹಾಗೂ ಇತ್ತೀಚೆಗೆ ನಿಧನರಾದ ದೀರ್ಘ ಕಾಲ ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹುಸೈನ್ ಕೆನರಾ ರವರ ಸೇವೆಯು ಕೂಡಾ ಪುತ್ತೂರಿನಲ್ಲಿ ಅಮೋಘವಾಗಿತ್ತು ಎಂದರು. ಸಾಲ್ಮರ ಖತೀಬ್ ಉಮರ್ ದಾರಿಮಿಯವರು ಮಾತನಾಡಿ ಯಾಕೂಬ್ ಹಾಜಿ ಮತ್ತು ಹುಸೈನ್ ಕೆನರಾರವರ ಪರೋಪಕಾರ ಗುಣವನ್ನು ಸ್ಮರಿಸಿ ಅವರ ಪರಲೋಕ ಜೀವನಕ್ಕೂ ಅದು ಪ್ರಯೋಜನವಾಗಲಿ ಎಂದು ಪ್ರಾರ್ಥಿಸಿದರು. ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿ ಅದ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಮಾತನಾಡಿ ಅನ್ಸಾರುದ್ದೀನ್ ಜಮಾತ್ ಗಾಗಿ ಈ ಹಿಂದೆ ದುಡಿದ ಎಲ್ಲಾ ಮಹಾನುಬಾವರನ್ನು ಸ್ಮರಿಸಿದರು.

ಸಮಸ್ತ ಕೇರಳ ವಿದ್ಯಾಬ್ಯಾಸ ಬೋರ್ಡ್ ಸದಸ್ಯ ರಶೀದ್ ಹಾಜಿ ಪರ್ಲಡ್ಕ, ಅನ್ಸಾರುದ್ದೀನ್ ಜಮಾತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹಾಜಿ ಯಾಕುಬ್ ಖಾನ್ ಬಪ್ಪಳಿಗೆ, ಕೋಶಾಧಿಕಾರಿ ಇಸ್ಮಾಯಿಲ್ ಸಾಲ್ಮರ, ಉಪಾದ್ಯಕ್ಷರಾದ ಕೆ.ಎಂ ಅಬ್ದುಲ್ಲ ಕೂರ್ನಡ್ಕ, ದರ್ಬೆ ಮಸೀದಿ ಅದ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಜಮಾಅತ್ ಕಮಿಟಿ ಸದಸ್ಯ ಶೇಖ್ ಝೈನುದ್ದೀನ್, ಅಬ್ದುಲ್ ಹಮೀದ್ ಸಾಲ್ಮರ, ಅಬ್ದುಲ್ ರಹಿಮಾನ್ ಗಾರ್ಬಲ್, ಮಾಜಿ ಅದ್ಯಕ್ಷ ಯು. ಅಬ್ದುಲ್ಲ ಹಾಜಿ, ಹಾರಿಸ್ ಹಾಜಿ ಪರ್ಲಡ್ಕ, ಬೊಳುವಾರು ಮಸೀದಿಯ ಇಮಾಂ ಕರೀಂ ದಾರಿಮಿ ಕುಂಬ್ರ, ಮುಪತ್ತಿಷ್ ಅಬ್ದುಲ್ ಅಝೀಝ್ ಹಾಜಿ ಮೊಟ್ಟೆತಡ್ಕ, ಸಿಟಿ ಬಜಾರ್ ಮಾಲಕ ಹಸನ್ ಹಾಜಿ, ಸುಲೈಮಾನ್ ಹಾಜಿ ಸಾಲ್ಮರ, ಅನ್ವರ್ ಸ್ವಾದಿಕ್ ಮುಸ್ಲಿಯಾರ್, ಇಬ್ರಾಹಿಂ ಮುಸ್ಲಿಯಾರ್, ಹಾಗೂ ಇನ್ನಿತರ ಹಲವು ಉಲಮಾ-ಉಮರಾ ನಾಯಕರು, ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.