ಮಾಡಾವು ಸಬ್ ಸ್ಟೇಷನ್‌ನಿಂದ ನೀರಜರಿ ವಿದ್ಯುತ್ ಲೈನ್ ಕಾಮಗಾರಿಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜನಪ್ರತಿನಿಧಿಗಳ ಸತತ ಪ್ರಯತ್ನಗಳಿಂದ ಬೇಡಿಕೆ ಈಡೇರಿಕೆ – ರಾಕೇಶ್ ರೈ ಕೆಡೆಂಜಿ


ಕಾಣಿಯೂರು: ಬಹಳಷ್ಟು ದಿನಗಳ ಈ ಭಾಗದ ಬೇಡಿಕೆಯಾದ ವಿದ್ಯುತ್‌ನ ಸಮಸ್ಯೆ ನಿವಾರಣೆಯಾಗಬೇಕು ಎಂಬ ನಿಟ್ಟಿನಲ್ಲಿ ಸಚಿವರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸತತ ಪ್ರಯತ್ನಗಳಿಂದ ಆಧ್ಯತೆ ಮೇರೆಗೆ ಈ ಭಾಗಕ್ಕೆ ಮಾಡಾವು ಸಬ್ ಸ್ಟೇಷನ್‌ನಿಂದ 110/33/11 ಕೆ.ವಿ ವಿದ್ಯುತ್ ಲೈನ್ ಕಾಮಗಾರಿ ಪ್ರಾರಂಭಗೊಳ್ಳಲ್ಲಿದೆ ಎಂದು ಸುಳ್ಯ ಮಂಡಲ ಬಿಜೆಪಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಹೇಳಿದರು. ಅವರು ಮಾಡಾವು ಸಬ್ ಸ್ಟೇಷನ್‌ನಿಂದ ನೀರಜರಿ ವಿದ್ಯುತ್ ಲೈನ್ ಕಾಮಗಾರಿಗೆ ಸೆ 29ರಂದು ಚಾಲನೆ ನೀಡಿ ಮಾತನಾಡಿದರು. ಮೆಸ್ಕಾಂನ ಎಲ್ಲಾ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ, ಶ್ರಮದಿಂದ ವಿದ್ಯುತ್ ಇಲಾಖೆಗಳ ಅಮೋಘ ಬೆಳವಣಿಗೆ, ಅಭಿವೃದ್ಧಿಯಾಗಲು ಸಾಧ್ಯವಾಗಿದೆ ಎಂದರು. ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಶುಭಹಾರೈಸಿದರು. ಗ್ರಾ.ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಜಿ.ಪಂ. ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ಗ್ರಾ.ಪಂ. ಸದಸ್ಯ ಮೋಹನ್ ಅಗಳಿ, ಸವಣೂರು ಮೆಸ್ಕಾಂ ಮೇಲ್ವೀಚಾರಕ ರಮೇಶ್ ಕರುಂಬಾರು, ಬೆಳಂದೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷೆ ಚಂಪಾಕುಶಾಲಪ್ಪ ಅಬೀರ, ಶ್ರೀಧರ ಗೌಡ ಅಗಳಿ, ಅನಿಲ್ ಕೂಂಕ್ಯ, ಆನಂದ ಕೂಂಕ್ಯ, ಕುಶಾಲಪ್ಪ ಗೌಡ ಅಬೀರ, ಬಾಲಕೃಷ್ಣ ಗೌಡ ಅಗಳಿ, ಶಿವರಾಮ ಗೌಡ ಅಗಳಿ, ಪದ್ಮಯ್ಯ ಗೌಡ ಅಗಳಿ, ಧರ್ಮಪಾಲ ಗೌಡ ಅಗಳಿ, ಗುತ್ತಿಗೆದಾರರಾದ ಮಂಗಳೂರು ಜ್ಯೋತಿ ಕಂಪೆನಿಯ ರಾಜೇಶ್, ಮೆಸ್ಕಾಂ ಸಿಬ್ಬಂದಿ ರಂಜಿತ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯೆ ಉಮೇಶ್ವರಿ ಅಗಳಿ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.