ಮೊಟ್ಟೆತ್ತಡ್ಕ ಡಿಸಿಆರ್ ಕೇಂದ್ರದಲ್ಲಿ ತಳಿ, ತಂತ್ರಜ್ಞಾನದ ಅಳವಡಿಕೆ ಕುರಿತ ರೈತ- ವಿಜ್ಞಾನ ಸಂವಾದ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1



ಪುತ್ತೂರು : ಹವಾಮಾನ ವೈಪರೀತ್ಯಗಳು ಕೃಷಿ ಉತ್ಪಾದನೆ ಹಾಗು ಉತ್ಪಾದಕತೆಯ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತದೆ. ಇವನ್ನು ಸೂಕ್ತ ನಿರೋಧಕ ತಳಿಗಳು ಹಾಗು ಕೃಷಿ ಕ್ಷೇತ್ರದಲ್ಲಿ ನಿರ್ದಿಷ್ಟ ತಂತ್ರಜ್ಞಾನಗಳ ಅಳವಡಿಕೆಯಿಂದ ಎದುರಿಸಿ ನಿಲ್ಲಲು ಸಾದ್ಯವಿದೆ. ಈ ನಿಟ್ಟಿನಲ್ಲಿ ಮೊಟ್ಟೆತ್ತಡ್ಕದ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲ್ಪಡುತ್ತಿರುವ ಕಾರ್ಯಕ್ರಮದನ್ವಯ ಹವಾಮಾನ ವೈಪರೀತ್ಯ ಎದುರಿಸಲು ತಳಿ ಮತ್ತು ತಂತ್ರಜ್ಞಾನದ ಅಳವಡಿಕೆಯ ಕುರಿತಾಗಿ ರೈತ-ವಿಜ್ಞಾನ ಸಂವಾದ ಕಾರ್ಯಕ್ರಮ ಜರುಗಿತು. ಸ್ಥಳೀಯ ಕೃಷಿಕರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯಾಗಿ ಕೃಷಿಕ ಹಾಗು ಸಂಸ್ಥೆಯ ನಿರ್ವಹಣಣಾ ಸಮಿತಿಯ ಸದಸ್ಯ ಉದಯಕುಮಾರ್ ಭಾಗವಹಿಸಿದ್ದರು. ಕೇಂದ್ರದ ಪ್ರಧಾನ ವಿಜ್ಞಾನಿ ಡಾ.ಡಿ. ಬಾಲಸುಬ್ರಹ್ಮಣ್ಯನ್ ಪ್ರಾಸ್ತಾವಿಕ ಮಾತನಾಡಿದರು.

ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿಯವರು ದೇಶದ ರೈತರೊಂದಿಗೆ ಇದೇ ಕಾರ್ಯಕ್ರಮದನ್ವಯ ನಡೆಸಿದ ಕೃಷಿ ಸಂವಾದ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ವಿವಿಧ ಸಂಸ್ಥೆಗಳಿಂದ ಅಭಿವೃದ್ಧಿ ಪಡಿಸಿದ ೩೫ ತಳಿಗಳನ್ನು ಬಿಡುಗಡೆ ಮಾಡಿದರು. ದೇಶದ ವಿವಿಧ ಭಾಗದ ಒಟ್ಟು 5 ಪ್ರಗತಿಪರ ರೈತರೊಂದಿಗೆ ಮಾತುಕತೆಯನ್ನು ನಡೆಸುವುದರೊಂದಿಗೆ ರಾಷ್ಟ್ರ ಮಟ್ಟದ ಸ್ವಚ್ಛ ಹಸಿರು ಕ್ಯಾಂಪಸ್ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಘೋಷಿಸಿದರು. ಡಾ. ಅಶ್ವಥಿ ಚಂದ್ರಕುಮಾರ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.