ಹಿರೇಬಂಡಾಡಿ: ಅಡಿಕೆ ಕಳ್ಳತನಕ್ಕೆ ಯತ್ನ

ಹಿರೇಬಂಡಾಡಿ: ಹಿರೇಬಂಡಾಡಿ ಗ್ರಾಮದ ನೆಹರುತೋಟ ಎಂಬಲ್ಲಿ ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಅಡಿಕೆ ಹಾಗೂ ಕಾಡುತ್ಪತ್ತಿ ಖರೀದಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಸೆ.27ರಂದು ರಾತ್ರಿ ನಡೆದಿದೆ.

ರಾತ್ರಿ ಸುಮಾರು 7.30ಕ್ಕೆ ಮಳೆ ಬರುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಂಗಡಿಯ ಮುಂಭಾಗದಲ್ಲಿ ನಿಂತಿದ್ದು ಪಕ್ಕದ ಮನೆಯವರು ವಿಚಾರಿಸಿದಾಗ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ನಿಂತಿರುವುದಾಗಿ ಹೇಳಿದ್ದರು. ಸ್ವಲ್ಪ ಹೊತ್ತಿನ ಬಳಿಕ ದೊಡ್ಡದೊಂದು ಶಬ್ದ ಕೇಳಿಬಂದಿದ್ದು ಪಕ್ಕದ ಮನೆಯವರು ಬರುತ್ತಿದ್ದಂತೆ ಅಂಗಡಿ ಮುಂದೆ ನಿಂತಿದ್ದ ಇಬ್ಬರು ಬೈಕ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಮನೆಯವರು ಪರಿಶೀಲನೆ ನಡೆಸಿದ ವೇಳೆ ಅಡಿಕೆ ಖರೀದಿ ಅಂಗಡಿಯ ಹಿಂಬದಿ ಮಾಡಿನ ಹಂಚು ತೆಗೆದು ಒಳನುಗ್ಗಿ ಎರಡು ಚೀಲ ಅಡಿಕೆ ಹೊರಗೆ ಹಾಕಿರುವುದು ಕಂಡುಬಂದಿದೆ. ಶಬ್ದ ಕೇಳಿ ಮನೆಯವರು ಹೊರಬರುತ್ತಿದ್ದಂತೆ ಅಡಿಕೆ ಚೀಲ ಅಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿರುವುದಾಗಿ ವರದಿಯಾಗಿದೆ.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.