ಹಿರೇಬಂಡಾಡಿ ಶಾಲಾ ಶಿಕ್ಷಕಿ ಜೆಸಿಂತ ರೊಡ್ರಿಗಸ್ ಸೆ.3೦ರಂದು ನಿವೃತ್ತಿ

ಹಿರೇಬಂಡಾಡಿ: ಕಳೆದ ಎರಡು ವರ್ಷಗಳಿಂದ ಹಿರೇಬಂಡಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಜೆಸಿಂತ ಎಂ.ರೊಡ್ರಿಗಸ್‌ರವರು ಸೆ.3೦ರಂದು ಸೇವಾ ನಿವೃತ್ತಿಯಾಗಲಿದ್ದಾರೆ.

ಜೆಸಿಂತ ರೊಡ್ರಿಗಸ್‌ರವರು ಮೈಸೂರಿನ ಸೇಕ್ರೆಡ್ ಹಾರ್ಟ್ ಸ್ಕೂಲ್ ಹಾಗೂ ನಾಗಲ್ಯಾಂಡ್‌ನ ಸೇಕ್ರೆಡ್ ಹಾರ್ಟ್ ಕಾನ್ವೆಂಟ್ ಸ್ಕೂಲ್‌ನಲ್ಲಿ 4ವರ್ಷ ಹಾಗೂ ಎಸ್‌ವಿಎಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ 7 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ,4-8-1998ರಲ್ಲಿ ಮಂಗಳೂರಿನ ಕಣ್ಣೂರು ಸರಕಾರಿ ಹಿ.ಪ್ರಾ.ಶಾಲೆಗೆ ಶಿಕ್ಷಕಿಯಾಗಿ ನೇಮಕಗೊಂಡು ಸರಕಾರಿ ಸೇವೆ ಆರಂಭಿಸಿದ್ದರು. ಇಲ್ಲಿ 13 ವರ್ಷ ಸೇವೆ ಸಲ್ಲಿಸಿ ಬಳಿಕ ಮಂಗಳೂರಿನ ತಿರುವೇಲು ಶಾಲೆಗೆ ವರ್ಗಾವಣೆಗೊಂಡು ಅಲ್ಲಿ 8 ವರ್ಷ ಸೇವೆ ಸಲ್ಲಿಸಿದ್ದರು. ಬಳಿಕ 2019ರಲ್ಲಿ ಹಿರೇಬಂಡಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ಆಗಮಿಸಿ ಸೇವೆ ಸಲ್ಲಿಸುತ್ತಿದ್ದರು.

ಬಂಟ್ವಾಳ ತಾಲೂಕಿನ ಬೆಳ್ಳೂರು ಹೆನ್ರಿ ರೊಡ್ರಿಗಸ್ ಹಾಗೂ ಲೂಸಿ ರೊಡ್ರಿಗಸ್ ದಂಪತಿಯ ಪುತ್ರಿಯಾಗಿರುವ ಇವರು ಬಂಟ್ವಾಳ ತಾಲೂಕಿನ ಬೆಳ್ಳೂರು ಮೈಕಲ್ಸ್ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ, ಗಂಗೊಳ್ಳಿ ಸೈಂಟ್ ಮೇರಿಸ್ ಗರ್ಲ್ಸ್ ಪ್ರೌಢಶಾಲೆಯಯಲ್ಲಿ ಪ್ರೌಢಶಿಕ್ಷಣ ಹಾಗೂ ಬೆಂಜನಪದವು ಸರಕಾರಿ ಪ.ಪೂ.ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡು ಮಂಗಳೂರಿನ ಸೈಂಟ್ ಆನ್ಸ್ ಶಾಲೆಯಲ್ಲಿ ಶಿಕ್ಷಕ ತರಬೇತಿ ಪಡೆದುಕೊಂಡಿದ್ದರು. ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿ, ಪ್ರಾಣಿ ಪಕ್ಷಿಗಳ ಮೇಲೆ ಅಪಾರ ಪ್ರೀತಿ ಹಿಂದಿರುವ ಜೆಸಿಂತ ರೊಡ್ರಿಗಸ್‌ರವರ ಪತಿ ತೋಮಸ್ ಫೆರ್ನಾಂಡಿಸ್‌ರವರು ಕೃಷಿಕರಾಗಿದ್ದಾರೆ. ಪತಿ ತೋಮಸ್ ಫೆರ್ನಾಂಡಿಸ್, ಪುತ್ರ ಬ್ಲಾಯನ್ ಫೆರ್ನಾಂಡಿಸ್‌ರವರ ಜೊತೆ ಮಂಗಳೂರಿನ ಯೆಯ್ಯಾಡಿಯಲ್ಲಿ ವಾಸ್ತವ್ಯವಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.