ಸೆ.30-ಅ.3: ಸೌತ್‌ಕೆನರಾದಿಂದ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿ ಎಲ್‌ಇಡಿ ಲೈಟ್ಸ್ ಪ್ರದರ್ಶನ, ಮಾರಾಟ ಬೃಹತ್ ಮೇಳ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು-ಸುಳ್ಯ ರಸ್ತೆಯ ಸಂತ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿನ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್ ಬಳಿ ವ್ಯವಹರಿಸುತ್ತಿರುವ ಸೌತ್‌ಕೆನರಾ ಡಾಟ್ ಕಾಮ್ ಇದರ ಆಶ್ರಯದಲ್ಲಿ ಎಲ್‌ಇಡಿ ಲೈಟ್ಸ್ ಪ್ರದರ್ಶನ ಹಾಗೂ ಮಾರಾಟದ ಬೃಹತ್ ಮೇಳ ಸೆ.30 ರಿಂದ ಅ.3ರ ವರೆಗೆ ಬೆಳಿಗ್ಗೆಯಿಂದ ರಾತ್ರಿವರೆಗೆ ನಾಲ್ಕು ದಿನ ಜರಗಲಿದೆ.

ಪುತ್ತೂರು ಮುಳಿಯ ಜ್ಯುವೆಲ್ಸ್‌ನ ಸಿಎಂಡಿ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಅನುಮೋದಿಸಲಾದ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್‍ಸ್ ಅಸೋಸಿಯೇಶನ್ ಬೆಂಗಳೂರು ಇದರ ಅಧ್ಯಕ್ಷ ಹರಿಪ್ರಸಾದ್ ಪಿ.ಕೆ, ಪೇಸ್ ಪುತ್ತೂರು ಅಧ್ಯಕ್ಷ ರಮೇಶ್ ಭಟ್ ಮಿತ್ತೂರು, ಕ್ಲಾಸ್-1 ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಹಾಗೂ ಜೆ.ಕೆ ಕನ್ಸ್‌ಟ್ರಕ್ಷನ್‌ನ ಮಾಲಕ ಜಯಕುಮಾರ್ ನಾಯರ್‌ರವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ನಾಲ್ಕು ದಿನಗಳ ಪ್ರದರ್ಶನ ಮೇಳದಲ್ಲಿ ಆಗಮಿಸುವ ಗ್ರಾಹಕರಿಗೆ ಉಚಿತ ಪ್ರವೇಶವಿದ್ದು, ಗ್ರಾಹಕರು ಕಡ್ಡಾಯವಾಗಿ ಕೋವಿಡ್ ನಿಯಮವನ್ನು ಪಾಲಿಸಿ ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ 9448546663,9845522020ನಂಬರಿಗೆ ಸಂಪರ್ಕಿಸಬಹುದು ಎಂದು ಸೌತ್‌ಕೆನರಾ ಸಂಸ್ಥೆಯ ಮುಖ್ಯಸ್ಥರಾದ ಪಶುಪತಿ ಶರ್ಮ ಹಾಗೂ ಅನ್ನಪೂರ್ಣ ಶರ್ಮರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಯಾನಿಟರಿ ನ್ಯಾಪ್‌ಕಿನ್ ಬರ್ನಿಂಗ್ ಮೆಷಿನ್ ಪ್ರದರ್ಶನ..
ಪ್ರದರ್ಶನದಲ್ಲಿ ಕ್ರಾಂಪ್ಟನ್, ಫಿಲಿಪ್ಸ್, ಇಕೋಲಿಂಕ್, ಪೋಲಿಕ್ಯಾಬ್, ವಿಪ್ರೊ ಮುಂತಾದ ಹೆಸರಾಂತ ಕಂಪೆನಿಗಳ ಎಲ್‌ಇಡಿ ಲೈಟ್ಸ್‌ಗಳ ಪ್ರದರ್ಶನ ಹಾಗೂ ಮಾರಾಟವಿದೆ ಜೊತೆಗೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಬರ್ನಿಂಗ್ ಮೆಷಿನ್ ಪ್ರದರ್ಶನ ಕೂಡ ಇಲ್ಲಿ ಲಭ್ಯವಿದೆ. ಜೊತೆಗೆ ಲಕ್ಕಿ ಡ್ರಾ ಮುಖಾಂತರ ಕ್ರಾಂಪ್ಟನ್ ಫ್ಯಾನ್ ವಿಜೇತರಾಗುವ ಸುವರ್ಣ ಅವಕಾಶವನ್ನು ಕೂಡ ಗ್ರಾಹಕರು ಪಡೆಯಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.