ಕೊಣಾಲು: ಎಸ್‌ಕೆಎಸ್‌ಎಸ್‌ಎಫ್‌ನಿಂದ ಸ್ವಚ್ಛತಾ ಕಾರ್ಯಕ್ರಮ, ಗ್ರಾಮ ಸ್ವರಾಜ್ಯ ಗಾಂಧಿರಥಕ್ಕೆ ಸ್ವಾಗತ

ನೆಲ್ಯಾಡಿ: ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಕೋಲ್ಪೆ ಹಾಗೂ ಗೋಳಿತೊಟ್ಟು ಶಾಖಾ ವತಿಯಿಂದ ಕೊಣಾಲು ಸರಕಾರಿ ಶಾಲಾ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಾಗೂ ಸುದ್ದಿಯ ಗ್ರಾಮ ಸ್ವರಾಜ್ಯ ಗಾಂಧಿರಥಕ್ಕೆ ಸ್ವಾಗತ ಕಾರ್ಯಕ್ರಮ ಸೆ.29ರಂದು ನಡೆಯಿತು.


ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಶಾಲೆಗಳು ಮುಚ್ಚಲ್ಪಟ್ಟಿದ್ದು ಇದೀಗ ಶಾಲೆ ಪುನರಾರಂಭಗೊಂಡಿದ್ದರೂ ಶಾಲಾ ವಠಾರದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳಿಂದಾಗಿ ಮಕ್ಕಳಿಗೆ ನಡೆದಾಡಲು ಕಷ್ಟವಾಗಿತ್ತು. ಇದನ್ನು ಮನಗಂಡು ಎಸ್‌ಕೆಎಸ್‌ಎಸ್‌ಎಫ್‌ನ ವಿಖಾಯದ ಕೋಲ್ಪೆ ಹಾಗೂ ಗೋಳಿತ್ತೊಟ್ಟು ಶಾಖೆಯ ವತಿಯಿಂದ ಕೊಣಾಲು ಶಾಲಾ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಯಿತು.

ಗಾಂಧಿರಥಕ್ಕೆ ಸ್ವಾಗತ:
ಇದೇ ಸಂದರ್ಭದಲ್ಲಿ ಕೊಣಾಲು ಶಾಲೆಗೆ ಆಗಮಿಸಿದ ಗಾಂಧಿರಥವನ್ನು ಶಾಲಾ ಶಿಕ್ಷಕವೃಂದ, ಎಸ್‌ಡಿಎಂಸಿ ಹಾಗೂ ಎಸ್‌ಕೆಎಸ್‌ಎಸ್‌ಎಫ್ ತಂಡದ ವತಿಯಿಂದ ಸ್ವಾಗತಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡರವರು ಶುಭಹಾರೈಸಿದರು. ಸುದ್ದಿಬಿಡುಗಡೆಯ ಸಿಬ್ಬಂದಿ ಚೈತ್ರಾ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕಿ ಗಿರಿಜಾ, ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಶಾಖೆಯ ಅಧ್ಯಕ್ಷ ಇರ್ಷಾದ್ ಎಂ., ಗೋಳಿತೊಟ್ಟು ಶಾಖೆಯ ಅಧ್ಯಕ್ಷ ಅನ್ಸಿಪ್, ಎಸ್‌ಡಿಎಂಸಿ ಅಧ್ಯಕ್ಷ ಕೆ.ಇ.ರಫೀಕ್, ಸದಸ್ಯರಾದ ಅಶ್ರಫ್ ಕೆ.ಪಿ., ಅಬ್ದುಲ್ ಹಮೀದ್, ಅಶ್ವಿನಿ ನಾಯ್ಕ್, ಹಿರಿಯರಾದ ಅಬ್ದುಲ್ಲಾ ಕುಂಞಿ ಕೊಂಕೋಡಿ, ಕೆ.ಕೆ.ಉಸ್ಮಾನ್ ಹಾಜಿ, ಯು.ಕೆ.ಉಮ್ಮರ್, ಎಸ್.ಕೆ.ರಝಾಕ್, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯೆ ವಾರಿಜಾಕ್ಷಿ ಸುರೇಶ್, ಶ್ರುತಿ ಅಶೋಕ್ ಹಾಗೂ ಶಾಲಾ ಶಿಕ್ಷಕರು, ವಿಖಾಯ ತಂಡದ ಸದಸ್ಯರು ಪಾಲ್ಗೊಂಡಿದ್ದರು. ಅನ್ವರ್ ಕೆ.ಎ.ಸ್ವಾಗತಿಸಿ, ಝುನೈಪ್ ವಂದಿಸಿದರು. ಕೋಲ್ಪೆ ಎಸ್‌ಕೆಎಸ್‌ಎಸ್‌ಎಫ್ ಕ್ಲಸ್ಟರ್ ಕಾರ್ಯದರ್ಶಿ ಸಾಧಿಕ್ ಕೆ.ಎಚ್.ವಂದಿಸಿದರು. ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ತೌಫೀಕ್ ಎಂ.ಕೆ. ನೀಡಿ ಸಹಕರಿಸಿದರು. ಸುದ್ದಿಬಿಡುಗಡೆಯ ಸಿಇಒ ಸೃಜನ್, ಸಿಬ್ಬಂದಿಗಳಾದ ಸಂತೋಷ್‌ಕುಮಾರ್ ಶಾಂತಿನಗರ, ಗೌತಮ್ ಶೆಟ್ಟಿ, ಹರೀಶ್ ಬಾರಿಂಜ, ಶಿವಪ್ರಸಾದ್ ಈಶ್ವರಮಂಗಲ, ಪ್ರಶಾಂತ್ ಮಿತ್ತಡ್ಕ, ಪ್ರಜ್ವಲ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.