ಬಿಳಿನೆಲೆ ಕೈಕಂಬ; ಮಾತಾ ಅಮೃತಾನಂದಮಯಿ ಹುಟ್ಟುಹಬ್ಬ ಆಚರಣೆ, ‘ಮಾಯಾಮೃಗ’ ತಾಳಮದ್ದಳೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಿಳಿನೆಲೆ: ಸದ್ಗುರು ಮಾತಾ ಅಮೃತಾನಂದಮಯಿ ಅಮ್ಮನವರ ಹುಟ್ಟುಹಬ್ಬದ ಪ್ರಯುಕ್ತ ಪಾದಪೂಜೆ, ಶ್ರೀಮದ್ ರಾಮಾಯಣದ ಸುಂದರಕಾಂಡದ ಪ್ರವಚನ ಹಾಗೂ ‘ಮಾಯಾಮೃಗ’ ಯಕ್ಷಗಾನ ತಾಳಮದ್ದಳೆ ಸೆ.26ರಂದು ಬಿಳಿನೆಲೆ ಕೈಕಂಬ ಶಾರದಾ ಭಜನಾಮಂದಿರದಲ್ಲಿ ನಡೆಯಿತು.

ಸದ್ಗುರು ಮಾತಾ ಅಮೃತಾನಂದಮಯಿ ಅಮ್ಮನವರ 69ನೇ ಹುಟ್ಟುಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಶಿವರಾಮ ಕರಿಕ್ಕಳರವರು, ಮಾತಾ ಅಮೃತಾನಂದಮಯಿ ಅಮ್ಮನವರ ಜನನದ ಉದ್ದೇಶ, ಅವರು ಈಗ ಕೈಗೊಳ್ಳುತ್ತಿರುವ ಸಮಾಜದ ಉದ್ಧಾರ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಬಳಿಕ ವಿದ್ವಾನ್ ಬಾಲಕೃಷ್ಣ ಭಟ್‌ರವರಿಂದ ರಾಮಾಯಣದ ಸುಂದರ ಕಾಂಡದ ಪ್ರವಚನ ನಡೆಯಿತು. ಮಧ್ಯಾಹ್ನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಅನ್ನಪ್ರಸಾದ ವಿತರಣೆ ಮಾಡಲಾಯಿತು. ಅಪರಾಹ್ನ ಊರ ಹಾಗೂ ಪರವೂರ ಕಲಾವಿದರಿಂದ ‘ಮಾಯಾಮೃಗ ‘ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಪದ್ಮನಾಭ ಪಳ್ಳಿಗದ್ದೆ, ರಚನಾ ಚಿದ್ಗಲ್ಲು ಪಂಜ ಹಾಗೂ ಚೆಂಡೆ ಮದ್ದಳೆಯಲ್ಲಿ ಮೋಹನ ಶರವೂರು, ರಾಧಾಕೃಷ್ಣ, ಸುಬ್ರಹ್ಮಣ್ಯ, ಅರ್ಥಧಾರಿಗಳಾಗಿ ರಾಜೇಶ್ ಮಾವಿನಕಟ್ಟೆ, ಸುಬ್ಬಪ್ಪ ಕೈಕಂಬ, ಪರಶುರಾಮ ಪಳ್ಳಿಗದ್ದೆ, ಬಾಲಕೃಷ್ಣ ಭಟ್, ವಿಠಲ ರೈ ದೋಳ್ಪಾಡಿ, ಮುರಳೀಧರ ಎರ್ಮಾಯಿಲ್, ತುಳಸಿ ಪಳ್ಳಿಗದ್ದೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರವಿರಾಜ ಶೆಟ್ಟಿ ಕಡಬ, ಚಂದ್ರಶೇಖರ ನಾಯರ್, ವೇದಾವತಿ ಶಿವರಾಮ್, ಗಣೇಶ್ ಸುಬ್ರಹ್ಮಣ್ಯ, ಪದ್ಮಪ್ಪ ಗೌಡ ರಾಮಕುಂಜ ಮತ್ತಿತರರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.