ಸುದ್ದಿ ಗ್ರಾಮ ಸ್ವರಾಜ್ಯ ಗಾಂಧಿರಥ – ಬಡಗನ್ನೂರು ಗ್ರಾಪಂನಲ್ಲಿ ಸ್ವಾಗತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

     ಡಾ.ಯು.ಪಿ ಶಿವಾನಂದರು ಮಾಧ್ಯಮದ ಗಾಂಧಿ: ಮಹಮ್ಮದ್ ಬಡಗನ್ನೂರು

ಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕೆಯ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿರುವ ಗ್ರಾಮಸ್ವರಾಜ್ಯ ಕಲ್ಪನೆಯ ಗಾಧಿರಥಕ್ಕೆ ಬಡಗನ್ನೂರು ಗ್ರಾಪಂನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಗ್ರಾಪಂ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು ಹಾಗೂ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿ ವರ್ಗದವರು ಅಲ್ಲದೆ ಗ್ರಾಮಸ್ಥರು ರಥವನ್ನು ಸ್ವಾಗತಿಸಿದರು.

ಈಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಶ್ರೀಮತಿಯವರು, ಸರಕಾರದ ಸೌಲಭ್ಯಗಳನ್ನು ಗ್ರಾಮದ ತಳಮಟ್ಟದ ಜನರಿಗೆ ತಲುಪಿಸುವ ಕೆಲಸವನ್ನು ಪಂಚಾಯತ್ ಮಾಡಿದಾಗಲೇ ಗ್ರಾಮದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸುದ್ದಿ ಪತ್ರಿಕೆಯ ಗಾಂಧಿ ಚಿಂತನೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಪಂಚಾಯತ್‌ ರಾಜ್ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಬಡಗನ್ನೂರು ಮಾತನಾಡಿ, ಗಾಂಧಿಜಿಯ ವಿಚಾರಧಾರೆಗಳು ನಮಗೆ ಸರ್ವಕಾಲಕ್ಕೂ ಅನುಕರಣೀಯವಾಗಿವೆ. ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಗಾಂಧಿ ಪಾತ್ರ ಹಿರಿದಾದದು. ಈ ಜಗತ್ತಿನಲ್ಲೆಡೆ ಗಾಂಧಿಯನ್ನು ಆರಾಧಿಸುವ ಜನರಿದ್ದಾರೆ. ಗಾಂಧಿರಥದ ಮೂಲಕ ಗ್ರಾಮದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿರುವುದು ಶ್ಲಾಘನೀಯ. ಮುಂದಿನ ವರ್ಷದಲ್ಲಿ ಗಾಂಧಿಚಿಂತನೆ ಗ್ರಾಮದ ಜನರಲ್ಲಿ ಮೂಡಬೇಕು, ಮಹಾತ್ಮ ಗಾಂಧಿಜಿಯವರ ಆದರ್ಶಗಳು ನಮ್ಮಲ್ಲಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಡಾ.ಯು.ಪಿ.ಶಿವಾನಂದರು ಮಾಧ್ಯಮದ ಗಾಂಧಿಯಾಗಿ ನಮ್ಮೆದುರು ನಿಲ್ಲುತ್ತಾರೆ. ಯು.ಪಿ.ಶಿವಾನಂದರ ಆಶಯದ ಈಡೇರಿಕೆಗಾಗಿ ನಾವೆಲ್ಲರೂ ಪಣತೊಡೋಣ ಎಂದು ಹೇಳಿ ಶುಭ ಹಾರೈಸಿದರು. ಗ್ರಾಪಂ ಉಪಾಧ್ಯಕ್ಷ ಸಂತೋಷ್ ಆಳ್ವ ಮಾತನಾಡಿ, ಗಾಂಧಿ ಕಂಡ ಗ್ರಾಮಸ್ವರಾಜ್ಯದ ಕನಸು ನನಸಾಗಬೇಕಾದರೆ ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳು ಸಿಗಬೇಕಾಗಿದೆ. ಪಂಚಾಯತ್‌ಗೆ ಹೆಚ್ಚಿನ ಅಧಿಕಾರವನ್ನು ಕೊಟ್ಟು ಗ್ರಾಮದ ಅಭಿವೃದ್ಧಿಗೆ ಸಾಥ್ ನೀಡುವ ಕೆಲಸ ಸರಕಾರದಿಂದ ಆಗುತ್ತಿದೆ. ಗಾಂಧಿ ಕಂಡ ರಾಮರಾಜ್ಯದ ಕನಸನ್ನು ನನಸು ಮಾಡುವಲ್ಲಿ ನಾವೆಲ್ಲರೂ ಪ್ರಯತ್ನ ಪಡಬೇಕಾಗಿದೆ ಎಂದರು. ಪಿಡಿಒ ವಸೀಮ್ ಗಂಧದ್ ಶುಭ ಹಾರೈಸಿದರು.

ಗ್ರಾಪಂ ಸದಸ್ಯರುಗಳಾದ ವೆಂಕಟೇಶ್ ಸುಳ್ಯಪದವು, ಪದ್ಮನಾಭ, ರವೀಂಧ್ರ ಅರೆಪ್ಪಾಡಿ, ವಸಂತ ಪೆರಿಗೇರಿ, ಧರ್ಮೇಂದ್ರ ಪದಡ್ಕ, ಲಿಂಗಪ್ಪ ಮೋಡಿಕೆ, ಕಲಾವತಿ ಗೌಡ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮುಂಡೋಳೆ, ಪುಷ್ಪಲತಾ, ಸವಿತಾ ನೇರೋಳ್ತಡ್ಕ, ಸುಶೀಲ, ಸುಜಾತ, ಗ್ರಾಪಂ ಸಿಬ್ಬಂದಿಗಳಾದ ಸುಕನ್ಯ, ಹೇಮಾವತಿ, ಶೀಲಾವತಿ, ಶಾರದಾ, ಜಯಪ್ರಸಾದ್ ರೈ, ಅಬ್ದುಲ್ ರಹಿಮಾನ್, ಸ್ಥಳೀಯರಾದ ಸುಬ್ರಾಯ ನಾಯಕ್,ಸುರೇಶ್, ನೀರು ನಿರ್ವಾಹಕ ಸೀತಾರಾಮ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಸದಸು ರವಿರಾಜ್ ರೈ ಸಜಂಕಾಡಿ ಸ್ವಾಗತಿಸಿದರು. ಸುದ್ದಿ ಚಾನೆಲ್ ನಿರೂಪಕ ಗೌತಮ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಂಕರ್ ಚೈತ್ರಾ ಬಂಗೇರ ವಂದಿಸಿದರು. ಸುದ್ದಿ ಬಿಡುಗಡೆ ಸಿಇಓ ಸೃಜನ್ ಊರುಬೈಲ್, ವರದಿಗಾರರಾದ ಸಿಶೇ ಕಜೆಮಾರ್, ರಾಜೇಶ್ ಎಂ.ಎಸ್ ಮಾಡಾವು, ಶಿವಕುಮಾರ್ ಈಶ್ವರಮಂಗಲ, ಫಾರೂಕ್ ಶೇಖ್ ಮುಕ್ವೆ ಉಪಸ್ಥಿತರಿದ್ದರು.
ಚಿತ್ರ: ಬಡಗನ್ನೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.