ಕೆ.ಎಸ್.ಆರ್.ಟಿ.ಸಿ. ಪುತ್ತೂರು ಘಟಕದ ಚಾಲಕ ಮಿಂಗೆಲ್ ರೋನಿ ಡೇಸಾ ಸೆ. 30ರಂದು ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗದ ಪುತ್ತೂರು ಘಟಕದಲ್ಲಿ ಕಳೆದ 30 ವರ್ಷಗಳಿಂದ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಮಿಂಗೆಲ್ ರೋನಿ ಡೇಸಾ ಸೆ. 30ರಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಮಿಂಗೆಲ್ ರೋನಿ ಡೇಸಾ ಇವರು 1992ನವೆಂಬರ್ 12ರಂದು ಕೆ.ಎಸ್.ಆರ್.ಟಿ.ಸಿ. ಪುತ್ತೂರು ಘಟಕದಲ್ಲಿ ಸೇವೆಗೆ ನೇಮಕಾತಿ ಆಗಿದ್ದು, ಅಂದಿನಿಂದ ಇಂದಿನ ತನಕ ಕಳೆದ 30 ವರ್ಷಗಳಿಂದ ಸೇವಾ ನಿರತರಾಗಿದ್ದಾರೆ.

2004ರಲ್ಲಿ ಬೆಳ್ಳಿ ಪದಕ:
ಮಿಂಗೆಲ್ ರೋನಿ ಡೇಸಾರವರ ಪ್ರಾಮಾಣಿಕ ಸೇವೆ ಮತ್ತು 2004ರಲ್ಲಿ ಇಲಾಖೆ ವತಿಯಿಂದ ಅಪಘಾತ ರಹಿತ ಸೇವೆಗಾಗಿ ನೀಡುವ ಪುರಸ್ಕಾರಕ್ಕೆ ಭಾಜನರಾಗಿ ಬೆಳ್ಳಿ ಪದಕ ಪಡೆದಿದ್ದರು. ಮಿಂಗೆಲ್ ರೋನಿ ಡೇಸಾರವರು ಪುತ್ತೂರು ಪಡೀಲು ನಿವಾಸಿಯಾಗಿರುತ್ತಾರೆ. ಇವರ ಪತ್ನಿ ಶ್ರೀಮತಿ ಕ್ಲೇರಿ ವೇಗಸ್ ಉಪ್ಪಿನಂಗಡಿ ವ್ಯವಸಾಯಿಕ ಸಹಕಾರಿ ಸಂಘದಲ್ಲಿ ಮುಖ್ಯ ಕಾರ್‍ಯ

ನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ರೋವಿನ್ ಪ್ರತಾಪ್ ಡೇಸಾ ಮೆಕಾನಿಕಲ್ ಇಂಜಿನಿಯರ್ ಪದವಿ ಪಡೆದು ಪ್ರಸಕ್ತ ದೆಹಲಿಯಲ್ಲಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಪುತ್ರಿ ರೀಮಾ ರೋಸ್ ಡೇಸಾ ಎಂ.ಕಾಂ. ಪದವಿ ಪಡೆದಿದ್ದು, ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ, ಇದೀಗ ಮಸ್ಕತ್‌ನಲ್ಲಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿ ಇದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.