ಸುದ್ದಿ ಗ್ರಾಮಸ್ವರಾಜ್ಯ ಗಾಂಧಿರಥ: ಕೆದಂಬಾಡಿ ಪಂಚಾಯತ್‌ನಿಂದ ಅದ್ಧೂರಿ ಸ್ವಾಗತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸುದ್ದಿ ಕೇವಲ ಪತ್ರಿಕೆಯಾಗದೇ ಜನಪರ ಕಾರ್ಯಕ್ರಮಗಳ ಮಾಧ್ಯಮವಾಗಿದೆ: ರತನ್ ರೈ ಕುಂಬ್ರ
  • ಡಾ.ಯು.ಪಿ.ಶಿವಾನಂದರು ಸುದ್ದಿಯ ಮೂಲಕ ದೊಡ್ಡ ಕುಟುಂಬ ಬೆಳೆಸಿಕೊಂಡಿದ್ದಾರೆ: ಪುರಂದರ ರೈ ಮಿತ್ರಂಪಾಡಿ
  • ಹೋರಾಟದಿಂದಲೇ ಆರಂಭವಾದ ಪತ್ರಿಕೆ ಸುದ್ದಿ ಆಗಿದೆ: ಶಿವರಾಮ ಗೌಡ ಇದ್ಯಪೆ
  • ಗಾಂಧಿ ಕನಸು ನನಸು ಮಾಡುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ: ಅಜಿತ್ ಜಿ.ಕೆ
  • ಸುದ್ದಿಯ ಗಾಂಧಿರಥ ಕಲ್ಪನೆಯು ವಿಶೇಷವಾದದ್ದು ಆಗಿದೆ: ಮೋಹನ್ ಆಳ್ವ


ಪುತ್ತೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಜನ್ಮದಿನಾಚರಣೆಯ ಪ್ರಯುಕ್ತ ಸುದ್ದಿ ಬಿಡುಗಡೆ ಪತ್ರಿಕೆ ಹಮ್ಮಿಕೊಂಡಿರುವ ಗ್ರಾಮಸ್ವರಾಜ್ಯ ಕಲ್ಪನೆಯ ಗಾಂಧಿರಥಕ್ಕೆ ಕೆದಂಬಾಡಿ ಗ್ರಾಪಂನಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಪಂಚಾಯತ್ ವಠಾರಕ್ಕೆ ರಥ ಆಗಮಿಸುತ್ತಿದ್ದಂತೆ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ಮತ್ತು ಸದಸ್ಯರುಗಳು ಮತ್ತು ಊರ ಗಣ್ಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ರಥಕ್ಕೆ ಹೂ ಹಾರ ಹಾಕುವ ಮೂಲಕ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ರತನ್ ರೈ ಕುಂಬ್ರರವರು, ಗ್ರಾಮ ಸ್ವರಾಜ್ಯ ರಥವು ಕೆದಂಬಾಡಿ ಗ್ರಾಮ ಪಂಚಾಯತ್‌ಗೆ ಆಗಮಿಸಿರುವುದು ಖುಷಿ ತಂದಿದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸಿದೆ, ಗ್ರಾಮ ಸ್ವರಾಜ್ಯದ ಮೂಲಕ ರಾಮರಾಜ್ಯದ ನಿರ್ಮಾಣದ ಕನಸಿದೆ ಇದನ್ನು ನನಸು ಮಾಡುವ ದೃಷ್ಟಿಯಿಂದ ಗ್ರಾಮದ ನಾಗರೀಕರಿಗೆ ಅರಿವು ಮೂಡಿಸುವ ಕೆಲಸ ಸುದ್ದಿ ಮಾಧ್ಯಮದಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಈಗಾಗಲೇ ಸುದ್ದಿ ಮಾಧ್ಯಮ ಕೇವಲ ಪತ್ರಿಕೆಯಾಗಿ ನ್ಯೂಸ್ ಮಾತ್ರ ಮಾಡದೇ ಹಲವು ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದು ಹೇಳಿ ಶುಭ ಹಾರೈಸಿದರು.ಕೆದಂಬಾಡಿ ಕೆಯ್ಯೂರು ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಶಿವರಾಮ ಗೌಡ ಇದ್ಯಪೆ ಮಾತನಾಡಿ, ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಬೇಕು ಎಂಬ ನಿಟ್ಟಿನಲ್ಲಿ ಸುದ್ದಿ ಹಮ್ಮಿಕೊಂಡಿರುವ ಗಾಂಧಿ ರಥ ಕಲ್ಪನೆಯೇ ವಿಶೇಷವಾದದ್ದು ಆಗಿದೆ. ಹೋರಾಟದಿಂದಲೇ ಹುಟ್ಟಿಕೊಂಡಿರುವ ಸುದ್ದಿ ಪತ್ರಿಕೆಯು ಡಾ.ಯು.ಪಿ.ಶಿವಾನಂದರ ಕನಸಿನ ಕೂಸಾಗಿದೆ.

ಪತ್ರಿಕೆಯ ಮೂಲಕ ಗ್ರಾಮದ ಕುಂದುಕೊರತೆಗಳ ಜೊತೆಯಲ್ಲಿ ಇಲಾಖೆಗಳ ಕುಂದುಕೊರತೆಗಳಿಗೆ ಪರಿಹಾರ ಕೊಡಿಸುವಲ್ಲಿಯೂ ಶ್ರಮ ವಹಿಸುತ್ತಿದೆ ಎಂದರು. ಪಂಚಮಿ ಗ್ರೂಪ್‌ನ ಮಾಲಕ, ಉದ್ಯಮಿ ಮಿತ್ರಂಪಾಡಿ ಪುರಂದರ ರೈಯವರು ಮಾತನಾಡಿ, ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಜನರಿಗೆ ತಿಳಿಸುವ ಕೆಲಸ ಸುದ್ದಿ ಮಾಧ್ಯಮದಿಂದ ಆಗುತ್ತಿರುವುದು ಶ್ಲಾಘನೀಯ, ಸುದ್ದಿ ಕೇವಲ ಒಂದು ಸಂದೇಶ ಮಾತ್ರ ಸಾರುತ್ತಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರಬೇಕಾದ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದರು.
ಡಾ.ಯು.ಪಿ.ಶಿವಾನಂದ ದೊಡ್ಡ ಅಭಿಮಾನಿ ನಾನಾಗಿದ್ದೇನೆ. ಒಬ್ಬ ಪತ್ರಿಕೆಯ ಸಂಪಾದಕರಾಗಿ ದುಡ್ಡು ಮಾಡಲು ಕಷ್ಟವಿಲ್ಲ ಆದರೆ ಹೆಸರು ಮಾಡಲಿಕ್ಕೆ ಕಷ್ಟವಿದೆ. ಈ ನಿಟ್ಟಿನಲ್ಲಿ ಡಾ.ಯು.ಪಿ.ಶಿವಾನಂದರು ಹೆಸರು ಮಾಡುವ ಮೂಲಕ ದೊಡ್ಡ ಕುಟುಂಬವನ್ನು ಮಾಡಿಕೊಂಡಿದ್ದಾರೆ. ಸುದ್ದಿಗೆ ತನ್ನದೇ ಆದ ದೊಡ್ಡ ಕುಟುಂಬ ಇದೆ. ಇದು ಹೆಮ್ಮೆಯ ವಿಷಯವಾಗಿದೆ ಎಂದರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಮಾತನಾಡಿ, ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಮೂಲಕ ಸುದ್ದಿ ಹಮ್ಮಿಕೊಂಡಿರುವ ಗಾಂಧಿರಥವು ಒಂದು ಒಳ್ಳೆಯ ಕೆಲಸವಾಗಿದೆ. ಗಾಂಧಿ ಚಿಂತನೆಗಳು ಜನರಿಗೆ ಮುಟ್ಟಬೇಕು, ಗ್ರಾಮದ ಅಭಿವೃದ್ಧಿಯೊಂದಿಗೆ ಗಾಂಧಿ ಕಂಡ ರಾಮರಾಜ್ಯದ ಕನಸು ನನಸಾಗಿಸುವಲ್ಲಿ ನಾವೆಲ್ಲರೂ ಪ್ರಯತ್ನ ಪಡೋಣ ಎಂದರು. ಶ್ರೀಕ್ಷೇತ್ರ ಸನ್ಯಾಸಿಗುಡ್ಡೆಯ ಶ್ರೀರಾಮ ಮಂದಿರದ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮುಂಡಾಳಗುತ್ತು ಮೋಹನ್ ಆಳ್ವರವರು ಮಾತನಾಡಿ, ಗಾಂಧಿ ಕಂಡ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸುದ್ದಿ ಗಾಂಧಿರಥ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ, ಗಾಂಧಿರಥ ಕಲ್ಪನೆಯೇ ವಿಶೇಷವಾದದ್ದು ಆಗಿದೆ, ಇದಕ್ಕೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಕೃಷ್ಣ ಕುಮಾರ್ ಗೌಡ, ವಿಠಲ ರೈ ಮಿತ್ತೋಡಿ, ಸುಜಾತ ಎನ್, ರೇವತಿ, ಸುಜಾತ, ಜಯಲಕ್ಷ್ಮೀ ಬಲ್ಲಾಳ್, ಅಸ್ಮಾ ಗಟ್ಟಮನೆ, ಗ್ರಾಪಂ ಲೆಕ್ಕಸಹಾಯಕಿ ಪರಮೇಶ್ವರಿ, ಸಿಬ್ಬಂದಿಗಳಾದ ಜಯಂತ ಮೇರ್ಲ, ಗಣೇಶ್, ಶಶಿಪ್ರಭಾ, ಸ್ಥಳೀಯರಾದ ಚಂದ್ರ ನಲಿಕೆ ಇದ್ಪಾಡಿ, ಪದ್ಮಶ್ರೀ ಗ್ರೂಪ್‌ನ ಮಾಲಕ ರತ್ನಾಕರ ರೈ ಕೆದಂಬಾಡಿಗುತ್ತು, ತಿಂಗಳಾಡಿ ಪ್ರಾಥಮಿಕ ಶಾಲಾ ಶಿಕ್ಷಕ ನಿರಂಜನ್, ಉಮೇಶ್ ರೈ, ಎ.ಟಿ.ನಾರಾಯಣ ತಿಂಗಳಾಡಿ, ಚಂದ್ರಹಾಸ ಬಲ್ಲಾಳ್ ಬೀಡು, ರಿಕ್ಷಾ ಚಾಲಕ ಮಾಲಕರ ಸಂಘದ ನೌಷದ್, ವಿಶ್ವನಾಥ ರೈ ಸಾಗು, ಆತ್ಮಿ ಸ್ಟುಡಿಯೋದ ದಿನೇಶ್ ಪಿದಪಟ್ಲ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಗ್ರಾಪಂ ಕಾರ್ಯದರ್ಶಿ ಸುನಂದ ರೈ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಸಿಶೇ ಕಜೆಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದ್ದಿ ವರದಿಗಾರರಾದ ರಾಜೇಶ್ ಎಂ.ಎಸ್ ಮಾಡಾವು, ಶಿವಕುಮಾರ್ ಈಶ್ವರಮಂಗಲ, ಫಾರೂಕ್ ಶೇಖ್ ಮುಕ್ವೆ, ಚಾನೆಲ್‌ನ ನಿರೂಪಕ ಗೌತಮ್ ಶೆಟ್ಟಿ, ನಿರೂಪಕಿ ಚೈತ್ರಾ ಬಂಗೇರ ಉಪಸ್ಥಿತರಿದ್ದರು.

ಸೃಜನ್ ಊರುಬೈಲ್‌ರವರಿಗೆ ಗೌರವಾರ್ಪಣೆ
ಸುದ್ದಿ ಸಮೂಹ ಸಂಸ್ಥೆಗಳ ಸಿಇಓ ಸೃಜನ್ ಊರುಬೈಲ್‌ರವರಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ನಡೆಯಿತು. ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರರವರು ಹೂ ಗುಚ್ಛ ನೀಡುವ ಮೂಲಕ ಸೃಜನ್‌ರವರನ್ನು ಗೌರವಿಸಿದರು.

ಚೆಕ್ ವಿತರಣೆ
ಕುಯ್ಯಾರು ಸುರೇಶ್‌ರವರ ಪುತ್ರಿ ನಳಿನಿಯವರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಾಗೂ ಕುರಿಕ್ಕಾರ ನಿವಾಸಿ ಕೋವಿಡ್‌ನಿಂದ ಮೃತಪಟ್ಟ ಕಮಲರವರ ಕುಟುಂಬಕ್ಕೆ ಗ್ರಾಪಂನಿಂದ ಸಹಾಯಧನವನ್ನು ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರತನ್ ರೈಯವರು ಚೆಕ್ ವಿತರಣೆ ಮಾಡುವ ಮೂಲಕ ವಿತರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.