ಸುದ್ದಿಯ ಗ್ರಾಮಸ್ವರಾಜ್ಯ ಗಾಂಧಿ ರಥಕ್ಕೆ ನೆ.ಮುಡ್ನೂರು ಗ್ರಾ.ಪಂ.ನಿಂದ ಸ್ವಾಗತ:  ಗಾಂಧೀಜಿಯವರ ಆಶಯಗಳು ಗ್ರಾಮ ಮಟ್ಟದಲ್ಲೇ ಸಾಕಾರಗೊಳ್ಳಬೇಕು-ರಮೇಶ್ ರೈ ಸಾಂತ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕೆ ವತಿಯಿಂದ ಹಮ್ಮಿಕೊಂಡಿರುವ ಗ್ರಾಮ ಸ್ವರಾಜ್ಯ ಗಾಂಧಿ ರಥಕ್ಕೆ ನೆ.ಮುಡ್ನೂರು ಗ್ರಾ.ಪಂ ವತಿಯಿಂದ ಸೆ.29ರಂದು ಸ್ವಾಗತ ನೀಡಲಾಯಿತು.

ದೀಪ ಬೆಳಗಿಸಿ ಗ್ರಾಮ ಸ್ವರಾಜ್ಯ ರಥಕ್ಕೆ ಮಾಲಾರ್ಪಣೆ ಮಾಡಿದ ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದರಿಂದ ಹಿಡಿದು ದೇಶದ ಕಟ್ಟಕಡೆಯ ವ್ಯಕ್ತಿಯೂ ನೆಮ್ಮದಿಯಿಂದ ಸ್ವಾಭಿಮಾನದ ಜೀವನ ನಡೆಸಬೇಕು ಎನ್ನುವ ಕನಸನ್ನು ಕಂಡಿದ್ದ ಮಹಾನ್ ವ್ಯಕ್ತಿಯಾಗಿದ್ದಾರೆ. ನಮ್ಮ ದೇಶಕ್ಕೆ ಮಾತ್ರವಲ್ಲದೇ ಪ್ರಪಂಚಕ್ಕೇ ಅವರು ಮಹಾತ್ಮ ಎಂದು ಹೆಸರು ಪಡೆದಿದ್ದಾರೆ. ಅಂತಹ ಗಾಂಧೀಜಿಯವರ ಆಶಯಗಳನ್ನು ಗ್ರಾಮ ಮಟ್ಟದಲ್ಲಿ ಬಿತ್ತುವ ಕೆಲಸವನ್ನು ಮಾಡುತ್ತಿರುವ ಸುದ್ದ ಪತ್ರಿಕೆಯ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು. ಗಾಂಧೀಜಿಯವರ ಆಶಯಗಳು ಈಡೇರಬೇಕು, ಪ್ರತಿಯೋರ್ವರು ಗಾಂಧೀಜಿಯವರ ಆಶಯ ಮತ್ತು ಚಿಂತನೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ ರಮೇಶ್ ರೈ ಸಾಂತ್ಯ ಅವರು ಸುದ್ದಿ ಬಳಗದ ವತಿಯಿಂದ ಹಮ್ಮಿಕೊಂಡಿರುವ ಗ್ರಾಮ ಸ್ವರಾಜ್ಯ ಗಾಂಧಿ ರಥ ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಸಮಾಜದ ಹಿತ ಕಾಪಾಡಲು ಸುದ್ದಿ ಶ್ರಮಿಸುತ್ತಿದೆ-ಬೊಮ್ಮೆಟ್ಟಿ
ಪುತ್ತೂರು ಒಕ್ಕಲಿಗ ಗೌಡ ಸಂಘದ ನಿಕಟಪೂರ್ವ ಅಧ್ಯಕ್ಷರು, ನಿವೃತ್ತ ಶಿಕ್ಷಕರೂ ಆದ ನಾಗಪ್ಪ ಗೌಡ ಬೊಮ್ಮೆಟ್ಟಿ ಮಾತನಾಡಿ ಗಾಂಧೀಜಿಯವರು ಈ ದೇಶ ಕಂಡ ಮಹಾನ್ ವ್ಯಕ್ತಿಯಾಗಿದ್ದು ಅಸ್ಪೃಶ್ಯತೆಯ ವಿರುದ್ದ ಹೋರಾಟ ನಡೆಸಿದವರಾಗಿದ್ದಾರೆ, ದೇಶಕ್ಕಾಗಿ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದ ಅವರು ತಮಗೆ ಅಪಾರ ಆಸ್ತಿ ಪಾಸ್ತಿ ಮಾಡುವ ಅವಕಾಶ ಇದ್ದರೂ ಆ ಕಡೆಗೆ ಕಣ್ಣೆತ್ತಿಯೂ ನೋಡದೆ ತನ್ನ ಜೀವನವನ್ನು ಸಂಪೂರ್ಣವಾಗಿ ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು ಎಂದು ಅವರು ಹೇಳಿದರು. ಗ್ರಾಮದ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ಸಾರಿದ್ದ ಗಾಂಧೀಜಿಯವರ ಸಂದೇಶ ಸಾರ್ವಕಾಲಿಕವಾಗಿದ್ದು ಅವರ ಸಂದೇಶಗಳನ್ನು ಹೊತ್ತು ಗ್ರಾಮ ಮಟ್ಟದಲ್ಲಿ ಸುದ್ದಿ ಬಿಡುಗಡೆಯವರು ಯಾತ್ರೆ ಮಾಡುತ್ತಿರುವುದು ಖುಷಿಯ ಸಂಗತಿಯಾಗಿದೆ. ಸಮಾಜದ ಹಿತ ಕಾಪಾಡುವಲ್ಲಿ ಸುದ್ದಿ ಪತ್ರಿಕೆಯ ಡಾ.ಯು.ಪಿ ಶಿವಾನಂದರು ಮತ್ತು ಬಳಗದವರು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಸಾಮಾಜಿಕ ನ್ಯಾಯ ಗಾಂಧೀಜಿ ಕನಸಾಗಿತ್ತು-ರಾಮ ಮೇನಾಲ
ನೆ.ಮುಡ್ನೂರು ಗ್ರಾ.ಪಂ ಸದಸ್ಯ ರಾಮ ಮೇನಾಲ ಮಾತನಾಡಿ ಗ್ರಾಮದ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯ ಮೊದಲ ಹೆಜ್ಜೆಯಾಗಿದ್ದು ಸಾಮಾಜಿಕ ನ್ಯಾಯ ಮತ್ತು ಎಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸಬೇಕೆನ್ನುವುದು ಗಾಂಧೀಜಿಯವರ ಕನಸಾಗಿತ್ತು, ಆ ಕನಸನ್ನು ಸಾಕಾರಗೊಳಿಸಲು ಗ್ರಾಮ ಮಟ್ಟದಲ್ಲಿ ಪ್ರಯತ್ನಿಸುತ್ತಿರುವ ಸುದ್ದಿ ಪತ್ರಿಕೆಯ ಕಾರ್ಯ ಶ್ಲಾಘನೀಯವಾಗಿದೆ. ಡಾ.ಯು.ಪಿ ಶಿವಾನಂದರು ದೂರದೃಷ್ಟಿ ಚಿಂತನೆಯ ವ್ಯಕ್ತಿಯಾಗಿದ್ದು ಕತ್ತಲೆಯಲ್ಲಿರುವವರಿಗೆ ಬೆಳಕನ್ನು ನೀಡುವ ಕಾರ್ಯವನ್ನು ಸುದ್ದಿ ಮಾಡುತ್ತಿದೆ ಎಂದು ಹೇಳಿದರು.

ಸುದ್ದಿ ಪತ್ರಿಕೆಯ ವಿಭಿನ್ನ ಕಾರ್ಯ ಶ್ಲಾಘನೀಯ-ಖಾದರ್
ನೆ.ಮುಡ್ನೂರು ಗ್ರಾ.ಪಂ ಮಾಜಿ ಸದಸ್ಯ ಖಾದರ್ ಕರ್ನೂರು ಮಾತನಾಡಿ ಸುದ್ದಿ ಬಿಡುಗಡೆ ಪತ್ರಿಕೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರೆಡೆಯಲ್ಲಿ ಗುರುತಿಸಿಕೊಂಡಿದ್ದು ನಿಷ್ಪಕ್ಷಪಾತ ವರದಿ ಮೂಲಕ ಎಲ್ಲರ ನೆಚ್ಚಿನ ಪತ್ರಿಕೆಯಾಗಿ ಗುರುತಿಸಿಕೊಂಡಿದೆ. ಕೇವಲ ವರದಿಗಾರಿಕೆಗೆ ಮಾತ್ರ ಪತ್ರಿಕೆಯನ್ನು ಮೀಸಲಿಡದೆ ಅದರಾಚೆಗೂ ವಿವಿಧ ಸಮಾಜಪರವಾದ ಕಾರ್ಯಗಳನ್ನು ಮಾಡುತ್ತಿರುವ ಸುದ್ದಿ ಬಳಗ ಇದೀಗ ಗಾಂಧೀಜಿಯವರ ಸಂದೇಶಗಳನ್ನು ಗ್ರಾಮ ಮಟ್ಟದಲ್ಲಿ ಸಾರುತ್ತಾ ಗಾಂಧಿ ಆಶಯಗಳನ್ನು ಸಮಾಜದಲ್ಲಿ ನೆಲೆ ನಿಲ್ಲುವಂತೆ ಮಾಡಲು ಶ್ರಮಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಗಾಂಧಿವಾದದ ನಿರ್ಲಕ್ಷ್ಯವೇ ಸಮಾಜದ ಅಸ್ಥಿರತೆಗೆ ಕಾರಣ-ಸಂಜೀವ ರೈ
ಬಡಗನ್ನೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸಂಜೀವ ರೈ ಮಾತನಾಡಿ ಗಾಂಧಿವಾದದ ನಿರ್ಲಕ್ಷ್ಯವೇ ಸಮಾಜದಲ್ಲಿ ಅಸ್ಥಿರತೆ ಉಂಟಾಗಲು ಕಾರಣ. ಗಾಂಧಿ ಕಂಡ ಕನಸುಗಳು ನನಸಾಗಬೇಕು. ಈ ನಿಟ್ಟಿನಲ್ಲಿ ಅಭಿಯಾನದ ಮೂಲಕ ಗ್ರಾಮ-ಗ್ರಾಮಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿರುವ ಸುದ್ದಿ ಬಿಡುಗಡೆಯ ಕಾರ್ಯ ಅಭಿನಂದನೀಯ ಎಂದು ಹೇಳಿದರು.

ಸುದ್ದಿ ಚಾನೆಲ್‌ನ ಮುಖ್ಯ ನಿರೂಪಕ ಗೌತಮ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಿಎಂಎಸ್ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಮಂಜುನಾಥ ರೈ ಕುತ್ಯಾಳ, ಗ್ರಾಮ ಕರಣಿಕ ಉಮೇಶ್ ಕಾವಡಿ, ಕಾಂಗ್ರೆಸ್ ಮುಖಂಡ ವಿಕ್ರಂ ರೈ ಸಾಂತ್ಯ ಹಾಗೂ ಸಾರ್ವಜನಿಕರು, ಸುದ್ದಿ ಬಿಡುಗಡೆ ಸಿಇಓ ಸೃಜನ್ ಊರುಬೈಲು, ವರದಿಗಾರರಾದ ಸಿಶೇ ಕಜೆಮಾರ್, ಶಿವಕುಮಾರ್ ಈಶ್ವರಮಂಗಲ, ರಾಜೇಶ್ ಎಂ.ಎಸ್, ಉಮಾಪ್ರಸಾದ್ ರೈ ಸವಣೂರು, ಫಾರೂಕ್ ಶೇಕ್, ಚೈತ್ರಾ ಬಂಗೇರ ಉಪಸ್ಥಿತರಿದ್ದರು. ಗ್ರಾ.ಪಂ ಪಿಡಿಓ ಸಂದೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುದ್ದಿ ಬಿಡುಗಡೆ ವರದಿಗಾರ ಯೂಸುಫ್ ರೆಂಜಲಾಡಿ ವಂದಿಸಿದರು. ಗ್ರಾ.ಪಂ ಸಿಬ್ಬಂದಿಗಳಾದ ಶೀನಪ್ಪ, ಚಂದ್ರಶೇಖರ, ಮಲ್ಲೇಶ, ಅಬ್ದುಲ್ ರಹಿಮಾನ್, ಸಂಧ್ಯಾ ಕೆ, ವಿನುತಾ, ದ್ವಿತಿ ಎಸ್ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.