ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರೂ.2.82ಲಕ್ಷ ಲಾಭ, ಶೇ.20 ಡಿವಿಡೆಂಡ್, ಪ್ರತಿ ಲೀ.ಗೆ 85 ಪೈಸೆ ಬೋನಸ್


ಪುತ್ತೂರು: ಬಲ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘವು 2020-21ನೇ ಸಾಲಿನಲ್ಲಿ ರೂ.2,82,696.29 ನಿವ್ವಳ ಲಾಭಗಳಿಸಿದೆ. ಸಂಘ ಗಳಿಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೆ.20 ಡಿವಿಡೆಂಡ್, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ 85 ಪೈಸೆ ಬೋನಸ್ ನೀಡಲಾಗುವುದು ಎಂದು ಅಧ್ಯಕ್ಷ ಚಂದಪ್ಪ ಪೂಜಾರಿ ಕಾಡ್ಲ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.30ರಂದು ಸಂಘದ ವಠಾರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘವು34 ವರ್ಷಗಳನ್ನು ಪೂರೈಸಿದ್ದು 26 ವರ್ಷಗಳಿಂದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ವರದಿ ವರ್ಷದಲ್ಲಿ ಸಂಘದಲ್ಲಿ126 ಸದಸ್ಯರನ್ನು ಹೊಂದಿದ್ದು ರೂ.24,800 ಪಾಲು ಬಂಡವಾಳ ಹೊಂದಿರುತ್ತದೆ. ಹಾಲು ವ್ಯಾಪಾರದಲ್ಲಿ ಸಂಘವು ರೂ.5,30,977.85 ಆದಾಯ, ಪಶು ಆಹಾರ ಮತ್ತು ಲವಣ ಮಿಶ್ರಣ ವ್ಯವಹಾರದಿಂದ ರೂ.20,550, ಹಾಗೂ ರೂ.93,055.27 ಆದಾಯ ಬಂದಿರುತ್ತದೆ. ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ಸಂಘವು ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘದ ಮುಂದಿನ ಯೋಜನೆಯಾಗಿ ಹೈನುಗಾರಿಕೆ ಅಭಿವೃದ್ಧಿ ಪಡಿಸುವಲ್ಲಿ ಸಂಘದಿಂದ ಮಾರ್ಗದರ್ಶನ, ಶುದ್ಧ ಹಾಲು ಉತ್ಪಾದನೆಗೆ ಮಾರ್ಗದರ್ಶನ ಹಾಗೂ ಸಂಘದ ಕಟ್ಟಡ ಅಭಿಪಡಿಸಲಾಗುವುದು ಎಂದರು.


ಮುಖ್ಯ ಅತಿಥಿಗಳಾಗಿದ್ದ ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ ಹೈನುಗಾರಿಕೆಯಲ್ಲಿ ರೈತರು ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಹೈನುಗಾರಿಕೆಯ ಅಭಿವೃದ್ಧಿಗೆ ಒಕ್ಕೂಟದಿಂದ ದೊರೆಯುವ ವಿವಿಧ ಸಹಾಯಧನಗಳ ಮಾಹಿತಿ ನೀಡಿದರು. ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ರಾಮ ಭಟ್ ಹಸಂತಡ್ಕ, ತ್ರಿವಿಕ್ರಮ ಭಟ್ ವಿವಿಧ ಸಲಹೆ,‌ ಸೂಚನೆಗಳನ್ನು ನೀಡಿದರು. ಉಪಾಧ್ಯಕ್ಷ ಎನ್.ಅಂಬ್ರೋಸ್ ಡಿ’ಸೋಜ, ನಿರ್ದೇಶಕರಾದ ಸತ್ಯಪ್ರಸಾದ್ ಕೆ., ವಿಜಯ ಕುಮಾರ್ ರೈ, ಶಿವರಾಮ ಭಟ್ ಕೆ., ಹೈದರಾಲಿ, ಸುಂದರ ಎಂ., ಆನಂದ ಪೂಜಾರಿ, ಲಕ್ಷ್ಮೀ ರೈ, ವಿಶ್ಚೇಶ್ವರ ಭಟ್ ಕೆ., ವಾರಿಜ ರೈ ಎ., ರತ್ನಾವತಿ ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಭಾಪುರಸ್ಕಾರ;
ಎಸ್.ಎಸ್.ಎಸ್.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಹಾಲು ಉತ್ಪಾದಕರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಎಸ್.ಎಸ್.ಎಲ್.ಸಿಯಲ್ಲಿ ರಶ್ಮಿ ಜಿ.ಕೆ, ಭವಿಷ್ ರೈ ಬಿ., ಪಿಯುಸಿಯಲ್ಲಿ ದಿಶಾಕ ವೈ ಭಟ್ ಹಾಗೂ ದೀಪ್ತಿಲಕ್ಷ್ಮೀಯವರಿಗೆ ನೀಡಿ ಗೌರವಿಸಲಾಯಿತು. ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಸದಸ್ಯ ನಾಗೇಶ್ ನಾಯ್ಕ ಪ್ರಾರ್ಥಿಸಿದರು. ಅಧ್ಯಕ್ಷ ಚಂದಪ್ಪ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಜನಾರ್ದನ ಕೆ. ವರದಿ, ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಅಂಬ್ರೋಸ್ ಡಿ’ಸೋಜ ಅಗರ್ತಬೈಲು ವಂದಿಸಿದರು. ಹಾಲು ಪರೀಕ್ಷಕ ಮನೋಜ್ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.