ಜಿಡೆಕಲ್ಲು ಸಂಪರ್ಕ ರಸ್ತೆ ಅಗಲೀಕರಣಕ್ಕೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1ಪುತ್ತೂರು: ನಗರಸಭಾ ವ್ಯಾಪ್ತಿಯ ಬೆದ್ರಾಳ-ಜಿಡೆಕಲ್ಲು ರಸ್ತೆಯನ್ನು ಅಗಲೀಕರಣಗೊಳಿಸುವಂತೆ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಪುತ್ತೂರು ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಈ ರಸ್ತೆಯ ಸ್ವಲ್ಪ ಭಾಗವನ್ನು ಈಗಾಗಲೇ ಅಗಲೀಕರಣಗೊಳಿಸಲಾಗಿದ್ದರೂ ಜಿಡೆಕಲ್ಲುನಿಂದ ಬೆದ್ರಾಳದವರೆಗೆ ಅಗಲೀಕರಣ ಬಾಕಿ ಇರುತ್ತದೆ. ಸುಬ್ರಹ್ಮಣ್ಯ, ಸುಳ್ಯ ಕಡೆಗಳಿಂದ ಬರುವ ವಾಹನ ಚಾಲಕರು ನಗರದ ಸಂಪರ್ಕ ಇಲ್ಲದೆ ಉಪ್ಪಿನಂಗಡಿ, ಧರ್ಮಸ್ಥಳ ಕಡೆಗಳಿಗೆ ಪ್ರಯಾಣಿಸಲು ಈ ರಸ್ತೆಯನ್ನು ಬಳಸುತ್ತಿದ್ದಾರೆ. ಪ್ರತಿನಿತ್ಯ ಈ ರಸ್ತೆಯ ಮೂಲಕ ಅನೇಕ ವಾಹನಗಳು ಹಾದು ಹೋಗುತ್ತಿದ್ದು ಈಗಿರುವ ರಸ್ತೆ ಕಿರಿದಾಗಿದ್ದು ಕೆಲವು ಕಡೆ ಅಪಾಯಕಾರಿ ತಿರುವುಗಳಿಂದ ಕೂಡಿರುತ್ತದೆ. ಆದ್ದರಿಂದ ರಸ್ತೆ ಅಗಲೀಕರಣ ತೀರಾ ಅವಶ್ಯಕವಿರುತ್ತದೆ. ಈ ಹಿಂದೆ ಕೂಡ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು ಆದ್ಯತೆ ಮೇರೆಗೆ ಅನುದಾನಗಳನ್ನು ಒದಗಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಲಿಸುವಂತೆ ಮನವಿಯಲ್ಲಿ ಕೋರಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.