ನೆಹರುನಗರ, ಕಾಲೇಜು ರಸ್ತೆ ಗುಂಡಿಗೆ ತಾತ್ಕಾಲಿಕ ಪರಿಹಾರ – ಸಾರ್ವಜನಿಕರ ಸಹಕಾರದೊಂದಿಗೆ ನಗರಸಭೆ ಅಧ್ಯಕ್ಷರ ಮುತುವರ್ಜಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ನಿರಂತರ ಮಳೆಯಿಂದಾಗಿ ಕೆಲವು ಕಡೆ ರಸ್ತೆ ಗುಂಡಿ ಬಿದಿದ್ದು, ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯಲ್ಲಿ ಹಲವು ಕಡೆ ಅಲ್ಲಲ್ಲಿ ಕಂಡು ಬಂದಿರುವ ರಸ್ತೆಯಲ್ಲಿರುವ ಗುಂಡಿಗಳಿಗೆ ಸಾರ್ವಜನಿಕರ ಸಹಕಾರದೊಂದಿಗೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ನೇತೃತ್ವದಲ್ಲಿ ಕಾಂಕ್ರೀಟ್ ಹುಡಿಗಳನ್ನು ಹಾಕುವ ಮೂಲಕ ತುರ್ತಾಗಿ ತಾತ್ಕಾಲಿಕ ಪರಿಹಾರ ನೀಡಲಾಗಿದೆ.


ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಬಿದ್ದ ಕಡೆಗಳಲ್ಲಿ ಡಾಮರೀಕರಣ ಅಥವಾ ತೇಪೆ ಹಾಕುವ ಕಾರ್ಯಕ್ಕೆ ನಗರೋತ್ಥಾನದ ಯೋಜನೆ ಹಾಕಿಕೊಳ್ಳಲಾಗಿದ್ದರೂ ರಸ್ತೆ ಡಾಮರೀಕರಣ ಅಥವಾ ರಸ್ತೆ ಗುಂಡಿ ಬಿದ್ದ ಕಡೆ ತೆಪೆ ಹಾಕಲು ಮಳೆ ಬಿಡಬೇಕಾಗಿದೆ. ಆದರೆ ತಕ್ಷಣದ ಪರಿಹಾರವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮುತುವರ್ಜಿ ವಹಿಸಿದ್ದಾರೆ. ಸೆ.30ರಂದು ಕಾಂಕ್ರೀಟ್ ಹುಡಿಗಳನ್ನು ರಸ್ತೆಗುಂಡಿಗಳಿಗೆ ಸಾರ್ವಜನಿಕರ ಸಹಕಾರದೊಂದಿಗೆ ನೆಹರುನಗರ, ವಿವೇಕಾನಂದ ರಸ್ತೆ, ಕರ್ಮದಲ್ಲಿ ಮಾಡಿದ್ದಾರೆ. ಇತ್ತೀಚೆಗೆ ಎಪಿಎಂಸಿ ರಸ್ತೆಯಲ್ಲೂ ಗುಂಡಿಗಳಿಗೆ ಸಿಮೆಂಟ್ ಕಾಂಕ್ರೀಟ್ ಪರಿಹಾರ ನೀಡಿದ್ದರು.


ರಸ್ತೆ ಡಾಮರೀಕರಣಕ್ಕೆ ರೂ. 2.68  ಕೋಟಿ ಅನುದಾನ ಪ್ರಸ್ತಾವನೆ
ನೆಹರುನಗರದಿಂದ ಪಡೀಲ್ ರಸ್ತೆಯಲ್ಲಿ ಡಾಮರೀಕರಣಕ್ಕೆ ರೂ. 2.68 ಕೋಟಿ ಅನುದಾನಕ್ಕಾಗಿ ಇತ್ತಿಚೆಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮನವಿ ನೀಡಲಾಗಿತ್ತು. ಆ ಮನವಿ ಪ್ರಸ್ತಾವನೆಯಲ್ಲಿದೆ. ಇದರ ಜೊತೆಗೆ 15ನೇ ಹಣಕಾಸು ಯೋಜನೆಯಡಿ ಇನ್ನೂ ಕೆಲವು ಕಡೆ ಡಾಮರೀಕರಣ ಆಗಲಿದೆ. ಗುಂಡಿ ಬಿದ್ದ ರಸ್ತೆಗೆ ತೇಪೆ ಹಾಕಲು ಎಸ್ಟಿಮೇಟ್ ಆಗಿದೆ. ಮಳೆಗಾಲ ಬಿಟ್ಟ ತಕ್ಷಣ ಕಾಮಗಾರಿ ನಡೆಯಲಿದೆ.
ಕೆ.ಜೀವಂಧರ್ ಜೈನ್, ಅಧ್ಯಕ್ಷರು, ನಗರಸಭೆ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.