ಕೊಡಿಮರದಲ್ಲಿ ಕೃಷಿಭೂಮಿ ಸಮತ್ತಟ್ಟಿಗೆ ರೂ. 5.50ಲಕ್ಷ ಅನುದಾನ – ಸಮಗ್ರ ತನಿಖೆಗೆ ಕೊರಗ ಜನಾಂಗದ ಸಮಗ್ರ ಅಭಿವೃದ್ಧಿ ಸಭೆಯಲ್ಲಿ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊಡಿಮರದಲ್ಲಿ ಕೃಷಿ ಭೂಮಿ ಸಮತ್ತಟ್ಟಿಗಾಗಿ ರೂ.5.50ಲಕ್ಷ ಅನುದಾನ ಮಂಜೂರಾಗಿದ್ದು, ನಿರ್ಮಿತಿ ಇಲಾಖೆಯಿಂದ ಕೃಷಿ ಸಮತ್ತಟ್ಟು ಕೆಲಸದ ಪೈಕಿ ಅಲ್ಲಿ ಆಗಿರುವುದು ಕೇವಲ ರೂ. 2.50 ಲಕ್ಷದ ಕೆಲಸ. ಹಾಗಾಗಿ ಕಾಮಗಾರಿಯ ಅಂತಿಮ ಬಿಲ್ ಮಾಡಬಾರದು ಮತ್ತು ಈ ಕುರಿತು ಸಮಗ್ರ ತನಿಖೆ ಆಗಬೇಕೆಂದು ಕೊರಗ ಸಮುದಾಯದ ಅಭಿವೃದ್ಧಿ ಸಭೆಯಲ್ಲಿ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.


ಆದಿವಾಸಿ ಪಂಗಡಕ್ಕೆ ಸೇರಿದ ಕೊರಗ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ ಸರಕಾದಿಂದ ಜಾರಿಗೊಳಿಸಿದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೆ.30 ರಂದು ತಾ.ಪಂ ಕಿರು ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಉಸ್ತುವಾರಿ ಸಮಿತಿ ಸಭೆ ಸಮಿತಿ ಸದಸ್ಯರು ಮಾತನಾಡಿದರು. ಕೊಡಿಮರದಲ್ಲಿ ಕೃಷಿ ಭೂಮಿ ಸಮತ್ತಟ್ಟು ಕೆಲಸದಲ್ಲಿ ಆಗಿರುವುದು ರೂ. 2.50 ಲಕ್ಷದ ಕೆಲಸ ಮಾತ್ರ. ಆದರೆ ಇನ್ನೂ ಕೆಲಸ ಪೆಂಡಿಂಗ್ ಇದೆ ಎಂದು ಸುರೇಶ್ ಅವರು ಪ್ರಸ್ತಾಪಿಸಿದರು. ಉತ್ತರಿಸಿದ ನಿರ್ಮಿತಿ ಇಲಾಖೆಯ ಇಂಜಿನಿಯರ್ ಮಾತನಾಡಿ ಎಸ್ಟಿಮೇಟ್ ಪ್ರಕಾರ ನಾವು ಕೆಲಸ ಮಾಡಿದ್ದೇವೆ. ನಮ್ಮ ಕೆಲಸದಲ್ಲಿ ಗಂಟೆ ಲೆಕ್ಕದಲ್ಲಿ ಕೆಲಸ ಮಾಡುವಂತಿಲ್ಲ. ಲೋಕೋಪಯೋಗಿ ಇಲಾಖೆ ದರಪಟ್ಟಿಯಂತೆ ಕೆಲಸ ನಡೆಯುತ್ತದೆ. ನಮ್ಮ ಎಸ್ಟಿಮೇಟ್‌ನಲ್ಲಿ ಇರುವ ಕಾಮಗಾರಿಗಿಂತ ಹೆಚ್ಚುವರಿಯಾಗಿ ಪೈಪ್ ಅಳವಡಿಸಲು ಕೇಳಿಕೊಂಡಂತೆ ಅದನ್ನೂ ಕೂಡಾ ನಾವು ಹಾಕಿ ಕೊಟ್ಟಿದ್ದೇವೆ. ರೂ. ೫.೫೦ಲಕ್ಷ ಅನುದಾನಕ್ಕೆ ಸಂಬಂಧಿಸಿ ಶೇ.೧೮ ಜಿ.ಎಸ್.ಟಿ, ತೆರಿಗೆಗೆ ಹೋಗುತ್ತದೆ ಎಂದರು. ಆಕ್ಷೇಪ ವ್ಯಕ್ತಪಡಿಸಿದ ಸುರೇಶ್ ಅವರು ಕಂಡಿತಾ ಅಷ್ಟು ಹಣ ಖರ್ಚಾಗಿಲ್ಲ. ಈ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ತಾ.ಪಂ ಕಾರ್ಯನಿರ್ವಹಾಕ ಅಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ ಕಾಮಗಾರಿಗೆ ಸಂಬಂಧಿಸಿದ ಎಸ್ಟಿಮೇಟ್ ಕೊಡುವಂತೆ ಇಂಜಿನಿಯರ್‌ಗೆ ಸೂಚಿಸಿದರು. ಕೊರಗ ಸಮುದಾಯದ ಸಂಘಟಕ ಪ್ರಕಾಶ್ ಅವರು ಮಾತನಾಡಿ ಕಾಮಾಗಾರಿಯ ಕುರಿತು ಆಗಿರುವ ಎಸ್ಟಿಮೇಟ್‌ಗೆ ತಜ್ಞರ ಮೂಲಕ ಜನರ ಸಮ್ಮುಖದಲ್ಲಿ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ತಹಶೀಲ್ದಾರ್ ರಮೇಶ್ ಬಾಬು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಕೊರಗ ಸಮುದಾಯ ಸಂಘದ ಅಧ್ಯಕ್ಷ ಬಾಬು, ಸಂಜೀವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.